ಕುಲಾಲ ಸಮಾಜ ಸುಧಾರಕ ಸಂಘ ಮೆಕ್ಕೆಕಟ್ಟು ಕೋಟ ಹೋಬಳಿ ಇದರ ವಾರ್ಷಿಕೋತ್ಸವದ ಅಂಗವಾಗಿ ಕುಂಭ ಸಂಭ್ರಮ..

30 Apr 2025
ಕರಾವಳಿ

ಕುಲಾಲ ಸಮಾಜ ಸುಧಾರಕ ಸಂಘ ಮೆಕ್ಕೆಕಟ್ಟು ಕೋಟ ಹೋಬಳಿ ಇದರ ವಾರ್ಷಿಕೋತ್ಸವದ ಅಂಗವಾಗಿ ಕುಂಭ ಸಂಭ್ರಮ 2025 ಕುಲಾಲ ಸಮುದಾಯದ ಸಮಾವೇಶವು ಮಂದಾರ್ತಿ ಶೇಡಿಕೊಡ್ಲಿನ ದುರ್ಗಾ ಗಾರ್ಡನ್ ಅಲ್ಲಿ ವಿಜೃಂಭಣೆಯಿಂದ ಸಂಪನ್ನವಾಯಿತು.

ಶ್ರೀಯುತ ಲಕ್ಷ್ಮಣ್ ಕೆ.ಎ ಜನ್ಸಾಲೆಯವರು ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ,ಸಂಘಟನೆಯಲ್ಲಿ ಹಿರಿಯರ ಮಾರ್ಗದರ್ಶನ ಮತ್ತು ಕಿರಿಯರ ಹೊಸ ಹೊಳಹುಗಳಿದ್ದಲ್ಲಿ ಇಂತಹ ಸಂಭ್ರಮ ಖಂಡಿತ ಸಾಧ್ಯ ಎಂದು ಹೇಳಿ ಸಂಘಟನೆಗೆ ಶುಭ ಹಾರೈಸಿದರು.ಮತ್ತೋರ್ವ ಮುಖ್ಯ ಅತಿಥಿಗಳಾದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿಯವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ,ಕುಲಾಲ ಸಮುದಾಯದ ಸಮುದಾಯ ಭವನ ನಿರ್ಮಾಣ ಮಾಡುವಲ್ಲಿ ಸರಕಾರದ ಗಮನ ಸೆಳೆಯುವುದಾಗಿಯೂ ಭರವಸೆ ನೀಡಿದರು ಹಾಗೂ ಇಂತಹ ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸಿರುವುದನ್ನು ಶ್ಲಾಘಿಸಿದರು‌.

ಮತ್ತೋರ್ವ ಮುಖ್ಯ ಅತಿಥಿ ಜಯರತ್ನ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕರಾದ ಶ್ರೀ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ಮಾತನಾಡುತ್ತಾ,ಸಂಘಟನೆ ಬಲಿಷ್ಠವಾಗಲು ಸಂಘಟಿತ ಯುವಶಕ್ತಿ ಅತೀ ಅಗತ್ಯವಿದೆ.ಇಲ್ಲೊಂದು ಬಲಿಷ್ಠ ಯುವ ಸಂಘವಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಹಿರಿಯ ಸಂಘಟಕರನ್ನು ಹಾಗೂ ಪೂರ್ವಾಧ್ಯಕ್ಷರನ್ನು ಅಭಿನಂದಿಸಿ ಗೌರವಿಸಲಾಯ್ತು.ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಪದಪ್ರದಾನ ಮಾಡಲಾಯ್ತು.

ಈ ಸಂದರ್ಭದಲ್ಲಿ ವಿಠ್ಠಲ್ ಶೆಟ್ಟಿ ಶೇಡಿಕೊಡ್ಲು,ನಾರಾಯಣ ಕುಲಾಲ್ ಹೆಬ್ರಿ,ಮಯೂರ್ ಉಳ್ಳಾಲ್,ಜಯರಾಮ ಕುಲಾಲ್,ಮಂಜುನಾಥ್ ಕುಲಾಲ್ ಜನ್ಸಾಲೆ,ರಮೇಶ್ ಕುಲಾಲ್ ಹೆಂಗವಳ್ಳಿ,ಶೇಖರ್ ಕುಲಾಲ್ ಶಿರಿಯಾರ,ರಾಘವೇಂದ್ರ ಕುಲಾಲ್ ಹೆಮ್ಮಾಡಿ,ಕಾಳು ಕುಲಾಲ್,ಸುರೇಂದ್ರ ಕುಲಾಲ್ ವರಂಗ,ವೆಂಕಟೇಶ್ ಕುಲಾಲ್,ವೆಂಕಪ್ಪ ಕುಲಾಲ್,ಅಶೋಕ್ ಕುಲಾಲ್ ನಡೂರು,ಶಶಿಕುಲಾಲ್ ಶಿರೂರು,ಸಂಕೇತ್ ಕುಲಾಲ್ ನೈಲಾಡಿ,ಕೃಷ್ಣ ಕುಲಾಲ್ ನಡೂರು,ಅನಿತಾ ನಾರಾಯಣ ಕುಲಾಲ್ ಉಪಸ್ಖಿತರಿದ್ದರು‌.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭಾಸ್ಕರ್ ಕುಲಾಲ್ ಕಂಪ ವಹಿಸಿದ್ದರು.ಗಣೇಶ್ ಕುಲಾಲ್ ಮೊಳಹಳ್ಳಿ ಪ್ರಾರ್ಥಿಸಿದರು‌.ಶ್ರೀಮತಿ ರೇಖಾಪ್ರಭಾಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮಂಜುನಾಥ್ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು‌.ಕುಂಭ ಸಂಭ್ರಮದ ವಿಶೇಷವಾಗಿ ಕುಲಾಲ ಸಮುದಾಯದ ಪ್ರತಿಭಾನ್ವಿತ ಕಲಾವಿದರಿಂದ ಗಾನವೈಭವ,ನಾಟ್ಯ ವೈಭವ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.


Recently Updated:

ಪೆರಡೂರಿನಲ್ಲಿ 94-ಸಿ ಉಲ್ಲಂಘನೆ ಆರೋಪ: ವಾಸದ ಮನೆಗೆ ಮೀಸಲಾದ ಜಮೀನಿನಲ್ಲಿ ವಾಣಿಜ್ಯ ಕಟ್ಟಡ.? ತನಿಖೆಗೆ ಆಗ್ರಹ ಸರ್ಕಾರಿ ಜಮೀನು ಲೂಟಿ ಆರೋಪ ಬಯಲು – ಸಾಕ್ಷ್ಯ ಸಮೇತ ‘ಪಬ್ಲಿಕ್ ಫೈಲ್’ ವಿಶೇಷ ವರದಿ ಶೀಘ್ರದಲ್ಲಿ..ಪೆರಡೂರಿನಲ್ಲಿ 94-ಸಿ ಉಲ್ಲಂಘನೆ ಆರೋಪ: ವಾಸದ ಮನೆಗೆ ಮೀಸಲಾದ ಜಮೀನಿನಲ್ಲಿ ವಾಣಿಜ್ಯ ಕಟ್ಟಡ.? ತನಿಖೆಗೆ ಆಗ್ರಹ ಸರ್ಕಾರಿ ಜಮೀನು ಲೂಟಿ ಆರೋಪ ಬಯಲು – ಸಾಕ್ಷ್ಯ ಸಮೇತ ‘ಪಬ್ಲಿಕ್ ಫೈಲ್’ ವಿಶೇಷ ವರದಿ ಶೀಘ್ರದಲ್ಲಿ..
ಸರ್ಕಾರಿ ಆಸ್ಪತ್ರೆಯಲ್ಲಿ ಗೂಂಡಾಗಿರಿ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ.!ಸರ್ಕಾರಿ ಆಸ್ಪತ್ರೆಯಲ್ಲಿ ಗೂಂಡಾಗಿರಿ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ.!
ಕೋಡಿಬೆಂಗ್ರೆ ಸುವರ್ಣ-ಸಮುದ್ರದ ಸಂಗಮದಲ್ಲಿ ಮೀನುಗಾರರ ಹೊಸ ಆಶಾಕಿರಣ..ಕೋಡಿಬೆಂಗ್ರೆ ಸುವರ್ಣ-ಸಮುದ್ರದ ಸಂಗಮದಲ್ಲಿ ಮೀನುಗಾರರ ಹೊಸ ಆಶಾಕಿರಣ..
ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..
ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..
ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ವಾರ್ಷಿಕೋತ್ಸವ ಸಂಭ್ರಮ.*  ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ ಪ್ರತಿಷ್ಠಿತ ಸ್ವಾತಂತ್ರ್ಯ ಸೇನಾನಿ ಪ್ರಶಸ್ತಿ    *ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿ ಪ್ರಧಾನ.* ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ವಾರ್ಷಿಕೋತ್ಸವ ಸಂಭ್ರಮ.* ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ ಪ್ರತಿಷ್ಠಿತ ಸ್ವಾತಂತ್ರ್ಯ ಸೇನಾನಿ ಪ್ರಶಸ್ತಿ *ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿ ಪ್ರಧಾನ.*
ಹೆಬ್ರಿ ಶಿವಪುರದಲ್ಲಿ ತೆರಿಗೆ ಹಣ ನುಂಗಿದ ಗ್ರಾ.ಪಂ ಸಿಬ್ಬಂದಿ.! 7.50 ಲಕ್ಷ ರೂ. ಗೋಲ್‌ಮಾಲ್. ಪಂಚಾಯಿತಿ ಸೇವೆಯಿಂದ ವಜಾ ಮಾಡಿ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲು.ಹೆಬ್ರಿ ಶಿವಪುರದಲ್ಲಿ ತೆರಿಗೆ ಹಣ ನುಂಗಿದ ಗ್ರಾ.ಪಂ ಸಿಬ್ಬಂದಿ.! 7.50 ಲಕ್ಷ ರೂ. ಗೋಲ್‌ಮಾಲ್. ಪಂಚಾಯಿತಿ ಸೇವೆಯಿಂದ ವಜಾ ಮಾಡಿ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲು.
ಮನ್ವಿತ್ ಧೈರ್ಯಕ್ಕೆ ಡಿಕೆ ಶಿವಕುಮಾರ್ ಮೆಚ್ಚುಗೆ ಸಮಯಪ್ರಜ್ಞೆಯಿಂದ ದಾಸೋಹ ಸಿಬ್ಬಂದಿ ಜೀವ ರಕ್ಷಿಸಿದ ಬಂಟ್ವಾಳ ಬಾಲಕ..ಮನ್ವಿತ್ ಧೈರ್ಯಕ್ಕೆ ಡಿಕೆ ಶಿವಕುಮಾರ್ ಮೆಚ್ಚುಗೆ ಸಮಯಪ್ರಜ್ಞೆಯಿಂದ ದಾಸೋಹ ಸಿಬ್ಬಂದಿ ಜೀವ ರಕ್ಷಿಸಿದ ಬಂಟ್ವಾಳ ಬಾಲಕ..
ಹೆಬ್ರಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಯಲು: ವಿಡಿಯೋ ವೈರಲ್, ಸ್ಥಳಕ್ಕೆ ಧಾವಿಸಿದ ಹೋರಾಟಗಾರರು. ಯಾವೂದೇ ಸಮಸ್ಯೆಗಳಿಲ್ಲ ಎಂದ ಡಾ. ಸಂತೋಷ್ ಕುಮಾರ್. ಹೆಬ್ರಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಯಲು: ವಿಡಿಯೋ ವೈರಲ್, ಸ್ಥಳಕ್ಕೆ ಧಾವಿಸಿದ ಹೋರಾಟಗಾರರು. ಯಾವೂದೇ ಸಮಸ್ಯೆಗಳಿಲ್ಲ ಎಂದ ಡಾ. ಸಂತೋಷ್ ಕುಮಾರ್.