ಗಂಡನ ಕೊಲೆಗೆ ಪತ್ನಿ ಸ್ಕೆಚ್ 55 ವರ್ಷದ ಮೀನಾಕ್ಷಿ ಮತ್ತು 33 ವರ್ಷದ ಪ್ರದೀಪ್ ಮಧ್ಯೆ ಲವ್ವಿ-ಡವ್ವಿ..!

16 Aug 2025
ರಾಜ್ಯ

ಚಿಕ್ಕಮಂಗಳೂರು ಆಗಸ್ಟ್ 16: ಲವ್ವರ್ ಜೊತೆ ಸೇರಿ ಪತಿಯ ಹತ್ಯೆಗೆ ಸ್ಕೆಚ್ ಹಾಕಿದ್ದ ಪತ್ನಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಅನೈತಿಕ ಸಂಬಂಧದ‌ ಗುಟ್ಟು ಬಯಲಾಗುತ್ತೆ ಎಂದು ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ ಮೀನಾಕ್ಷಿಯನ್ನು ಅರೆಸ್ಟ್ ಮಾಡಲಾಗಿದೆ.ಆ ಮೂಲಕ ಕಡೂರು ಪೊಲೀಸರ ನಿರಂತರ ತನಿಖೆಯಿಂದ ಎರಡು ತಿಂಗಳ ಬಳಿಕ ಹತ್ಯೆ ಕಹಾನಿಯ ಅಸಲಿ ಸತ್ಯ ಬಯಲಾಗಿದೆ.


55 ವರ್ಷದ ಮೀನಾಕ್ಷಿ ಮತ್ತು 33 ವರ್ಷದ ಪ್ರದೀಪ್ ಮಧ್ಯೆ ಲವ್ವಿ-ಡವ್ವಿ ನಡೆದಿತ್ತು. ಈ ಅನೈತಿಕ ಸಂಬಂಧದ‌ ಗುಟ್ಟು ಎಲ್ಲಿ ಬಯಲಾಗುತ್ತೆ ಎಂದು ತನ್ನ ಗಂಡನ ಕೊಲೆಗೆ ಪತ್ನಿ ಸ್ಕೆಚ್ ಹಾಕಿದ್ದಳು. ಪ್ರದೀಪ್ ಜೊತೆಗಿನ ಅನೈತಿಕ ಸಂಬಂಧದ‌ ಬಗ್ಗೆ ಇತ್ತ ಸುಬ್ರಹ್ಮಣ್ಯಗೂ ಅನುಮಾನ ಮೂಡಿತ್ತು. ಹೀಗಾಗಿ ಸುಬ್ರಹ್ಮಣ್ಯನನ್ನು ಹತ್ಯೆ ಮಾಡುವಂತೆ ಪ್ರದೀಪ್ಗೆ ಮೀನಾಕ್ಷಿ ತಿಳಿಸಿದ್ದಳು. ಅವಳ ಸೂಚನೆ ಮೇರೆಗೆ ಸ್ನೇಹಿತರ ಜೊತೆ ಸೇರಿ ಪ್ರದೀಪ್ ಹತ್ಯೆ ಮಾಡಿದ್ದ.


ಪ್ರಿಯಕರ ಪ್ರದೀಪ್‌ಗೆ ಮಾಹಿತಿ ನೀಡಿ ಹತ್ಯೆ ಮಾಡಿಸಿದ್ದ ಮೀನಾಕ್ಷಿ, ಜೂನ್ 2 ರಂದು ಗಂಡ ನಾಪತ್ತೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪ್ರದೀಪ್‌ ತಾಯಿಯ ಮೊಬೈಲ್‌ ಮೂಲಕ ಆತನೊಂದಿಗೆ ಸಂಪರ್ಕದಲ್ಲಿದ್ದಳು. ಪೊಲೀಸರಿಗೆ ಚಿಕ್ಕ ಸುಳಿವು ಸಿಗದಂತೆ ಪ್ರಕರಣದಿಂದ ಮೀನಾಕ್ಷಿ ಬಚಾವ್ ಆಗಿದ್ದಳು. ಆದರೆ ಕಡೂರು ಪೊಲೀಸರ ನಿರಂತರ ತನಿಖೆಯಿಂದ ಜೂನ್ ‌8 ರಂದು ಆರೋಪಿಗಳಾದ ಪ್ರದೀಪ್, ಸಿದ್ದೇಶ್ ಮತ್ತು ವಿಶ್ವಾಸ್ ಎಂಬಾತನನ್ನು ಬಂಧಿಸಿದ್ದರು.


ಅನೈತಿಕ ಸಂಬಂಧಕ್ಕೆ ‌ಅಡ್ಡಿ, ಹಣದ ವ್ಯವಹಾರಕ್ಕೆ ‌ಹತ್ಯೆ ಮಾಡಲಾಗಿದೆ ಎಂದು ಆರೋಪಿ ಪ್ರದೀಪ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದ. ಆರೋಪಿಗಳ ಬಂಧನವಾಗಿ 2 ತಿಂಗಳ ಬಳಿಕ ಇದೀಗ ಕಡೂರು ಪೊಲೀಸರಿಂದ ಮೀನಾಕ್ಷಿ ಬಂಧನವಾಗಿದೆ.


ಹತ್ಯೆ ಮಾಡಿ ಸುಟ್ಟು ಹಾಕಿದ್ದ ಆರೋಪಿಗಳು


ಮೇ 31ರ ರಾತ್ರಿ ಕಡೂರು ಪಟ್ಟಣದ ಕೋಟೆ ಬಡಾವಣೆಯ ನಿವಾಸಿ ಪತಿ ಸುಬ್ರಹ್ಮಣ್ಯರ ಬರ್ಬರ ಹತ್ಯೆ ನಡೆದಿತ್ತು. ಚಿಕ್ಕಮಗಳೂರಿಗೆ ಕರೆತಂದು ದಾರಿ ಮಧ್ಯೆ ಹತ್ಯೆ ಮಾಡಿ ಪ್ರದೀಪ್ ಸುಟ್ಟು ಹಾಕಿದ್ದ. ಮೃತ ಸುಬ್ರಹ್ಮಣ್ಯ ಟೈಲರ್ ಕೆಲಸ ಮಾಡುತ್ತಿದ್ದರು. ಆತನ ಶಾಪ್ ಕೀ ಯಿಂದ ಹತ್ಯೆ ರಹಸ್ಯ ಸಂಪೂರ್ಣ ಹೊರಬಂದಿತ್ತು.

Recently Updated:

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿಯ  ಪಂಚಾಯತ್‌ನ ಹತ್ತಿರದಲ್ಲಿ ಮೊಬೈಲ್ ಟವರ್ ಇದ್ದರೂ, ಅಲ್ಲಿನ ನಿವಾಸಿಗಳು ಮಾತ್ರ ತೀವ್ರ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.!  ಇಲ್ಲಿಯ ಗ್ರಾಮಸ್ಥರು ಚುನಾಯಿತ ಜನಪ್ರತಿನಿಧಿಗಳಿಗೆ ದೂರು ನೀಡಿದರು ಜನಪ್ರತಿನಿಧಿಗಳು ಮಾತ್ರ ಮೌನಗೀತೆ ಸಂಗೀತದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಪಂಚಾಯತ್‌ನ ಹತ್ತಿರದಲ್ಲಿ ಮೊಬೈಲ್ ಟವರ್ ಇದ್ದರೂ, ಅಲ್ಲಿನ ನಿವಾಸಿಗಳು ಮಾತ್ರ ತೀವ್ರ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.! ಇಲ್ಲಿಯ ಗ್ರಾಮಸ್ಥರು ಚುನಾಯಿತ ಜನಪ್ರತಿನಿಧಿಗಳಿಗೆ ದೂರು ನೀಡಿದರು ಜನಪ್ರತಿನಿಧಿಗಳು ಮಾತ್ರ ಮೌನಗೀತೆ ಸಂಗೀತದ
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ತಕ್ಷಣ ಸಮಸ್ಯೆ ಪರಿಹರಿಸದಿದ್ದಲ್ಲಿ ಹೋಟೆಲ್ ಮಾಲೀಕರ ಸಂಘಟನೆಗೆ ಬೆಂಬಲ ನೀಡಿ ಬೀದಿಗಿಳಿದು ಪ್ರತಿಭಟನೆ ಮಾಡಲು ಕರೆ ನೀಡಲಾಗುವುದು,ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ತಕ್ಷಣ ಸಮಸ್ಯೆ ಪರಿಹರಿಸದಿದ್ದಲ್ಲಿ ಹೋಟೆಲ್ ಮಾಲೀಕರ ಸಂಘಟನೆಗೆ ಬೆಂಬಲ ನೀಡಿ ಬೀದಿಗಿಳಿದು ಪ್ರತಿಭಟನೆ ಮಾಡಲು ಕರೆ ನೀಡಲಾಗುವುದು,
ದಕ್ಷಿಣ ಕನ್ನಡ ಉಡುಪಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸ್ ರೇ ಯಂತ್ರ ಹಸ್ತಾಂತರದಕ್ಷಿಣ ಕನ್ನಡ ಉಡುಪಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸ್ ರೇ ಯಂತ್ರ ಹಸ್ತಾಂತರ
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿ ಭೇಟಿ ಪತ್ರಕರ್ತರ ಸೌಲಭ್ಯ ಕುರಿತಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿಯಿಂದ ಮುಖ್ಯಮಂತ್ರಿ ಭೇಟಿ.ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿ ಭೇಟಿ ಪತ್ರಕರ್ತರ ಸೌಲಭ್ಯ ಕುರಿತಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿಯಿಂದ ಮುಖ್ಯಮಂತ್ರಿ ಭೇಟಿ.
ಪೊಲೀಸಪ್ಪನ ಫೇಸ್ಬುಕ್ ಪಿಕ್ಲಾಟದ ಕಾಟ ತಾಳಲಾರದೆ ವಿಧವೆ ಮಹಿಳೆ ವಾಟ್ಸಾಪ್ನಲ್ಲಿ ಡೆತ್ ನೋಟ್ ಬರೆದಿಷ್ಟು ನೇಣು ಹಾಕಿಕೊಂಡು ಆತ್ಮಹತ್ಯೆ.. ಪೊಲೀಸಪ್ಪನ ಫೇಸ್ಬುಕ್ ಪಿಕ್ಲಾಟದ ಕಾಟ ತಾಳಲಾರದೆ ವಿಧವೆ ಮಹಿಳೆ ವಾಟ್ಸಾಪ್ನಲ್ಲಿ ಡೆತ್ ನೋಟ್ ಬರೆದಿಷ್ಟು ನೇಣು ಹಾಕಿಕೊಂಡು ಆತ್ಮಹತ್ಯೆ..
ಬಾಗಲಕೋಟೆ: ಶಿವಾಜಿ ಮಹಾರಾಜರ ಭಾವ ಚಿತ್ರದ ಮೇಲೆ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ ಮಾಡಿದವರ ಮೇಲೆ ಕೇಸ್:8ಮಂದಿ ಬಂಧನ  ಕಲ್ಲು ತೂರಾಟ ಕೇಸ್; ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ  ಘಟನೆ ಪುಂಡರಿಗೆ ತಕ್ಕ ಶಿಕ್ಷೆ ಇಂದ ಸಿದ್ದರಾಮಯ್ಯ.ಬಾಗಲಕೋಟೆ: ಶಿವಾಜಿ ಮಹಾರಾಜರ ಭಾವ ಚಿತ್ರದ ಮೇಲೆ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ ಮಾಡಿದವರ ಮೇಲೆ ಕೇಸ್:8ಮಂದಿ ಬಂಧನ ಕಲ್ಲು ತೂರಾಟ ಕೇಸ್; ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಘಟನೆ ಪುಂಡರಿಗೆ ತಕ್ಕ ಶಿಕ್ಷೆ ಇಂದ ಸಿದ್ದರಾಮಯ್ಯ.
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ( ರಿ.,) ಬೆಂಗಳೂರು    ವಿಧಾನಸೌಧ ಮಾಧ್ಯಮದವರಿಗೆ ಪ್ರವೇಶ ನಿಬಂಧ-  ರಾಜ್ಯ ಸಂಘ ಖಂಡನೆ ಮಾಧ್ಯಮದವರ ಮೇಲೆ ವಿಧಾನಸೌಧ ಪ್ರವೇಶಿಸಲು ನಿಷೇಧ ಹೇರುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಬ್ಬಾಳಿಕೆ.ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ( ರಿ.,) ಬೆಂಗಳೂರು ವಿಧಾನಸೌಧ ಮಾಧ್ಯಮದವರಿಗೆ ಪ್ರವೇಶ ನಿಬಂಧ- ರಾಜ್ಯ ಸಂಘ ಖಂಡನೆ ಮಾಧ್ಯಮದವರ ಮೇಲೆ ವಿಧಾನಸೌಧ ಪ್ರವೇಶಿಸಲು ನಿಷೇಧ ಹೇರುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಬ್ಬಾಳಿಕೆ.
ಸಾರಿಗೆ ನೌಕರರ ಮುಷ್ಕರ. ಕರ್ನಾಟಕ ಸಾರಿಗೆ ನೌಕರರು ತಮ್ಮ 38 ತಿಂಗಳ ಹಿಂಬಾಕಿಯನ್ನು ಮತ್ತು 2024 ರಿಂದ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಇಂದು ಬೆಂಗಳೂರು ಚಲೋ ನಡೆಸುತ್ತಿದ್ದಾರೆ. ಆದರೆ, ಬೆಂಗಳೂರು ಚಲೋಗೆ ರಾಜ್ಯದ ನಾನಾ ಭಾಗಗಳಿಂದ ಸಾರಿಗೆ ನೌಕರರು ಆಗಮಿಸಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜಮಾಯಸಾರಿಗೆ ನೌಕರರ ಮುಷ್ಕರ. ಕರ್ನಾಟಕ ಸಾರಿಗೆ ನೌಕರರು ತಮ್ಮ 38 ತಿಂಗಳ ಹಿಂಬಾಕಿಯನ್ನು ಮತ್ತು 2024 ರಿಂದ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಇಂದು ಬೆಂಗಳೂರು ಚಲೋ ನಡೆಸುತ್ತಿದ್ದಾರೆ. ಆದರೆ, ಬೆಂಗಳೂರು ಚಲೋಗೆ ರಾಜ್ಯದ ನಾನಾ ಭಾಗಗಳಿಂದ ಸಾರಿಗೆ ನೌಕರರು ಆಗಮಿಸಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜಮಾಯ
ಸಿದ್ದರಾಮಯ್ಯ  ಪಾಪರ್‌ ಮುಖ್ಯಮಂತ್ರಿಯಾಗಿದ್ದಾರೆ  ಸರ್ಕಾರ ದಿವಾಳಿಯಾಗಿದ್ದರೂ ಶಾಸಕರ ಫಾರಿನ್‌ ಟೂರ್‌. ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶಸಿದ್ದರಾಮಯ್ಯ ಪಾಪರ್‌ ಮುಖ್ಯಮಂತ್ರಿಯಾಗಿದ್ದಾರೆ ಸರ್ಕಾರ ದಿವಾಳಿಯಾಗಿದ್ದರೂ ಶಾಸಕರ ಫಾರಿನ್‌ ಟೂರ್‌. ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ