ಬಜೆಟ್ನಲ್ಲಿ ಬಂಪರ್ ಗಿಫ್ಟ್; 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇಲ್ಲ; ಇಲ್ಲಿದೆ ಟ್ಯಾಕ್ಸ್ ಸ್ಲಾಬ್ ದರಗಳ ಪಟ್ಟಿ.

01 Feb 2025
ದೇಶ

ನವದೆಹಲಿ, ಫೆಬ್ರುವರಿ 1: ನಿರೀಕ್ಷೆಯಂತೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎಂಟನೇ ಬಜೆಟ್ನಲ್ಲಿ 2025) ಮಧ್ಯಮವರ್ಗದವರ ಬಹುಬೇಡಿಕೆಯನ್ನು ನೆರವೇರಿಸಿದ್ದಾರೆ. ಆದಾಯ ತೆರಿಗೆಯ ಹೊರೆಯನ್ನು ಇಳಿಸಿದ್ದಾರೆ. ಅದರಂತೆ 12 ಲಕ್ಷ ರೂವರೆಗಿನ ಆದಾಯ ಹೊಂದಿರುವವರು ಯಾವುದೇ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ.



ಹೊಸ ಟ್ಯಾಕ್ಸ್ ಸ್ಲಾಬ್ ದರಗಳು


0-4 ಲಕ್ಷ ರೂ: ತೆರಿಗೆ ಇಲ್ಲ

4-8 ಲಕ್ಷ ರೂ: ಶೇ. 5 ತೆರಿಗೆ

8-12 ಲಕ್ಷ ರೂ: ಶೇ. 10 ತೆರಿಗೆ

12-16 ಲಕ್ಷ ರೂ: ಶೇ. 15 ತೆರಿಗೆ

16-20 ಲಕ್ಷ ರೂ: ಶೇ. 20 ತೆರಿಗೆ

20-24 ಲಕ್ಷ ರೂ: ಶೇ. 25 ತೆರಿಗೆ

24 ಲಕ್ಷ ರೂ ಮೇಲ್ಪಟ್ಟು: ಶೇ. 30 ತೆರಿಗೆ


ಇಲ್ಲಿ ಸೆಕ್ಷನ್ 87ಎ ಅಡಿಯಲ್ಲಿ ರಿಬೇಟ್ ನೀಡಲಾಗುತ್ತದೆ. ಇದನ್ನು ಈ ಬಾರಿ ಮತ್ತಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ 7 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ನೀಡಲಾಗುತ್ತಿತ್ತು. ಈಗ ಈ ಪ್ರಕಾರ 12 ಲಕ್ಷ ರುವರೆಗಿನ ಆದಾಯಕ್ಕೆ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ.


ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ ಆದಾಯದಲ್ಲಿ ಟ್ಯಾಕ್ಸ್ ಡಿಡಕ್ಷನ್ ಮಿತಿಯನ್ನು 1 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಅಂದರೆ, ಠೇವಣಿಗಳಿಂದ ವರ್ಷಕ್ಕೆ ಸಿಗುವ 1 ಲಕ್ಷ ರೂವರೆಗಿನ ಬಡ್ಡಿ ಆದಾಯಕ್ಕೆ ಟ್ಯಾಕ್ಸ್ ವಿನಾಯಿತಿ ಸಿಗುತ್ತದೆ.


ಬಾಡಿಗೆಗಳಿಂದ ಬರುವ ಆದಾಯಕ್ಕೆ ವಾರ್ಷಿಕ ಟಿಡಿಎಸ್ ಮಿತಿಯನ್ನು 2.4 ಲಕ್ಷ ರೂನಿಂದ 6 ಲಕ್ಷ ರೂಗೆ ಏರಿಸಲಾಗಿದೆ.



ನಿರ್ಮಲಾ ಸೀತಾರಾಮನ್ ಬಜೆಟ್ಲ್ಲಿ ಯಾವುದು ಅಗ್ಗ- ಯಾವುದು ದುಬಾರಿ?, ಇಲ್ಲಿದೆ ಪೂರ್ಣ ಪಟ್ಟಿ


ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26 ರ ಹಣಕಾಸು ವರ್ಷಕ್ಕೆ ಬಜೆಟ್ 2025) ಮಂಡಿಸಿದ್ದಾರೆ. ಸತತ 8ನೇ ಬಾರಿಗೆ ಬಜೆಟ್ ಮಂಡಿಸಿದ ಹಣಕಾಸು ಸಚಿವರು, ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ನಮ್ಮದು ಎಂದು ಹೇಳಿದರು.


ಇದು ಮಹತ್ವಾಕಾಂಕ್ಷೆಗಳ ಬಜೆಟ್ ಎಂದು ಬಣ್ಣಿಸಿದ ನಿರ್ಮಲಾ ಸೀತಾರಾಮನ್, ಎಲ್ಲ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಿದೆ ಎಂದರು. ಹಾಗಾದರೆ ಬಜೆಟ್‌ನಲ್ಲಿ ಯಾವ ವಸ್ತುಗಳು ಅಗ್ಗವಾಗಿವೆ ಮತ್ತು ದುಬಾರಿ ವಸ್ತುಗಳ ಪಟ್ಟಿಯಲ್ಲಿ ಏನೆಲ್ಲ ಸೇರಿವೆ ಎಂಬುದನ್ನು ನೋಡೋಣ.


ಯಾವುದು ಅಗ್ಗವಾಗಲಿದೆ?:


ಮೊಬೈಲ್ ಫೋನ್: ಮೊಬೈಲ್ ಫೋನ್‌ಗಳ ಆಮದು ಸುಂಕವನ್ನು ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ, ಇದರಿಂದಾಗಿ ಮೊಬೈಲ್ ಫೋನ್‌ಗಳ ಬೆಲೆ ಅಗ್ಗವಾಗಬಹುದು.


ಚರ್ಮದ ಉತ್ಪನ್ನಗಳು: ಚರ್ಮ ಮತ್ತು ಚರ್ಮದ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಾಗಿದೆ, ಇದು ಅವುಗಳ ಬೆಲೆಗಳನ್ನು ಕಡಿಮೆ ಮಾಡಬಹುದು.


ಬ್ಯಾಟರಿ ಕಾರು: ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ, ಇದರಿಂದಾಗಿ ಬ್ಯಾಟರಿ ಕಾರುಗಳು ಅಗ್ಗವಾಗಬಹುದು.

ವೈದ್ಯಕೀಯ ಉಪಕರಣಗಳು: ಜೀವ ಉಳಿಸುವ ವೈದ್ಯಕೀಯ ಉಪಕರಣಗಳ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡುವ ಪ್ರಸ್ತಾಪವಿದೆ, ಅದು ಅವುಗಳ ಬೆಲೆಗಳನ್ನು ಕಡಿಮೆ ಮಾಡುತ್ತದೆ.


36 ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆ ಔಷಧಗಳು: ಯೂನಿಯನ್ ಬಜೆಟ್ 2025 ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮತ್ತು ಅಪರೂಪದ ಕಾಯಿಲೆಗಳಿಗೆ ಬಳಸಲಾಗುವ 36 ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲು ಪ್ರಸ್ತಾಪಿಸಿದೆ. ಈ ಕ್ರಮವು ರೋಗಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ.


37 ಹೆಚ್ಚಿನ ಔಷಧಗಳಿಗೆ ವಿನಾಯಿತಿ: ಹೆಚ್ಚುವರಿಯಾಗಿ 37 ಔಷಧಗಳನ್ನು BCD ಯಿಂದ ವಿನಾಯಿತಿ ನೀಡಲಾಗುತ್ತದೆ, ಇದು ಆರೋಗ್ಯ ಕ್ಷೇತ್ರಕ್ಕೆ ಮತ್ತಷ್ಟು ಪರಿಹಾರವನ್ನು ನೀಡುತ್ತದೆ. ಈ ವಿನಾಯಿತಿಗಳು ಎಲ್ಲರಿಗೂ ಕೈಗೆಟುಕುವ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಪ್ರಯತ್ನಗಳಿಗೆ ಅನುಗುಣವಾಗಿವೆ.


ಭಾರತದಲ್ಲಿ ತಯಾರಿಸಿದ ಬಟ್ಟೆಗಳು: ಭಾರತೀಯ ನಿರ್ಮಿತ ಬಟ್ಟೆಗಳ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಇದು ದೇಶೀಯ ಜವಳಿ ಉದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಬಟ್ಟೆಗಳು ಅಗ್ಗವಾಗುತ್ತವೆ.


ಹಡಗು ನಿರ್ಮಾಣದ ಕಚ್ಚಾ ಸಾಮಗ್ರಿಗಳು: ಮುಂದಿನ 10 ವರ್ಷಗಳವರೆಗೆ ಹಡಗುಗಳನ್ನು ತಯಾರಿಸುವ ಕಚ್ಚಾ ಸಾಮಗ್ರಿಗಳನ್ನು BCD ಯಿಂದ ವಿನಾಯಿತಿ ನೀಡಲಾಗುತ್ತದೆ, ಇದು ಸಾಗರ ವಲಯದಲ್ಲಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಸುಗಮಗೊಳಿಸುತ್ತದೆ.

ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ: 2024 ರ ಬಜೆಟ್‌ನಲ್ಲಿ, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು 6% ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ. ಆದರೆ, ಬಜೆಟ್‌ಗೂ ಮುನ್ನ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಈ ಬಾರಿ ಸರ್ಕಾರ ಬಜೆಟ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಯಾವುದು ದುಬಾರಿಯಾಗಲಿದೆ?:


ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ ಮೇಲಿನ ತೆರಿಗೆ ಹೆಚ್ಚಾಗಲಿದೆ. ಪ್ಲಾಸ್ಟಿಕ್‌ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕ ಶೇ. 25ರಷ್ಟು ಹೆಚ್ಚಿಸಲಾಗಿದೆ. ಟೆಲಿಕಾಂ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕ ಶೇ.10-ಶೇ.15ರಷ್ಟು ಹೆಚ್ಚಳ. ಹಾಗೆಯೆ ನೇಯ್ಗೆಯ ಬಟ್ಟೆಗಳು ದುಬಾರಿ ಆಗಲಿದೆ. ಆಲ್ಕೋಹಾಲ್‌-ತಂಬಾಕು- ಸಿಗರೇಟ್‌ ಬೆಲೆ ಕೂಡ ಅಧಿಕವಾಗಲಿದೆ. ಆಮದು ಸುಂಕ, ವಿಮಾನ ಇಂಧನ, ವಿಮಾನ ಟಿಕೆಟ್‌ ದರ ಏರಿಕೆ ಆಗಲಿದೆ. ಸಂವಾದಾತ್ಮಕ ಫ್ಲಾಟ್-ಪ್ಯಾನಲ್ ಡಿಸ್ಪ್ಲೇgಳ ಮೇಲಿನ ಕಸ್ಟಮ್ಸ್ ಸುಂಕಗಳ ಹೆಚ್ಚಳವು ಕೆಲವು ತಾಂತ್ರಿಕ ಉತ್ಪನ್ನಗಳಿಗೆ ಹೆಚ್ಚಿನ ಬೆಲೆಗಳಿಗೆ ಕಾರಣವಾಗಬಹುದು, ಇದು ಟೆಕ್ ವಲಯದಲ್ಲಿ ವ್ಯಾಪಾರಗಳು ಮತ್ತು ಗ್ರಾಹಕರ ಮೇಲೆ ಪರಿಣಾಮ ಬೀರಬಹುದು.

Recently Updated:

ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಜೈಲು ಫಿಕ್ಸ್ : ದೇಶಾದ್ಯಂತ 'ಎಸ್ಮಾ' ಜಾರಿಗೊಳಿಸಿದ ಕೇಂದ್ರ ಸರ್ಕಾರ ವಿತರಣೆ ವಿಳಂಬ ಮತ್ತು ಪೂರೈಕೆ ಕೊರತೆ ಬಗ್ಗೆ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಸಂಗ್ರಹಿಸಿ ಇಡುವುದನ್ನು ತಡೆಯಲು ಮತ್ತು ಸಮಾನವಾಗಿ ವಿತರಣೆ ನಡೆಯಲು ಸರ್ಕಾರವು   ಕಾಯ್ದೆ ಅಡಿಯಲ್ಲಿ ಕಠಿಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಜೈಲು ಫಿಕ್ಸ್ : ದೇಶಾದ್ಯಂತ 'ಎಸ್ಮಾ' ಜಾರಿಗೊಳಿಸಿದ ಕೇಂದ್ರ ಸರ್ಕಾರ ವಿತರಣೆ ವಿಳಂಬ ಮತ್ತು ಪೂರೈಕೆ ಕೊರತೆ ಬಗ್ಗೆ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಸಂಗ್ರಹಿಸಿ ಇಡುವುದನ್ನು ತಡೆಯಲು ಮತ್ತು ಸಮಾನವಾಗಿ ವಿತರಣೆ ನಡೆಯಲು ಸರ್ಕಾರವು ಕಾಯ್ದೆ ಅಡಿಯಲ್ಲಿ ಕಠಿ
ಉಚಿತ ಕೊಡುಗೆಗಳು ಖಂಡಿಸಿದ  ಸುಪ್ರೀಂ ಕೋರ್ಟ್ ಶ್ರೀಮಂತ ಮತ್ತು ಬಡವರ ನಡುವೆ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಉಚಿತವಾಗಿ ನೀಡುವುದು ತಪ್ಪು ಎಂದು ಎಚ್ಚರಿಸಿದ ನ್ಯಾಯ ಪೀಠ.ಉಚಿತ ಕೊಡುಗೆಗಳು ಖಂಡಿಸಿದ ಸುಪ್ರೀಂ ಕೋರ್ಟ್ ಶ್ರೀಮಂತ ಮತ್ತು ಬಡವರ ನಡುವೆ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಉಚಿತವಾಗಿ ನೀಡುವುದು ತಪ್ಪು ಎಂದು ಎಚ್ಚರಿಸಿದ ನ್ಯಾಯ ಪೀಠ.
ಕಾಶ್ಮೀರದ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾನನ್ನು ಭಾರತೀಯ ಸೇನೆಯ ವಿಶೇಷ ಪಡೆಗಳು ಇಂದು ಎನ್ಕೌಂಟರ್. ಕಾಶ್ಮೀರದ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾನನ್ನು ಭಾರತೀಯ ಸೇನೆಯ ವಿಶೇಷ ಪಡೆಗಳು ಇಂದು ಎನ್ಕೌಂಟರ್.
ಹೊಸದಿಲ್ಲಿ ಜು25: ಆರೆಸಸ್ ಮತ್ತು ಮುಸ್ಲಿಂ ಧರ್ಮಗುರುಗಳು ಸಭೆ. ಹೊಸದಿಲ್ಲಿ ಜು25: ಆರೆಸಸ್ ಮತ್ತು ಮುಸ್ಲಿಂ ಧರ್ಮಗುರುಗಳು ಸಭೆ.
ಆಪರೇಷನ್ ಸಿಂಧೂರ್' ಪಾಕಿಸ್ತಾನದ 100 ಕಿಮೀ ಒಳಗೆ ನುಗ್ಗಿ ಹೊಡೆದು ಸೇಡು ತೀರಿಸಿಕೊಂಡ ಭಾರತೀಯ ಸೇನೆ..!! `ಆಪರೇಷನ್ ಸಿಂಧೂರ್' ಪಾಕಿಸ್ತಾನದ 100 ಕಿಮೀ ಒಳಗೆ ನುಗ್ಗಿ ಹೊಡೆದು ಸೇಡು ತೀರಿಸಿಕೊಂಡ ಭಾರತೀಯ ಸೇನೆ..!! `
ಮೋಹನ್ ಭಾಗವತ್, ಮುಸ್ಲಿಮರು ಸಹ RSS ಸೇರಬಹುದು, ಆದ್ರೆ ಕಂಡೀಷನ್ ಅಪ್ಲೈ.ಮೋಹನ್ ಭಾಗವತ್, ಮುಸ್ಲಿಮರು ಸಹ RSS ಸೇರಬಹುದು, ಆದ್ರೆ ಕಂಡೀಷನ್ ಅಪ್ಲೈ.
ಕರ್ನಾಟಕದಲ್ಲಿ ವಕ್ಫ್ ಆಸ್ತಿಯನ್ನು ಕಬಳಿಸಿದ ರಾಜಕಾರಣಿಗಳ ಹೆಸರನ್ನು ಸದನದ ಕಲಾಪದ ವೇಳೆ ಬಹಿರಂಗಪಡಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ..! ಕರ್ನಾಟಕದಲ್ಲಿ ವಕ್ಫ್ ಆಸ್ತಿಯನ್ನು ಕಬಳಿಸಿದ ರಾಜಕಾರಣಿಗಳ ಹೆಸರನ್ನು ಸದನದ ಕಲಾಪದ ವೇಳೆ ಬಹಿರಂಗಪಡಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ..!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಮಾಜಿ ಮುಖ್ಯಮಂತ್ರಿ  ಪುತ್ರ ಪರ್ವೇಶ್ ವರ್ಮಾ..!ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಮಾಜಿ ಮುಖ್ಯಮಂತ್ರಿ ಪುತ್ರ ಪರ್ವೇಶ್ ವರ್ಮಾ..!
3000 ರೂ. ಪಾವತಿಸಿದ್ರೆ  ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಅಥವಾ ಜೀವಿತಾವಧಿ ಟೋಲ್ ಪಾಸ್‌ಗಳ ಫ್ರೀ3000 ರೂ. ಪಾವತಿಸಿದ್ರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಅಥವಾ ಜೀವಿತಾವಧಿ ಟೋಲ್ ಪಾಸ್‌ಗಳ ಫ್ರೀ