ಪಿಡಿಓ ಪುಟ್ಟಸ್ವಾಮಿ
ಹೊಳೆನರಸೀಪುರ ತಾಲೂಕು ಹಳೆಕೋಟೆ ಹೋಬಳಿ ಕೋಡಿಹಳ್ಳಿ ಗ್ರಾಮಪಂಚಾಯತಿ ಪಿಡಿಓ ಆಗಿದ್ದ ಪುಟ್ಟಸ್ವಾಮಿ ಅವರು ಸತೀಶ್ ಎಂಬವರು ಅಂಗಡಿ ಲೈಸೆನ್ಸ್ ನವೀಕರಣ ಮಾಡಲು ರೂ 5000 ಹಣಕ್ಕೆ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಸತೀಶ್ ಪುಟ್ಟಸ್ವಾಮಿಯವರಿಗೆ 2,000 ಹಣ ನೀಡಿದ್ದು ಉಳಿದ ರೂ.3,000ಗಳನ್ನು ಚನ್ನರಾಯಪಟ್ಟಣ ಹೋಟೆಲ್ ಒಂದರಲ್ಲಿ ಸ್ವೀಕರಿಸುವ ವೇಳೆಗೆ ಲೋಕಾಯುಕ್ತ. ಎಸ್ಪಿ ಸ್ನೇಹ, ಹಾಗೂ ಡಿವೈಎಸ್ಪಿ ಸುರೇಶ್, ಇನ್ಸ್ಪೆಕ್ಟರ್ ಗಳಾದ ಶಿಲ್ಪ, ಚಂದ್ರಶೇಖರ್ ನೇತ್ರದಲ್ಲಿ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ








