ಕರ್ನಾಟಕದ ಬಿಜೆಪಿ ಉಸ್ತುವಾರಿ ಮತ್ತು ರಾಜ್ಯಸಭಾ ಸದಸ್ಯ ರಾಧಾ ಮೋಹನದಾಸ್ ಅಗರ್ವಾಲ್ ಅವರು, ಕರ್ನಾಟಕದಲ್ಲಿ ವಕ್ಫ್ ಆಸ್ತಿಯನ್ನು ಕಬಳಿಸಿದ ರಾಜಕಾರಣಿಗಳ ಹೆಸರನ್ನು ಸದನದ ಕಲಾಪದ ವೇಳೆ ಬಹಿರಂಗಪಡಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ ಉಂಟುಮಾಡಿದ್ದಾರೆ.
ರಾಧಾ ಮೋಹನದಾಸ್ ಅಗರ್ವಾಲ್ ಅವರು, 'ಕರ್ನಾಟಕದಲ್ಲಿ ಯಾವ ರಾಜಕಾರಣಿಗಳು ವಕ್ಫ್ ಆಸ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ವಿವರ ಜಂಟಿ ಸಂಸದೀಯ ಸಮಿತಿಯ (JPC) ವರದಿಯಲ್ಲಿ ಉಲ್ಲೇಖವಾಗಿದೆ. ಈ ವರದಿಯನ್ನು ನಾನು ಇಲ್ಲಿ ಓದುತ್ತೇನೆ. ವಕ್ಫ್ ಸಂಪತ್ತನ್ನು ಲೂಟಿ ಮಾಡಿದವರ ಹೆಸರನ್ನು ಬಹಿರಂಗಪಡಿಸುವುದು ನನ್ನ ಕರ್ತವ್ಯವೂ ಹೌದು' ಎಂದು ಸದನದಲ್ಲಿ ಘೋಷಿಸಿದರು. ಆದರೆ, ಒಂದು ಪ್ರಮುಖ ಹೆಸರನ್ನು ಉಲ್ಲೇಖಿಸುವುದನ್ನು ಅವರು ತಪ್ಪಿಸಿದರು. 'ಆ ಹೆಸರನ್ನು ಸದನದ ಮರ್ಯಾದೆಗಾಗಿ ಬಹಿರಂಗಪಡಿಸುವುದಿಲ್ಲ. ಆದರೆ, ಆ ಹೆಸರು ಯಾರದ್ದು ಎಂಬುದು ಎಲ್ಲರಿಗೂ ಗೊತ್ತು' ಎಂದು ಅವರು ಹೇಳಿದರು.
ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ವಕ್ಫ್ (ತಿದ್ದುಪಡಿ) ಮಸೂದೆ 2025 ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಈಗಾಗಲೇ ಲೋಕಸಭೆಯಲ್ಲಿ ಪಾಸ್ ಆಗಿರುವ ಈ ಮಸೂದೆ, ರಾಷ್ಟ್ರಪತಿಗಳ ಅಂಕಿತದೊಂದಿಗೆ ಅಧಿಕೃತ ಕಾನೂನಾಗಿ ಜಾರಿಗೆ ಬರಲಿದೆ. ಈ ಮಸೂದೆಯು ವಕ್ಫ್ ಆಸ್ತಿಗಳ ದುರುಪಯೋಗವನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ.
ಕರ್ನಾಟಕದಲ್ಲಿ ವಕ್ಫ್ ಆಸ್ತಿಯನ್ನು ಹಲವು ರಾಜಕಾರಣಿಗಳು, ಮುಖ್ಯವಾಗಿ ಕಾಂಗ್ರೆಸ್ ನಾಯಕರು ಕಬಳಿಸಿದ್ದಾರೆ ಎಂದು ಬಿಜೆಪಿ ಸತತವಾಗಿ ಆರೋಪಿಸುತ್ತಿದೆ. ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೂ ಗಂಭೀರ ಆರೋಪ ಮಾಡಿದ್ದಾರೆ.
ಅಗರ್ವಾಲ್ ಹೇಳಿದ ಹೆಸರುಗಳಿವು
1.ಖಮರುಲ್ ಇಸ್ಲಾಂ-ಮಾಜಿ ಸಚಿವ
2.ನರಸಿಂಗರಾವ್ ಸೂರ್ಯವಂಶಿ-ಮಾಜಿ ಸಂಸದ
3. ಸಿ.ಎಂ ಇಬ್ರಾಹಿಂ-ಮಾಜಿ ಕೇಂದ್ರ ಸಚಿವ
4.ಕೆ.ರೆಹಮಾನ್ ಖಾನ್ - ಮಾಜಿ ಕೇಂದ್ರ ಸಚಿವ
5. ಅಬ್ದುಲ್ಲಾ ಸಲೀಂ - ವಕ್ಸ್ ಬೋರ್ಡ್ ಅಧಿಕಾರಿ
6.ಎನ್.ಎ.ಹ್ಯಾರೀಸ್ - ಹಾಲೀ ಶಾಸಕ
7.ಎಂ.ಎ.ಖಲೀದ್ - ಮಾಜಿ ಅಧಿಕಾರಿ
8.ಮಮ್ರಾಜ್ ಅಹದ್ ಖಾನ್ - ಅಧ್ಯಕ್ಷರು
9.ಮೊಹಮದ್ ಸನುಲ್ಲಾ - ಐಎಎಸ್ ಅಧಿಕಾರಿ
10. ಸಿಂಧೂಸ್ ಗಿರಿ - ಮಾಜಿ ಸಚಿವ
11.ಎಂ.ಎಸ್. ಬಾಷಾ - ಐಎಂಐಸಿಎಸ್
12.ಖನೀಜಾ ಫಾತಿಮಾ - ಹಾಲೀ ಶಾಸಕಿ
13.ಸಿ.ಕೆ.ಜಾಫರ್ ಷರೀಫ್ - ಮಾಜಿಕೇಂದ್ರಸಚಿವ.








