ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಮಾಜಿ ಮುಖ್ಯಮಂತ್ರಿ ಪುತ್ರ ಪರ್ವೇಶ್ ವರ್ಮಾ..!

08 Feb 2025
ದೇಶ

ದೆಹಲಿ ವಿಧಾನ ಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಎಎಪಿ ಸೋಲು ಕಂಡಿದೆ. 3 ಸಲ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರು 4000ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.ಇದರೊಂದಿಗೆ ಜೇಂಟ್ ಕಿಲ್ಲರ್ ಎನಿಸಿಕೊಂಡಿರುವ ಪರ್ವೇಶ್‌ ವರ್ಮಾ ಯಾರು, ಅವರು ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗುತ್ತಾರಾ ಎಂಬ ಕುತೂಹಲ ಸದ್ಯ ಹೆಚ್ಚಾಗಿದೆ.



ಪರ್ವೇಶ್ ವರ್ಮಾ ಯಾರು, ಮುಂದಿನ ದೆಹಲಿ ಸಿಎಂ ಆಗ್ತಾರಾ.?


ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಪರ್ವೇಶ್ ವರ್ಮಾ, ಆಮ್ ಆದ್ಮಿ ಪಾರ್ಟಿ ನಾಯಕ, 3 ಸಲ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು 4089 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅವರ ಈ ದೊಡ್ಡ ಗೆಲುವಿನ ಕಾರಣ, ದೆಹಲಿಯ ಮುಖ್ಯಮಂತ್ರಿ ಸ್ಥಾನಕ್ಕೆ ಅವರ ಹೆಸರು ಪೈಪೋಟಿಗೆ ಬರುವಂತಾಗಿದೆ.


ಪರ್ವೇಶ್ ವರ್ಮಾ ಅವರು ಕಳೆದ 10 ವರ್ಷಗಳಿಂದ ಪಶ್ಚಿಮ ದೆಹಲಿಯ ಸಂಸದರಾಗಿದ್ದರು. ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ. ದೆಹಲಿಯ ರಾಜಕಾರಣದಲ್ಲಿ ರಾಜಕೀಯವಾಗಿ ಅತ್ಯಂತ ಪ್ರಭಾವಿ ಮನೆತನದ ಹಿನ್ನೆಲೆ ಇರುವಂಥವರು. ಪರ್ವೇಶ್ ವರ್ಮಾ ಅವರ ಚಿಕ್ಕಪ್ಪ ಆಜಾದ್‌ ಸಿಂಗ್ ಉತ್ತರ ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಆಗಿದ್ದವು. 2013ರ ವಿಧಾನ ಸಭಾ ಚುನಾವಣೆಯಲ್ಲಿ ಪರ್ವೇಶ್ ವರ್ಮಾ ಕಾಂಗ್ರೆಸ್ ಅಭ್ಯರ್ಥಿ ಯೋಗಾನಂದ ಶಾಸ್ತ್ರಿ (ಅಂದಿನ ವಿಧಾನ ಸಭಾ ಸ್ಪೀಕರ್‌) ಅವರನ್ನು ಸೋಲಿಸಿದ್ದರು. ಅದಾಗಿ 2014ರಲ್ಲಿ ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದು ಲೋಕಸಭೆ ಪ್ರವೇಶಿಸಿದ್ದರು. 2019ರಲ್ಲಿ ಇದೇ ಕ್ಷೇತ್ರದಿಂದ ಲೋಕಸಭೆಗೆ ಮರು ಆಯ್ಕೆಯಾದರು. ಹತ್ತು ವರ್ಷ ಸಂಸದರಾಗಿದ್ದ ಪರ್ವೇಶ್ ಶರ್ಮಾ ಅವರು ನಗರಾಭಿವೃದ್ಧಿ ಹಾಗೂ ಎಂಪಿಗಳ ವೇತನ ಮತ್ತು ಭತ್ಯೆಗೆ ಸಂಬಂಧಿಸಿದ ಸ್ಥಾಯೀ ಸಮಿತಿಯ ಸದಸ್ಯರಾಗಿದ್ದರು. 2025ರ ವಿಧಾನ ಸಭಾ ಚುನಾವಣೆಗೆ ತಯಾರಿ ನಡೆಸಿದ್ದ ಕಾರಣ 2024ರಲ್ಲಿ ಲೋಕಸಭೆಗೆ ಸ್ಪರ್ಧಿಸಿರಲಿಲ್ಲ.


ಅರವಿಂದ್ ಕೇಜ್ರಿವಾಲ್ ಅವರನ್ನು ಟೆರರಿಸ್ಟ್ ಎಂದಿದ್ದ ಪರ್ವೇಶ್‌


ತುಸು ಪ್ರಚೋದನಕಾರಿ ಮನೋಭಾವದ ಪರ್ವೇಶ್‌ ವರ್ಮಾ ಅವರು 2020ರ ಚುನಾವಣೆ ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಅವರನ್ನು ಟೆರರಿಸ್ಟ್ ಎಂದು ಕರೆದಿದ್ದರು. ಈ ದ್ವೇಷ ಭಾಷಣಕ್ಕಾಗಿ ಪರ್ವೇಶ್ ವರ್ಮಾ ಅವರನ್ನು ಚುನಾವಣಾ ಆಯೋಗ ಒಂದು ದಿನದ ಮಟ್ಟಿಗೆ ಪ್ರಚಾರ ಮಾಡದಂತೆ ನಿರ್ಬಂಧಿಸಿತ್ತು.


2019ರ ಲೋಕಸಭಾ ಚುನಾವಣೆಯಲ್ಲಿ ಪರ್ವೇಶ್ ವರ್ಮಾ ಅವರು ಕಾಂಗ್ರೆಸ್ ಅಭ್ಯರ್ಥಿ ಮಹಾಬಲ್ ಮಿಶ್ರಾ ಅವರನ್ನು 5,78,486 ಮತಗಳ ಅಂತರದಲ್ಲಿ ಸೋಲಿಸಿದ್ದರು. ಇದು ದೆಹಲಿಯಲ್ಲಿ ಅತಿದೊಡ್ಡ ಅಂತರದ ಗೆಲುವು. ಪರ್ವೇಶ್ ವರ್ಮಾ ಅವರ ಈ ಹಿಂದಿನ ದಾಖಲೆಯನ್ನೂ ಮುರಿದಿದ್ದರು.


1977ರ ನವೆಂಬರ್ 7 ರಂದು ಜನಿಸಿದ ಅವರು ಆರ್‌ಕೆ ಪುರಂನ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಪಡೆದರು. ದೆಹಲಿ ವಿವಿಯ ಕಿರೋರಿ ಮಲ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿದರು. ಫೋರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಮಾಡಿದರು.


ಪರ್ವೇಶ್‌ ವರ್ಮಾ ಅವರು ಮಧ್ಯಪ್ರದೇಶದ ಬಿಜೆಪಿ ನಾಯಕ,ಕೇಂದ್ರದ ಮಾಜಿ ಸಚಿವ ವಿಕ್ರಮ್ ವರ್ಮಾ ಅವರ ಪುತ್ರಿ ಸ್ವಾತಿ ಸಿಂಗ್ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಸನ್ನಿಧಿ ಸಿಂಗ್‌, ಪ್ರಿಶಾ ಸಿಂಗ್ ಎಂಬ ಇಬ್ಬರು ಪುತ್ರಿಯರು ಹಾಗೂ ಶಿವೆನ್ ಸಿಂಗ್ ಎಂಬ ಪುತ್ರ ಇದ್ದಾನೆ.

Recently Updated:

ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಜೈಲು ಫಿಕ್ಸ್ : ದೇಶಾದ್ಯಂತ 'ಎಸ್ಮಾ' ಜಾರಿಗೊಳಿಸಿದ ಕೇಂದ್ರ ಸರ್ಕಾರ ವಿತರಣೆ ವಿಳಂಬ ಮತ್ತು ಪೂರೈಕೆ ಕೊರತೆ ಬಗ್ಗೆ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಸಂಗ್ರಹಿಸಿ ಇಡುವುದನ್ನು ತಡೆಯಲು ಮತ್ತು ಸಮಾನವಾಗಿ ವಿತರಣೆ ನಡೆಯಲು ಸರ್ಕಾರವು   ಕಾಯ್ದೆ ಅಡಿಯಲ್ಲಿ ಕಠಿಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಜೈಲು ಫಿಕ್ಸ್ : ದೇಶಾದ್ಯಂತ 'ಎಸ್ಮಾ' ಜಾರಿಗೊಳಿಸಿದ ಕೇಂದ್ರ ಸರ್ಕಾರ ವಿತರಣೆ ವಿಳಂಬ ಮತ್ತು ಪೂರೈಕೆ ಕೊರತೆ ಬಗ್ಗೆ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಸಂಗ್ರಹಿಸಿ ಇಡುವುದನ್ನು ತಡೆಯಲು ಮತ್ತು ಸಮಾನವಾಗಿ ವಿತರಣೆ ನಡೆಯಲು ಸರ್ಕಾರವು ಕಾಯ್ದೆ ಅಡಿಯಲ್ಲಿ ಕಠಿ
ಉಚಿತ ಕೊಡುಗೆಗಳು ಖಂಡಿಸಿದ  ಸುಪ್ರೀಂ ಕೋರ್ಟ್ ಶ್ರೀಮಂತ ಮತ್ತು ಬಡವರ ನಡುವೆ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಉಚಿತವಾಗಿ ನೀಡುವುದು ತಪ್ಪು ಎಂದು ಎಚ್ಚರಿಸಿದ ನ್ಯಾಯ ಪೀಠ.ಉಚಿತ ಕೊಡುಗೆಗಳು ಖಂಡಿಸಿದ ಸುಪ್ರೀಂ ಕೋರ್ಟ್ ಶ್ರೀಮಂತ ಮತ್ತು ಬಡವರ ನಡುವೆ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಉಚಿತವಾಗಿ ನೀಡುವುದು ತಪ್ಪು ಎಂದು ಎಚ್ಚರಿಸಿದ ನ್ಯಾಯ ಪೀಠ.
ಕಾಶ್ಮೀರದ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾನನ್ನು ಭಾರತೀಯ ಸೇನೆಯ ವಿಶೇಷ ಪಡೆಗಳು ಇಂದು ಎನ್ಕೌಂಟರ್. ಕಾಶ್ಮೀರದ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾನನ್ನು ಭಾರತೀಯ ಸೇನೆಯ ವಿಶೇಷ ಪಡೆಗಳು ಇಂದು ಎನ್ಕೌಂಟರ್.
ಹೊಸದಿಲ್ಲಿ ಜು25: ಆರೆಸಸ್ ಮತ್ತು ಮುಸ್ಲಿಂ ಧರ್ಮಗುರುಗಳು ಸಭೆ. ಹೊಸದಿಲ್ಲಿ ಜು25: ಆರೆಸಸ್ ಮತ್ತು ಮುಸ್ಲಿಂ ಧರ್ಮಗುರುಗಳು ಸಭೆ.
ಆಪರೇಷನ್ ಸಿಂಧೂರ್' ಪಾಕಿಸ್ತಾನದ 100 ಕಿಮೀ ಒಳಗೆ ನುಗ್ಗಿ ಹೊಡೆದು ಸೇಡು ತೀರಿಸಿಕೊಂಡ ಭಾರತೀಯ ಸೇನೆ..!! `ಆಪರೇಷನ್ ಸಿಂಧೂರ್' ಪಾಕಿಸ್ತಾನದ 100 ಕಿಮೀ ಒಳಗೆ ನುಗ್ಗಿ ಹೊಡೆದು ಸೇಡು ತೀರಿಸಿಕೊಂಡ ಭಾರತೀಯ ಸೇನೆ..!! `
ಮೋಹನ್ ಭಾಗವತ್, ಮುಸ್ಲಿಮರು ಸಹ RSS ಸೇರಬಹುದು, ಆದ್ರೆ ಕಂಡೀಷನ್ ಅಪ್ಲೈ.ಮೋಹನ್ ಭಾಗವತ್, ಮುಸ್ಲಿಮರು ಸಹ RSS ಸೇರಬಹುದು, ಆದ್ರೆ ಕಂಡೀಷನ್ ಅಪ್ಲೈ.
ಕರ್ನಾಟಕದಲ್ಲಿ ವಕ್ಫ್ ಆಸ್ತಿಯನ್ನು ಕಬಳಿಸಿದ ರಾಜಕಾರಣಿಗಳ ಹೆಸರನ್ನು ಸದನದ ಕಲಾಪದ ವೇಳೆ ಬಹಿರಂಗಪಡಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ..! ಕರ್ನಾಟಕದಲ್ಲಿ ವಕ್ಫ್ ಆಸ್ತಿಯನ್ನು ಕಬಳಿಸಿದ ರಾಜಕಾರಣಿಗಳ ಹೆಸರನ್ನು ಸದನದ ಕಲಾಪದ ವೇಳೆ ಬಹಿರಂಗಪಡಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ..!
3000 ರೂ. ಪಾವತಿಸಿದ್ರೆ  ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಅಥವಾ ಜೀವಿತಾವಧಿ ಟೋಲ್ ಪಾಸ್‌ಗಳ ಫ್ರೀ3000 ರೂ. ಪಾವತಿಸಿದ್ರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಅಥವಾ ಜೀವಿತಾವಧಿ ಟೋಲ್ ಪಾಸ್‌ಗಳ ಫ್ರೀ
ಬಜೆಟ್ನಲ್ಲಿ ಬಂಪರ್ ಗಿಫ್ಟ್; 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇಲ್ಲ; ಇಲ್ಲಿದೆ ಟ್ಯಾಕ್ಸ್ ಸ್ಲಾಬ್ ದರಗಳ ಪಟ್ಟಿ.ಬಜೆಟ್ನಲ್ಲಿ ಬಂಪರ್ ಗಿಫ್ಟ್; 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇಲ್ಲ; ಇಲ್ಲಿದೆ ಟ್ಯಾಕ್ಸ್ ಸ್ಲಾಬ್ ದರಗಳ ಪಟ್ಟಿ.