ಮೋಹನ್ ಭಾಗವತ್, ಮುಸ್ಲಿಮರು ಸಹ RSS ಸೇರಬಹುದು, ಆದ್ರೆ ಕಂಡೀಷನ್ ಅಪ್ಲೈ.

08 Apr 2025
ದೇಶ

ನವದೆಹಲಿ: ಭಾರತದಲ್ಲಿ ಮುಸ್ಲಿಮರ ಸಹ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸೇರ್ಪಡೆಯಾಗಬಹುದು ಎಂದು ಆರ್‌ಎಸ್‌ಎಸ್ ಪ್ರಮುಖ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ. ಆದ್ರೆ ಮುಸ್ಲಿಮರ ಸೇರ್ಪಡೆಗೆ ಮೋಹನ್ ಭಾಗವತ್ ಷರತ್ತು ವಿಧಿಸಿದ್ದಾರೆ. ಸದ್ಯ ಮೋಹನ್ ಭಾಗವತ್ ನಾಲ್ಕು ದಿನಗಳ ವಾರಾಣಾಸಿಯ ಪ್ರವಾಸದಲ್ಲಿದ್ದು, ಏಪ್ರಿಲ್ 6ರ ಭಾನುವಾರದಂದು ಯಾರೆಲ್ಲಾ RSS ಸೇರ್ಪಡೆ ಆಗಬಹುದು ಪ್ರಶ್ನೆಗೆ ಮೋಹನ್ ಭಾಗವತ್ ಉತ್ತರಿಸಿದರು.ವಾರಾಣಾಸಿಯ ಲಜಪತ್‌ ನಗರದಲ್ಲಿರುವ ಆರ್‌ಎಸ್‌ಎಸ್ ಶಾಖೆಗೆ ಭೇಟಿ ನೀಡಿದ ಮೋಹನ್ ಭಾಗವತ್, ಜಾತಿ ತಾರತಮ್ಯ, ಪರಿಸರ ರಕ್ಷಣೆ, ಆರ್ಥಿಕ ಚೇತರಿಕೆ ಮತ್ತು ಸದೃಢ ಸಮಾಜ ನಿರ್ಮಾಣಕ್ಕೆ ಸಂಬಂಧಿಸಿದ ಕುರಿತು ಸವಿವರವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಓರ್ವ ಕಾರ್ಯಕರ್ತ, ಮುಸ್ಲಿಮರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರನ್ನಾಗಿ ಮಾಡಿಕೊಳ್ಳಬಹುದೇ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಮೋಹನ್ ಭಾಗವತ್, ಹೌದು. ಆದ್ರೆ ಒಂದು ಕಂಡೀಷನ್ ಎಂದು ಹೇಳಿದರು.


ಕಂಡೀಷನ್ ಅಪ್ಲೈ

ನಮ್ಮ ಆರ್‌ಎಸ್‌ಎಸ್ ಶಾಖೆಗೆ ಭಾರತದ ಎಲ್ಲಾ ವಾಸಿಗಳಿಗೆ ಸ್ವಾಗತ. ಆದರೆ ಶಾಖೆ ಸೇರ್ಪಡೆಯಾಗುವ ಪ್ರತಿಯೊಬ್ಬ ವ್ಯಕ್ತಿ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಹೇಳಲು ಯಾವುದೇ ಕಾರಣಕ್ಕೂ ಹಿಂದೇಟು ಹಾಕಿರಬಾರದು ಮತ್ತು ಕೇಸರಿ ಧ್ವಜವನ್ನು ಗೌರವಿಸಬೇಕು ಎಂದು ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ. ಸದ್ಯ ಮೋಹನ್ ಭಾಗವತ್ ನೀಡಿದ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.


ತೆರೆದಿರುತ್ತೆ ಆರ್‌ಎಸ್‌ಎಸ್ ಶಾಖೆಯ ಬಾಗಿಲು

ಭಾರತದಲ್ಲಿ ವಿವಿಧ ಧರ್ಮಗಳನ್ನು ಪಾಲಿಸುವ ಜನರಿದ್ದು, ಆದ್ರೆ ಎಲ್ಲರ ಸಂಸ್ಕೃತಿ ಒಂದೇ ಆಗಿರುತ್ತದೆ. ಭಾರತದ ಎಲ್ಲಾ ಧರ್ಮಗಳು, ಪಂಗಡಗಳು ಮತ್ತು ಜಾತಿಗಳ ಜನರನ್ನು ಪ್ರತಿಯೊಂದು ಶಾಖೆಯಲ್ಲೂ ಸ್ವಾಗತಿಸಲಾಗುತ್ತದೆ. ಹಾಗಾಗಿ ಎಲ್ಲಾ ಧರ್ಮದವರಿಗೂ ಆರ್‌ಎಸ್‌ಎಸ್ ಶಾಖೆಯ ಬಾಗಿಲು ತೆರೆದಿರುತ್ತದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಲಜಪತ್ ನಗರ ಆರ್‌ಎಸ್‌ಎಸ್ ಶಾಖೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ಏಪ್ರಿಲ್ 5ರಂದು ಕಾಶಿಯ ವೇದ ವಿದ್ವಾಂಸರನ್ನು ಭೇಟಿಯಾಗಿ ಮೋಹನ್ ಭಾಗವತ್ ಸಭೆ ನಡೆಸಿದ್ದರು. ಭಾರತವನ್ನು ವಿಶ್ವ ಗುರು (ವಿಶ್ವ ನಾಯಕ) ಮಾಡುವ ಗುರಿಯನ್ನು ಸಾಧಿಸಲು ಶ್ರಮಿಸುವ ಬಗ್ಗೆ ವಿದ್ವಾಂಸರೊಂದಿಗೆ ಮೋಹನ್ ಭಾಗವತ್ ಚರ್ಚೆ ನಡೆಸಿದ್ದರು.

Recently Updated:

ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಜೈಲು ಫಿಕ್ಸ್ : ದೇಶಾದ್ಯಂತ 'ಎಸ್ಮಾ' ಜಾರಿಗೊಳಿಸಿದ ಕೇಂದ್ರ ಸರ್ಕಾರ ವಿತರಣೆ ವಿಳಂಬ ಮತ್ತು ಪೂರೈಕೆ ಕೊರತೆ ಬಗ್ಗೆ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಸಂಗ್ರಹಿಸಿ ಇಡುವುದನ್ನು ತಡೆಯಲು ಮತ್ತು ಸಮಾನವಾಗಿ ವಿತರಣೆ ನಡೆಯಲು ಸರ್ಕಾರವು   ಕಾಯ್ದೆ ಅಡಿಯಲ್ಲಿ ಕಠಿಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಜೈಲು ಫಿಕ್ಸ್ : ದೇಶಾದ್ಯಂತ 'ಎಸ್ಮಾ' ಜಾರಿಗೊಳಿಸಿದ ಕೇಂದ್ರ ಸರ್ಕಾರ ವಿತರಣೆ ವಿಳಂಬ ಮತ್ತು ಪೂರೈಕೆ ಕೊರತೆ ಬಗ್ಗೆ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಸಂಗ್ರಹಿಸಿ ಇಡುವುದನ್ನು ತಡೆಯಲು ಮತ್ತು ಸಮಾನವಾಗಿ ವಿತರಣೆ ನಡೆಯಲು ಸರ್ಕಾರವು ಕಾಯ್ದೆ ಅಡಿಯಲ್ಲಿ ಕಠಿ
ಉಚಿತ ಕೊಡುಗೆಗಳು ಖಂಡಿಸಿದ  ಸುಪ್ರೀಂ ಕೋರ್ಟ್ ಶ್ರೀಮಂತ ಮತ್ತು ಬಡವರ ನಡುವೆ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಉಚಿತವಾಗಿ ನೀಡುವುದು ತಪ್ಪು ಎಂದು ಎಚ್ಚರಿಸಿದ ನ್ಯಾಯ ಪೀಠ.ಉಚಿತ ಕೊಡುಗೆಗಳು ಖಂಡಿಸಿದ ಸುಪ್ರೀಂ ಕೋರ್ಟ್ ಶ್ರೀಮಂತ ಮತ್ತು ಬಡವರ ನಡುವೆ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಉಚಿತವಾಗಿ ನೀಡುವುದು ತಪ್ಪು ಎಂದು ಎಚ್ಚರಿಸಿದ ನ್ಯಾಯ ಪೀಠ.
ಕಾಶ್ಮೀರದ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾನನ್ನು ಭಾರತೀಯ ಸೇನೆಯ ವಿಶೇಷ ಪಡೆಗಳು ಇಂದು ಎನ್ಕೌಂಟರ್. ಕಾಶ್ಮೀರದ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾನನ್ನು ಭಾರತೀಯ ಸೇನೆಯ ವಿಶೇಷ ಪಡೆಗಳು ಇಂದು ಎನ್ಕೌಂಟರ್.
ಹೊಸದಿಲ್ಲಿ ಜು25: ಆರೆಸಸ್ ಮತ್ತು ಮುಸ್ಲಿಂ ಧರ್ಮಗುರುಗಳು ಸಭೆ. ಹೊಸದಿಲ್ಲಿ ಜು25: ಆರೆಸಸ್ ಮತ್ತು ಮುಸ್ಲಿಂ ಧರ್ಮಗುರುಗಳು ಸಭೆ.
ಆಪರೇಷನ್ ಸಿಂಧೂರ್' ಪಾಕಿಸ್ತಾನದ 100 ಕಿಮೀ ಒಳಗೆ ನುಗ್ಗಿ ಹೊಡೆದು ಸೇಡು ತೀರಿಸಿಕೊಂಡ ಭಾರತೀಯ ಸೇನೆ..!! `ಆಪರೇಷನ್ ಸಿಂಧೂರ್' ಪಾಕಿಸ್ತಾನದ 100 ಕಿಮೀ ಒಳಗೆ ನುಗ್ಗಿ ಹೊಡೆದು ಸೇಡು ತೀರಿಸಿಕೊಂಡ ಭಾರತೀಯ ಸೇನೆ..!! `
ಕರ್ನಾಟಕದಲ್ಲಿ ವಕ್ಫ್ ಆಸ್ತಿಯನ್ನು ಕಬಳಿಸಿದ ರಾಜಕಾರಣಿಗಳ ಹೆಸರನ್ನು ಸದನದ ಕಲಾಪದ ವೇಳೆ ಬಹಿರಂಗಪಡಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ..! ಕರ್ನಾಟಕದಲ್ಲಿ ವಕ್ಫ್ ಆಸ್ತಿಯನ್ನು ಕಬಳಿಸಿದ ರಾಜಕಾರಣಿಗಳ ಹೆಸರನ್ನು ಸದನದ ಕಲಾಪದ ವೇಳೆ ಬಹಿರಂಗಪಡಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ..!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಮಾಜಿ ಮುಖ್ಯಮಂತ್ರಿ  ಪುತ್ರ ಪರ್ವೇಶ್ ವರ್ಮಾ..!ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಮಾಜಿ ಮುಖ್ಯಮಂತ್ರಿ ಪುತ್ರ ಪರ್ವೇಶ್ ವರ್ಮಾ..!
3000 ರೂ. ಪಾವತಿಸಿದ್ರೆ  ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಅಥವಾ ಜೀವಿತಾವಧಿ ಟೋಲ್ ಪಾಸ್‌ಗಳ ಫ್ರೀ3000 ರೂ. ಪಾವತಿಸಿದ್ರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಅಥವಾ ಜೀವಿತಾವಧಿ ಟೋಲ್ ಪಾಸ್‌ಗಳ ಫ್ರೀ
ಬಜೆಟ್ನಲ್ಲಿ ಬಂಪರ್ ಗಿಫ್ಟ್; 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇಲ್ಲ; ಇಲ್ಲಿದೆ ಟ್ಯಾಕ್ಸ್ ಸ್ಲಾಬ್ ದರಗಳ ಪಟ್ಟಿ.ಬಜೆಟ್ನಲ್ಲಿ ಬಂಪರ್ ಗಿಫ್ಟ್; 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇಲ್ಲ; ಇಲ್ಲಿದೆ ಟ್ಯಾಕ್ಸ್ ಸ್ಲಾಬ್ ದರಗಳ ಪಟ್ಟಿ.