ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ವಾಹನಗಳನ್ನು ಹಾಸನದಿಂದ ಬೇಲೂರು ಮಾರ್ಗವಾಗಿ ಚಾರ್ಮುಡಿ ಘಾಟ್ ಮಾರ್ಗದಲ್ಲಿ ಸಂಚರಿಸುವಂತೆ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಆದೇಶ ಮಾಡಿದ್ದಾರೆ.

27 Jun 2025
ರಾಜ್ಯ

ಹಾಸನ ಜಿಲ್ಲೆಯ ಸಕಲೇಶಪುರದ ತಾಲ್ಲೂಕಿನ ಮಾರೆನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂಕುಸಿತ ಸಂಭವಿಸಿದೆ. ಸಕಲೇಶಪುರದ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಮಾರ್ಗದಲ್ಲಿ ನಾಲ್ಕು ಕಡೆ ಭೂ ಕುಸಿತವಾಗಿದೆ.

ಮೇಲೆ ಹಾದುಹಾಗುವ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಕಲೇಶಪುರದ ತಾಲ್ಲೂಕಿನ ಮಾರೆನಹಳ್ಳಿ ಬಳಿ ಭೂಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ


ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ವಾಹನಗಳನ್ನು ಹಾಸನದಿಂದ ಬೇಲೂರು ಮಾರ್ಗವಾಗಿ ಚಾರ್ಮುಡಿ ಘಾಟ್ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಆದೇಶ ಹೊರಡಿಸಿದ್ದಾರೆ. ಮಂಗಳೂರಿಂದ ಬರುವ ವಾಹನಗಳು ಸಂಪಾಜೆ ಮತ್ತು ಚಾರ್ಮುಡಿ ಘಾಟ್ ಮಾರ್ಗದಲ್ಲಿ ಸಂಚರಿಸಲಿವೆ ಎಂದು ತಿಳಿಸಿದ್ದಾರೆ.


ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಮಂಗಳೂರನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸುತ್ತದೆ. ಆದರೆ, ಶಿರಾಡಿ ಘಾಟ್ ಬಳಿ ಭೂಕುಸಿತ ಉಂಟಾದ ಕಾರಣ ರಸ್ತೆಯನ್ನು ಬಂದ್ ಮಾಡಲಾಗಿದೆ.


ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ವಾಹನಗಳು ಬೆಂಗಳೂರು-ಹಾಸನ-ಬೇಲೂರು-ಚಾರ್ಮಾಡಿ ಘಾಟ್ ಮೂಲಕ ಹೋಗಬೇಕು. ಮಂಗಳೂರಿನಿಂದ ಬೆಂಗಳೂರಿಗೆ ಬರುವ ವಾಹನಗಳು ಸಂಪಾಜೆ ರಸ್ತೆ ಅಥವಾ ಚಾರ್ಮಾಡಿ ಘಾಟ್ ರಸ್ತೆಯನ್ನು ಬಳಸಬೇಕು ಎಂದು ಡಿಸಿ ಲತಾ ಕುಮಾರಿ ಪ್ರಕಟಣೆ ಹೊರಡಿಸಿದ್ದಾರೆ.




ಭೂಕುಸಿತ ಜನರಲ್ಲಿ ಹೆಚ್ಚಿದ ಆತಂಕ


20 ದಿನಗಳ ಹಿಂದೆ ಶಿರಾಡಿ ಘಾಟ್‌ನ ಮಾರನಹಳ್ಳಿ ಹತ್ತಿರದ ಹೆಗ್ಗದ್ದೆ ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿತ್ತು. ಆದರೆ, ದಿನದಿಂದ ದಿನಕ್ಕೆ ಪ್ರಮಾಣ ಹೆಚ್ಚುತ್ತಿರುವ ಕಾರಣ ವಾಹನ ಸವಾರರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಸಕಲೇಶಪುರದ ಮಾರ್ಗದಲ್ಲಿ ಭೂಕುಸಿತದಿಂದಾಗಿ ಶಿರಾಡಿ ಮಾರ್ಗ ಬಂದ್‌ಮಾಡಲಾಗಿದೆ. ಅದೃಷ್ಟವಶಾತ್‌ ಯಾವುದೇ ಸಾವು-ನೋವು ಸಂಭವಿಸಿಲ್ಲ. ಅಂದಾಜು ನೂರು ಮೀಟರ್ ಉದ್ದದ ಗುಡ್ಡ ಕಡಿದಾಗಿರುವುದರಿಂದ ಪದೇ ಪದೇ ಮಣ್ಣು ಕುಸಿಯುತ್ತಿದೆ ಎಂದು ಹೇಳಲಾಗಿದೆ.

ಜು.10ರವರಗೆ ಬೈಪಾಸ್‌ರಸ್ತೆ ಬಂದ್‌


ನಗರದ ಬೈಪಾಸ್‌ ರಸ್ತೆ ಜು.10ರ ವರಗೆ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಲತಾಕುಮಾರಿ ಆದೇಶಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರ ರಾಜೀವ್‌ ಎಂಜಿನಿಯರಿಂಗ್‌ ಕಾಲೇಜು ಮುಂಭಾಗದ ಬೈಪಾಸ್‌ ರಸ್ತೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿಜೂ.26ರಿಂದ ಜು.10ರವರಗೆ ಎಲ್ಲರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸುವುದು ಸೂಕ್ತ ಎಂದು ಮನಗಂಡು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.


ಬದಲಿ ಮಾರ್ಗವಾಗಿ ಬುಸ್ತೇನಹಳ್ಳಿ ಸರ್ಕಲ್‌, ಡೇರಿ ವೃತ್ತ, ಸಾಲಗಾಮೆ ರಸ್ತೆ, ವಿಜಯನಗರ ಬಡಾವಣೆ, 80 ಅಡಿ ರಸ್ತೆ, ದೇವರಾಯಪಟ್ಟಣ ಮೂಲಕ ಬದಲಿ ಮಾರ್ಗದಲ್ಲಿವಾಹನಗಳು ಸಂಚರಿಸಬಹುದು ಎಂದು ಪ್ರಕಟಣೆಯಲ್ಲಿಮಾಹಿತಿ ನೀಡಿದ್ದಾರೆ.

ಗುಡ್ಡ ಕುಸಿತ ತಡೆಗೆ ವೈಜ್ಞಾನಿಕ ವರದಿ ಸಿದ್ಧ


ರಾಷ್ಟ್ರೀಯ ಹೆದ್ದಾರಿ -75ರಲ್ಲಿಸಕಲೇಶಪುರ ವ್ಯಾಪ್ತಿಯ ರಸ್ತೆ ಬದಿಯಲ್ಲಿಗುಡ್ಡ ಕುಸಿತವಾಗಬಹುದಾದ 12 ಸ್ಥಳಗಳನ್ನು ಗುರುತಿಸಲಾಗಿದೆ. ವೈಜ್ಞಾನಿಕವಾಗಿ ಗುಡ್ಡ ಕುಸಿತ ತಡೆಯಲು ಈಗಾಗಲೇ ವರದಿ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್‌.ಲತಾ ಕುಮಾರಿ ತಿಳಿಸಿದರು. ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿತಡೆಗೋಡೆ ಕುಸಿತವಾಗಿರುವ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿದರು.


''ಮಳೆಗಾಲ ಮುಗಿದ ನಂತರ ಕಾಮಗಾರಿ ಪ್ರಾರಂಭಿಸಿಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಮಳೆಗಾಲ ಎದುರಿಸಲು ಸಂಬಂಧಿಸಿದಂತೆ ಸಭೆಯನ್ನು ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಕಂದಾಯ ಹಾಗೂ ಮತ್ತಿತರರ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ,''ಎಂದು ತಿಳಿಸಿದರು.


ಜಿಲ್ಲಾವಿಪತ್ತು ನಿರ್ವಹಣಾ ಘಟಕ ಅತ್ಯಂತ ಕ್ರಿಯಾಶೀಲವಾಗಿರುವಂತೆ ಹಾಗೂ ಎಂತಹ ಗಂಭೀರ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ,'' ಎಂದರು. ಸಕಲೇಶಪುರ ಎಸಿ ಶೃತಿ, ತಹಸೀಲ್ದಾರ್‌ ಅರವಿಂದ್‌, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.


Recently Updated:

ಧರ್ಮದ ಹೊಲದಲ್ಲಿ ಭತ್ತದ ಫಸಲು  ಅನ್ನವೂ ಧರ್ಮ ನೆಲವೂ ಧರ್ಮ’  ಗಂಗಾವತಿಗೆ ಶ್ರೀಗಳ ದಿವ್ಯ ಸಂದೇಶ   ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಗಳ ಆಶೀರ್ವಚನ..ಧರ್ಮದ ಹೊಲದಲ್ಲಿ ಭತ್ತದ ಫಸಲು ಅನ್ನವೂ ಧರ್ಮ ನೆಲವೂ ಧರ್ಮ’ ಗಂಗಾವತಿಗೆ ಶ್ರೀಗಳ ದಿವ್ಯ ಸಂದೇಶ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಗಳ ಆಶೀರ್ವಚನ..
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ  ಉಡುಪಿ ಪ್ರಥಮ ಸ್ಥಾನ  ಕರ್ನಾಟಕದಲ್ಲಿ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು (ಏಪ್ರಿಲ್‌ 9) ಗುರುವಾರ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಉಡುಪಿ ಪ್ರಥಮ ಸ್ಥಾನ ಕರ್ನಾಟಕದಲ್ಲಿ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು (ಏಪ್ರಿಲ್‌ 9) ಗುರುವಾರ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ.
ಭಾರತೀಯ ಜನತಾ ಪಕ್ಷ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿರುವ ಶ್ರೀನಿವಾಸ ಟಿ. ದಾಸಕರಿಯಪ್ಪ  ಬಿಜೆಪಿಯ ರಾಜ್ಯ  ಮೋರ್ಚಾ ಉಪಾಧ್ಯಕ್ಷರು.  ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಪೈಕಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯ ಸಂಘರ್ಷ ತಾಭಾರತೀಯ ಜನತಾ ಪಕ್ಷ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿರುವ ಶ್ರೀನಿವಾಸ ಟಿ. ದಾಸಕರಿಯಪ್ಪ ಬಿಜೆಪಿಯ ರಾಜ್ಯ ಮೋರ್ಚಾ ಉಪಾಧ್ಯಕ್ಷರು. ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಪೈಕಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯ ಸಂಘರ್ಷ ತಾ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿಯ  ಪಂಚಾಯತ್‌ನ ಹತ್ತಿರದಲ್ಲಿ ಮೊಬೈಲ್ ಟವರ್ ಇದ್ದರೂ, ಅಲ್ಲಿನ ನಿವಾಸಿಗಳು ಮಾತ್ರ ತೀವ್ರ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.!  ಇಲ್ಲಿಯ ಗ್ರಾಮಸ್ಥರು ಚುನಾಯಿತ ಜನಪ್ರತಿನಿಧಿಗಳಿಗೆ ದೂರು ನೀಡಿದರು ಜನಪ್ರತಿನಿಧಿಗಳು ಮಾತ್ರ ಮೌನಗೀತೆ ಸಂಗೀತದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಪಂಚಾಯತ್‌ನ ಹತ್ತಿರದಲ್ಲಿ ಮೊಬೈಲ್ ಟವರ್ ಇದ್ದರೂ, ಅಲ್ಲಿನ ನಿವಾಸಿಗಳು ಮಾತ್ರ ತೀವ್ರ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.! ಇಲ್ಲಿಯ ಗ್ರಾಮಸ್ಥರು ಚುನಾಯಿತ ಜನಪ್ರತಿನಿಧಿಗಳಿಗೆ ದೂರು ನೀಡಿದರು ಜನಪ್ರತಿನಿಧಿಗಳು ಮಾತ್ರ ಮೌನಗೀತೆ ಸಂಗೀತದ
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ತಕ್ಷಣ ಸಮಸ್ಯೆ ಪರಿಹರಿಸದಿದ್ದಲ್ಲಿ ಹೋಟೆಲ್ ಮಾಲೀಕರ ಸಂಘಟನೆಗೆ ಬೆಂಬಲ ನೀಡಿ ಬೀದಿಗಿಳಿದು ಪ್ರತಿಭಟನೆ ಮಾಡಲು ಕರೆ ನೀಡಲಾಗುವುದು,ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ತಕ್ಷಣ ಸಮಸ್ಯೆ ಪರಿಹರಿಸದಿದ್ದಲ್ಲಿ ಹೋಟೆಲ್ ಮಾಲೀಕರ ಸಂಘಟನೆಗೆ ಬೆಂಬಲ ನೀಡಿ ಬೀದಿಗಿಳಿದು ಪ್ರತಿಭಟನೆ ಮಾಡಲು ಕರೆ ನೀಡಲಾಗುವುದು,
ದಕ್ಷಿಣ ಕನ್ನಡ ಉಡುಪಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸ್ ರೇ ಯಂತ್ರ ಹಸ್ತಾಂತರದಕ್ಷಿಣ ಕನ್ನಡ ಉಡುಪಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸ್ ರೇ ಯಂತ್ರ ಹಸ್ತಾಂತರ
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿ ಭೇಟಿ ಪತ್ರಕರ್ತರ ಸೌಲಭ್ಯ ಕುರಿತಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿಯಿಂದ ಮುಖ್ಯಮಂತ್ರಿ ಭೇಟಿ.ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿ ಭೇಟಿ ಪತ್ರಕರ್ತರ ಸೌಲಭ್ಯ ಕುರಿತಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿಯಿಂದ ಮುಖ್ಯಮಂತ್ರಿ ಭೇಟಿ.
ಪೊಲೀಸಪ್ಪನ ಫೇಸ್ಬುಕ್ ಪಿಕ್ಲಾಟದ ಕಾಟ ತಾಳಲಾರದೆ ವಿಧವೆ ಮಹಿಳೆ ವಾಟ್ಸಾಪ್ನಲ್ಲಿ ಡೆತ್ ನೋಟ್ ಬರೆದಿಷ್ಟು ನೇಣು ಹಾಕಿಕೊಂಡು ಆತ್ಮಹತ್ಯೆ.. ಪೊಲೀಸಪ್ಪನ ಫೇಸ್ಬುಕ್ ಪಿಕ್ಲಾಟದ ಕಾಟ ತಾಳಲಾರದೆ ವಿಧವೆ ಮಹಿಳೆ ವಾಟ್ಸಾಪ್ನಲ್ಲಿ ಡೆತ್ ನೋಟ್ ಬರೆದಿಷ್ಟು ನೇಣು ಹಾಕಿಕೊಂಡು ಆತ್ಮಹತ್ಯೆ..
ಬಾಗಲಕೋಟೆ: ಶಿವಾಜಿ ಮಹಾರಾಜರ ಭಾವ ಚಿತ್ರದ ಮೇಲೆ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ ಮಾಡಿದವರ ಮೇಲೆ ಕೇಸ್:8ಮಂದಿ ಬಂಧನ  ಕಲ್ಲು ತೂರಾಟ ಕೇಸ್; ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ  ಘಟನೆ ಪುಂಡರಿಗೆ ತಕ್ಕ ಶಿಕ್ಷೆ ಇಂದ ಸಿದ್ದರಾಮಯ್ಯ.ಬಾಗಲಕೋಟೆ: ಶಿವಾಜಿ ಮಹಾರಾಜರ ಭಾವ ಚಿತ್ರದ ಮೇಲೆ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ ಮಾಡಿದವರ ಮೇಲೆ ಕೇಸ್:8ಮಂದಿ ಬಂಧನ ಕಲ್ಲು ತೂರಾಟ ಕೇಸ್; ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಘಟನೆ ಪುಂಡರಿಗೆ ತಕ್ಕ ಶಿಕ್ಷೆ ಇಂದ ಸಿದ್ದರಾಮಯ್ಯ.