ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ತಕ್ಷಣ ಸಮಸ್ಯೆ ಪರಿಹರಿಸದಿದ್ದಲ್ಲಿ ಹೋಟೆಲ್ ಮಾಲೀಕರ ಸಂಘಟನೆಗೆ ಬೆಂಬಲ ನೀಡಿ ಬೀದಿಗಿಳಿದು ಪ್ರತಿಭಟನೆ ಮಾಡಲು ಕರೆ ನೀಡಲಾಗುವುದು,

10 Mar 2026
ರಾಜ್ಯ

ಕರ್ನಾಟಕ ರಾಜ್ಯದಲ್ಲಿ ಹೋಟೆಲ್ ಉದ್ಯಮದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷರಾದ ಡಾ. ರವಿ ಶೆಟ್ಟಿ ಬೈಂದೂರು ಅವರು ಸರ್ಕಾರದ ಗಮನಕ್ಕೆ ಗಂಭೀರ ವಿಷಯವನ್ನು ತರಲು ಮುಂದಾಗಿದ್ದಾರೆ.

ಇತ್ತೀಚೆಗೆ ಇರಾನ್, ಅಮೆರಿಕ ಹಾಗೂ ಇಸ್ರೇಲ್ ರಾಷ್ಟ್ರಗಳ ನಡುವೆ ಉಂಟಾಗಿರುವ ಯುದ್ಧ ಪರಿಸ್ಥಿತಿಯ ಹಿನ್ನೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಮತ್ತು ಅಡುಗೆ ಅನಿಲದ ಪೂರೈಕೆಯಲ್ಲಿ ಅಸ್ಥಿರತೆ ಉಂಟಾಗಿದೆ. ಇದರ ಪರಿಣಾಮವಾಗಿ ಕರ್ನಾಟಕ ರಾಜ್ಯದಲ್ಲೂ ಅಡುಗೆ ಅನಿಲ (LPG), ಪೆಟ್ರೋಲ್ ಮತ್ತು ಡೀಸೆಲ್ ಮುಂತಾದ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಹೋಟೆಲ್ ಉದ್ಯಮದಾರರು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕ ಮುಖಂಡ ಡಾ. ರವಿ ಶೆಟ್ಟಿ ಬೈಂದೂರು ಅವರು, ಕೋವಿಡ್-19 ಮಹಾಮಾರಿಯ ಸಮಯದಲ್ಲಿ ಹೋಟೆಲ್ ಉದ್ಯಮ ಸಂಪೂರ್ಣವಾಗಿ ನೆಲಕಚ್ಚಿತ್ತು. ಈಗಷ್ಟೇ ಆರ್ಥಿಕವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಮತ್ತೊಮ್ಮೆ ಇಂತಹ ಸಂಕಷ್ಟ ಎದುರಾಗಿರುವುದು ಉದ್ಯಮದಾರರ ಪಾಲಿಗೆ ದೊಡ್ಡ ಹೊಡೆತವಾಗಿದೆ ಎಂದು ಹೇಳಿದ್ದಾರೆ.


ಹೋಟೆಲ್ ಉದ್ಯಮದ ಮೇಲೆ ಸಾವಿರಾರು ಕಾರ್ಮಿಕರ ಜೀವನ ಅವಲಂಬಿತವಾಗಿದೆ. ಹೋಟೆಲ್‌ಗಳೇ ಆಧಾರವಾಗಿಸಿಕೊಂಡು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಚಿಕಿತ್ಸೆಗಾಗಿ ನಗರಗಳಿಗೆ ಬಂದಿರುವ ರೋಗಿಗಳು ಮತ್ತು ಸಾಮಾನ್ಯ ಜನರು ಸಹ ಈ ವ್ಯವಸ್ಥೆಯ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅನಿಲದ ಅಭಾವ ಉಂಟಾದರೆ ಹೋಟೆಲ್‌ಗಳು ಕಾರ್ಯನಿರ್ವಹಿಸುವುದು ಹೇಗೆ? ಹೋಟೆಲ್ ಕಾರ್ಮಿಕರು ಬದುಕುವುದು ಹೇಗೆ? ಎಂಬ ಪ್ರಶ್ನೆಯನ್ನು ಅವರು ಉದ್ಧರಿಸಿದ್ದಾರೆ.


ಇನ್ನೂ ಯುದ್ಧ ಆರಂಭವಾಗಿ ಹೆಚ್ಚು ಸಮಯವಾಗಿಲ್ಲದಿದ್ದರೂ ಈಗಲೇ ಅಡುಗೆ ಅನಿಲದ ಪೂರೈಕೆಯಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿರುವುದು ಆತಂಕಕಾರಿ ಸಂಗತಿ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆಯಿದ್ದು, ಇದರಿಂದ ಉದ್ಯಮವನ್ನು ಉಳಿಸಿಕೊಳ್ಳುವುದೇ ಕಷ್ಟವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.


ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದೇಶದಲ್ಲಿ ಸಾಕಷ್ಟು ಅನಿಲ ಮತ್ತು ಇಂಧನದ ಸಂಗ್ರಹ ಇದೆ ಎಂದು ಹೇಳಿಕೊಳ್ಳುತ್ತಿರುವುದಾದರೂ ನೆಲಮಟ್ಟದಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ಬೇರೆ ಚಿತ್ರಣವನ್ನು ತೋರಿಸುತ್ತಿವೆ. ಇದು ನಿಜವಾದ ಅಭಾವವೇ ಅಥವಾ ಕೃತಕವಾಗಿ ಸೃಷ್ಟಿಸಿರುವ ಅಭಾವವೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.


ಈ ಹಿನ್ನೆಲೆಯಲ್ಲಿ ತಕ್ಷಣವೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಪ್ರವೇಶಿಸಿ ಅಡುಗೆ ಅನಿಲ ಹಾಗೂ ಇಂಧನ ಪೂರೈಕೆಯನ್ನು ಸಮರ್ಪಕವಾಗಿ ಮಾಡಬೇಕು. ಇಲ್ಲವಾದಲ್ಲಿ ಹೋಟೆಲ್ ಮಾಲೀಕರು, ಕ್ಯಾಂಡಿಮೆಂಟ್ಸ್, ಬೇಕರಿ ಹಾಗೂ ಗೃಹಪಯೋಗ ಅನಿಲ ಬಳಕೆದಾರರು ಬೀದಿಗಿಳಿಯುವ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.


ಹೋಟೆಲ್ ಸಂಘಟನೆಗಳು ಸಹ ಎಲ್‌ಪಿಜಿ ತೊಂದರೆಯಿಂದಾಗಿ ಹೋಟೆಲ್‌ಗಳನ್ನು ಬಂದ್ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವುದು ಗಮನಾರ್ಹ. ಸರ್ಕಾರವು ನೀಡಲಾದ ಗಡುವಿನೊಳಗೆ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದಲ್ಲಿ ಹೋಟೆಲ್ ಮಾಲೀಕರೊಂದಿಗೆ ಕಾರ್ಮಿಕರು ಸಹ ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕಾರ್ಮಿಕ ಮುಖಂಡ ಡಾ. ರವಿ ಶೆಟ್ಟಿ ಬೈಂದೂರು ತಿಳಿಸಿದ್ದಾರೆ.


– ಡಾ. ರವಿ ಶೆಟ್ಟಿ ಬೈಂದೂರು

ರಾಜ್ಯಾಧ್ಯಕ್ಷರು

ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್

Recently Updated:

ಕುಂದಾಪುರದಲ್ಲಿ  ಸತ್ಯ ಬರೆದಿದ್ದಕ್ಕೆ ಹಲ್ಲೆ ಕನ್ನಡಪ್ರಭ ವರದಿಗಾರನ ಮೇಲೆ ಸರ್ಕಾರಿ  ವೈದ್ಯನ ಅಟ್ಟಹಾಸ.!   ಹಲ್ಲೆ ಮಾಡಿದ್ದ ಸರ್ಕಾರಿ ವೈದ್ಯ ಡಾ. ಮಹೇಂದ್ರ ಶೆಟ್ಟಿ ಸಸ್ಪೆಂಡ್..ಕುಂದಾಪುರದಲ್ಲಿ ಸತ್ಯ ಬರೆದಿದ್ದಕ್ಕೆ ಹಲ್ಲೆ ಕನ್ನಡಪ್ರಭ ವರದಿಗಾರನ ಮೇಲೆ ಸರ್ಕಾರಿ ವೈದ್ಯನ ಅಟ್ಟಹಾಸ.! ಹಲ್ಲೆ ಮಾಡಿದ್ದ ಸರ್ಕಾರಿ ವೈದ್ಯ ಡಾ. ಮಹೇಂದ್ರ ಶೆಟ್ಟಿ ಸಸ್ಪೆಂಡ್..
ಗುಟ್ಕಾ-ಪಾನ್ ಮಸಾಲಾ ನಿಷೇಧವನ್ನು ಎರಡೇ ದಿನಕ್ಕೆ ಹಿಂಪಡೆದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್..ಗುಟ್ಕಾ-ಪಾನ್ ಮಸಾಲಾ ನಿಷೇಧವನ್ನು ಎರಡೇ ದಿನಕ್ಕೆ ಹಿಂಪಡೆದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್..
ಕೊನೆ ಕ್ಷಣದಲ್ಲಿ ಕೈ ಕೊಟ್ಟ ಹೈಕಮಾಂಡ್  ಮಂಕಾಳ್ ಔಟ್, ಎಸ್ ಎಸ್ ಮಲ್ಲಿಕಾರ್ಜುನ ಇನ್.!!  ಹೈಕಮಾಂಡ್ ರಿಂದ ಬಂದಿದ್ದ ಪಟ್ಟಿಯಲ್ಲಿ ಒಂದು ಹೆಸರು ಬದಲಾವಣೆಯಾಗಿದ್ದು, ಮಂಕಾಳ್ ವೈದ್ಯ ಅವರ ಹೆಸರಿನ ಬದಲಾಗಿ ದಾವಣಗೆರೆಯ ಎಸ್ ಎಸ್ ಮಲ್ಲಿಕಾರ್ಜುನ ಅವರ ಹೆಸರನ್ನು ಸೇರಿಸಲಾಗಿದೆ. ಇದೀಗ ಸಚಿವಸ್ಥಾನ ದೊರೆತ ಖುಷಿಯಕೊನೆ ಕ್ಷಣದಲ್ಲಿ ಕೈ ಕೊಟ್ಟ ಹೈಕಮಾಂಡ್ ಮಂಕಾಳ್ ಔಟ್, ಎಸ್ ಎಸ್ ಮಲ್ಲಿಕಾರ್ಜುನ ಇನ್.!! ಹೈಕಮಾಂಡ್ ರಿಂದ ಬಂದಿದ್ದ ಪಟ್ಟಿಯಲ್ಲಿ ಒಂದು ಹೆಸರು ಬದಲಾವಣೆಯಾಗಿದ್ದು, ಮಂಕಾಳ್ ವೈದ್ಯ ಅವರ ಹೆಸರಿನ ಬದಲಾಗಿ ದಾವಣಗೆರೆಯ ಎಸ್ ಎಸ್ ಮಲ್ಲಿಕಾರ್ಜುನ ಅವರ ಹೆಸರನ್ನು ಸೇರಿಸಲಾಗಿದೆ. ಇದೀಗ ಸಚಿವಸ್ಥಾನ ದೊರೆತ ಖುಷಿಯ
ಬೆಂಗಳೂರು:ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಬೇಳೂರು ಗೋಪಾಲಕೃಷ್ಣ.! ರಾಜ್ಯದಲ್ಲಿ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಅಂತಿಮಗೊಂಡಿದ್ದು, ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ರಾಜಭವನದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಂಗಳೂರು:ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಬೇಳೂರು ಗೋಪಾಲಕೃಷ್ಣ.! ರಾಜ್ಯದಲ್ಲಿ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಅಂತಿಮಗೊಂಡಿದ್ದು, ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ರಾಜಭವನದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬೆಂಗಳೂರು, ಆ.3- ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಹೈಕಮಾಂಡ್‌ ಸಮತಿಸಿದ್ದು, ಇಂದು ಸಂಜೆ 4.05 ನಿಮಿಷಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್‌‍ ಹೈಕಮಾಂಡ್‌ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆಗಳ ಸೃಷ್ಟಿಗೆ ನಿರಾಕರಿಸಿದೆ. ಸಂಪುಟದಲ್ಲಿ ಖಾಲಿಯಿರುವ 20 ಸ್ಥಾನಗಳಿಗಬೆಂಗಳೂರು, ಆ.3- ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಹೈಕಮಾಂಡ್‌ ಸಮತಿಸಿದ್ದು, ಇಂದು ಸಂಜೆ 4.05 ನಿಮಿಷಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್‌‍ ಹೈಕಮಾಂಡ್‌ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆಗಳ ಸೃಷ್ಟಿಗೆ ನಿರಾಕರಿಸಿದೆ. ಸಂಪುಟದಲ್ಲಿ ಖಾಲಿಯಿರುವ 20 ಸ್ಥಾನಗಳಿಗ
ಧರ್ಮದ ಹೊಲದಲ್ಲಿ ಭತ್ತದ ಫಸಲು  ಅನ್ನವೂ ಧರ್ಮ ನೆಲವೂ ಧರ್ಮ’  ಗಂಗಾವತಿಗೆ ಶ್ರೀಗಳ ದಿವ್ಯ ಸಂದೇಶ   ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಗಳ ಆಶೀರ್ವಚನ..ಧರ್ಮದ ಹೊಲದಲ್ಲಿ ಭತ್ತದ ಫಸಲು ಅನ್ನವೂ ಧರ್ಮ ನೆಲವೂ ಧರ್ಮ’ ಗಂಗಾವತಿಗೆ ಶ್ರೀಗಳ ದಿವ್ಯ ಸಂದೇಶ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಗಳ ಆಶೀರ್ವಚನ..
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ  ಉಡುಪಿ ಪ್ರಥಮ ಸ್ಥಾನ  ಕರ್ನಾಟಕದಲ್ಲಿ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು (ಏಪ್ರಿಲ್‌ 9) ಗುರುವಾರ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಉಡುಪಿ ಪ್ರಥಮ ಸ್ಥಾನ ಕರ್ನಾಟಕದಲ್ಲಿ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು (ಏಪ್ರಿಲ್‌ 9) ಗುರುವಾರ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ.
ಭಾರತೀಯ ಜನತಾ ಪಕ್ಷ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿರುವ ಶ್ರೀನಿವಾಸ ಟಿ. ದಾಸಕರಿಯಪ್ಪ  ಬಿಜೆಪಿಯ ರಾಜ್ಯ  ಮೋರ್ಚಾ ಉಪಾಧ್ಯಕ್ಷರು.  ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಪೈಕಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯ ಸಂಘರ್ಷ ತಾಭಾರತೀಯ ಜನತಾ ಪಕ್ಷ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿರುವ ಶ್ರೀನಿವಾಸ ಟಿ. ದಾಸಕರಿಯಪ್ಪ ಬಿಜೆಪಿಯ ರಾಜ್ಯ ಮೋರ್ಚಾ ಉಪಾಧ್ಯಕ್ಷರು. ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಪೈಕಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯ ಸಂಘರ್ಷ ತಾ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿಯ  ಪಂಚಾಯತ್‌ನ ಹತ್ತಿರದಲ್ಲಿ ಮೊಬೈಲ್ ಟವರ್ ಇದ್ದರೂ, ಅಲ್ಲಿನ ನಿವಾಸಿಗಳು ಮಾತ್ರ ತೀವ್ರ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.!  ಇಲ್ಲಿಯ ಗ್ರಾಮಸ್ಥರು ಚುನಾಯಿತ ಜನಪ್ರತಿನಿಧಿಗಳಿಗೆ ದೂರು ನೀಡಿದರು ಜನಪ್ರತಿನಿಧಿಗಳು ಮಾತ್ರ ಮೌನಗೀತೆ ಸಂಗೀತದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಪಂಚಾಯತ್‌ನ ಹತ್ತಿರದಲ್ಲಿ ಮೊಬೈಲ್ ಟವರ್ ಇದ್ದರೂ, ಅಲ್ಲಿನ ನಿವಾಸಿಗಳು ಮಾತ್ರ ತೀವ್ರ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.! ಇಲ್ಲಿಯ ಗ್ರಾಮಸ್ಥರು ಚುನಾಯಿತ ಜನಪ್ರತಿನಿಧಿಗಳಿಗೆ ದೂರು ನೀಡಿದರು ಜನಪ್ರತಿನಿಧಿಗಳು ಮಾತ್ರ ಮೌನಗೀತೆ ಸಂಗೀತದ