ಕೋಟ ಆನಂದ್ ಕುಂದರ್ ಮಾಲೀಕತ್ವದ ಜನತಾ ಫಿಶ್ ಮೀಲ್ ಕಾರ್ಮಿಕರಿಂದ ತನ್ನ ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ, 'ಸ್ವಚ್ಛ ಭಾರತ' ಅಭಿಯಾನಕ್ಕೆ ಭಾರಿ ಬೆಂಬಲ ನೀಡುತ್ತಿದೆ...

22 Mar 2026
ಕರಾವಳಿ

ಸ್ವಚ್ಛ ಭಾರತ ಅಭಿಯಾನ ಪೀಠಿಕೆ


ಸ್ವಚ್ಛತೆಯೇ ಸೇವೆ" ಎಂಬ ಘೋಷಣೆಯೊಂದಿಗೆ, ಭಾರತವನ್ನು ನಿರ್ಮಲ ಮತ್ತು ಆರೋಗ್ಯಕರ ರಾಷ್ಟ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರವು ಅಕ್ಟೋಬರ್ 2, 2014 ರಂದು ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು 'ಸ್ವಚ್ಛ ಭಾರತ ಅಭಿಯಾನ'ವನ್ನು ಪ್ರಾರಂಭಿಸಿತು. ಈ ರಾಷ್ಟ್ರೀಯ ಆಂದೋಲನವು ಬಯಲು ಶೌಚ ಮುಕ್ತ ಭಾರತ, ಘನತ್ಯಾಜ್ಯ ನಿರ್ವಹಣೆ ಮತ್ತು ಸಾರ್ವಜನಿಕರಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ.

ಭಾರತ ಅಭಿಯಾನದ ಪ್ರಾಥಮಿಕ ಉದ್ದೇಶವೆಂದರೆ ಸ್ವಚ್ಛತೆಯ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಸ್ವಚ್ಛ ಭಾರತ ಅಭಿಯಾನದ ಗುರಿಯು ಭಾರತದ ಪ್ರತಿಯೊಬ್ಬ ನಾಗರಿಕನಿಗೆ ಸುರಕ್ಷಿತ ಮತ್ತು ಸಾಕಷ್ಟು ಕುಡಿಯುವ ನೀರು, ಶೌಚಾಲಯಗಳು ಮತ್ತು ಘನ ಮತ್ತು ದ್ರವ ತ್ಯಾಜ್ಯಕ್ಕಾಗಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು.

ಈ ಅಭಿಯಾನವು ಕೇವಲ ಸರ್ಕಾರದ ಯೋಜನೆಯಾಗದೆ, ಪ್ರತಿಯೊಬ್ಬ ಭಾರತೀಯನೂ ಕೈಜೋಡಿಸಿ ಗಾಂಧೀಜಿಯವರ 'ಸ್ವಚ್ಛ ಭಾರತ'ದ ಕನಸನ್ನು ನನಸಾಗಿಸುವ ಸಾಮೂಹಿಕ ಪ್ರಯತ್ನವಾಗಿದೆ.



ನಗರಗಳು ಎಷ್ಟೇ ಅಭಿವೃದ್ಧಿ ಹೊಂದುತ್ತಿದ್ದರೂ ಕಸದ ಸಮಸ್ಯೆಗೆ ಪರಿಹಾರ ಒದಗಿ ಬರುತ್ತಿಲ್ಲ. ರಸ್ತೆ ಬದಿ, ಚರಂಡಿ ಸೇರಿದಂತೆ ವಿವಿಧೆಡೆ ರಾಶಿ, ರಾಶಿ ಕಸ ಸುರಿಯಲಾಗುತ್ತಿದ್ದು ಇದರಿಂದ ನಗರದ ಅಂದಗೆಡುವುದರ ಜೊತೆಗೆ ರೋಗ ಭೀತಿಯೂ ಕಾಡುತ್ತಿದೆ.


ಇದಕ್ಕೆ ಪೂರಕವಂತೆ ಕೋಟದಿಂದ ಸಾಲಿಗ್ರಾಮ ತನಕ ಎಲ್ಲಿ ಬೇಕಲ್ಲಿ ಮಾರ್ಗ ಉದ್ದಕ್ಕೂ ಬೀದಿಬದಿ ವ್ಯಾಪಾರಿಗಳು ಹೋಟೆಲ್ ವ್ಯಾಪಾರಿಗಳು ಹಾಗೂ ರಸ್ತೆಗಳಲ್ಲಿ ಹೋಗುತ್ತಿರುವ ಸಾರ್ವಜನಿಕರು ತಾವು ತಿಂದ ತ್ಯಾಜ್ಯವನ್ನು ಎಸೆದು ಹೋಗುವುದು ಸರ್ವಸಾಮಾನ್ಯವಾಗಿ ಬಿಟ್ಟಿದೆ ಇತ್ತೀಚಿನ ದಿನಗಳಲ್ಲಿ.ಮತ್ತು ವಾಹನದಲ್ಲಿ ಹೋಗುತ್ತಿರುವ ಜನರು ಪ್ಲಾಸ್ಟಿಕ್ ತೊಟ್ಟೆಗಳನ್ನು ಬಿಯರ್ ಬಾಟಲಿಗಳನ್ನು ಮಾರ್ಗದ ಬದಿಗೆ ಎಸೆದು ಹೋಗುತ್ತಾರೆ ಪರಿಸರದ ಕಾಳಜಿ ಇಲ್ಲದಂತವರು.

ಇದನ್ನು ಸ್ವಚ್ಛಗೊಳಿಸಲು ಕೋಟ ಜನತಾ ಫಿಶ್ ಮಿಲ್ ಕಾರ್ಮಿಕರು ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದೆ.



ಪರಿಸರ ಹಿತ ರಕ್ಷಣೆ (ಪರಿಸರ ಸಂರಕ್ಷಣೆ) ಎಂದರೆ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿ, ಮಾಲಿನ್ಯವನ್ನು ತಡೆಗಟ್ಟಿ, ಭೂಮಿಯನ್ನು ಭವಿಷ್ಯದ ಪೀಳಿಗೆಗಾಗಿ ಪೋಷಿಸುವುದು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಮರ ನೆಡುವುದು, ನೀರಿನ ಸಂರಕ್ಷಣೆ ಮತ್ತು ತ್ಯಾಜ್ಯ ವಿಲೇವಾರಿ ಮಾಡುವುದು ನಮ್ಮ ಜವಾಬ್ದಾರಿ. ಪ್ರತಿಯೊಬ್ಬ ನಾಗರಿಕನ ಸಹಕಾರದಿಂದ ಮಾತ್ರ ಸಮೃದ್ಧ ಪರಿಸರವನ್ನು ನಿರ್ಮಿಸಲು ಸಾಧ್ಯ.



ಪರಿಸರ ಕಾಳಜಿ ಎಂದರೆ ಭೂಮಿ, ಗಾಳಿ, ನೀರು ಮತ್ತು ಜೀವರಾಶಿಗಳನ್ನು ಮಾಲಿನ್ಯದಿಂದ ರಕ್ಷಿಸಿ, ಭವಿಷ್ಯದ ಪೀಳಿಗೆಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು. ಮರಗಳನ್ನು ನೆಡುವುದು, ಪ್ಲಾಸ್ಟಿಕ್ ಕಡಿಮೆ ಮಾಡುವುದು, ಜಲಮೂಲಗಳನ್ನು ಉಳಿಸುವುದು, ಶಕ್ತಿ ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆ ಪ್ರಮುಖ ಕ್ರಮಗಳಾಗಿವೆ. ಆರೋಗ್ಯಕರ ಜೀವನ ಮತ್ತು ಸಮತೋಲಿತ ಪರಿಸರ ವ್ಯವಸ್ಥೆಗೆ ಇದು ಅನಿವಾರ್ಯವಾಗಿದೆ.


ಪರಿಸರವೇ ನಮ್ಮ ಮೊದಲ ದೇಹ," ಆದ್ದರಿಂದ ಅದರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.


ಸಮಾಜದ ಹಿತ ರಕ್ಷಣೆಯನ್ನು ಬಯಸುತ್ತಿರುವ

ಕೋಟ ಸಿ ಆನಂದ್ ಕುಂದರ್ ನೇತೃತ್ವದಲ್ಲಿ

ಕೋಟದಲ್ಲಿ ಮಾರ್ಗ ದುದ್ದಕ್ಕೂ ಕಸದ ತ್ಯಾಜ್ಯ ಬಿದ್ದಿರುವುದನ್ನು ಇದನ್ನು ಸ್ವಚ್ಛತಾ ಅಭಿಯಾನ ಮಾಡಲು ಕೋಟ ಸಿ ಆನಂದ್ ಕುಂದರ್ ಮಾಲೀಕತ್ವದ ಕೋಟ ಜನತಾ ಫಿಶ್ ಮೀಲ್ ಕಾರ್ಮಿಕರು ಹಾಗೂ ಗೀತಾ ಪೌಂಡೇಶನ್ ಸಹೋದ್ಯೋಗಿಗಳು ಕೋಟದಲ್ಲಿ ಪರಿಸರ ಸ್ವಚ್ಛತಾ ಅಭಿಯಾನ ನಡೆಸಿದರು

ಪರಿಸರದ ಹಿತ ರಕ್ಷಣೆಯ ನಿಮ್ಮ ಸ್ವಚ್ಛತಾ ಅಭಿಯಾನಕ್ಕೆ ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕ್ ನಿಂದ ಅಭಿನಂದನೆಗಳು


ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಅವರು ಉಡುಪಿ ಜಿಲ್ಲೆಯ ಪ್ರಮುಖ ಸಮಾಜ ಸೇವಕರು ಮತ್ತು ಉದ್ಯಮಿ. ಇವರು ಶೈಕ್ಷಣಿಕ, ಸಾಮಾಜಿಕ ಹಾಗೂ ರಕ್ತದಾನ ಶಿಬಿರಗಳ ಮೂಲಕ ಯುವ ಜನರು ಬಾಳಿನ ಬೆಳಕಾಗಿದ್ದಾರೆ ಇವರು

ನೀವು ಮಾಡುತ್ತಿರುವ ಸಮಾಜ ಸೇವೆಗೆ

ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕ್ ಕಡೆಯಿಂದ ಬಿಗ್ ಸೆಲ್ಯೂಟ್



ಪರಿಸರ ಜವಾಬ್ದಾರಿಯು ಭೂಮಿಯ ಸಂಪನ್ಮೂಲಗಳನ್ನು ಸಂರಕ್ಷಿಸುವ, ಮಾಲಿನ್ಯವನ್ನು ಕಡಿಮೆ ಮಾಡುವ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವ ವೈಯಕ್ತಿಕ ಹಾಗೂ ಸಾಂಸ್ಥಿಕ ಕರ್ತವ್ಯವಾಗಿದೆ. ಇದು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಮರ ನೆಡುವುದು, ನೀರು ಮತ್ತು ಇಂಧನ ಉಳಿತಾಯದ ಮೂಲಕ ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ಒದಗಿಸುವ ನೈತಿಕ ಹೊಣೆಗಾರಿಕೆಯಾಗಿದೆ. ಕಾಡಿದ್ದರೆ ನಾಡು, ನಾಡಿದ್ದರೆ ನಾವು" ಎಂಬ ತತ್ವದಡಿ ಪ್ರತಿಯೊಬ್ಬರೂ ಪರಿಸರ ರಕ್ಷಣೆಗೆ ಮುಂದಾಗಬೇಕು.

ಪರಿಸರ ರಕ್ಷಣೆ ನಮ್ಮೆಲ್ಲರ ಬದುಕಿನ ಜವಾಬ್ದಾರಿ ಆಗಿರುತ್ತೆ.


ಸ್ವಚ್ಛತಾ ಅಭಿಯಾನದ

ಛಾಯಾಚಿತ್ರ ಮತ್ತು ದೃಶ್ಯವನ್ನು ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕಿಗೆ ರವಾನಿಸಿದವರು

ದೇವೇಂದ್ರ ಸುವರ್ಣ.

Recently Updated:

ಪೆರಡೂರಿನಲ್ಲಿ 94-ಸಿ ಉಲ್ಲಂಘನೆ ಆರೋಪ: ವಾಸದ ಮನೆಗೆ ಮೀಸಲಾದ ಜಮೀನಿನಲ್ಲಿ ವಾಣಿಜ್ಯ ಕಟ್ಟಡ.? ತನಿಖೆಗೆ ಆಗ್ರಹ ಸರ್ಕಾರಿ ಜಮೀನು ಲೂಟಿ ಆರೋಪ ಬಯಲು – ಸಾಕ್ಷ್ಯ ಸಮೇತ ‘ಪಬ್ಲಿಕ್ ಫೈಲ್’ ವಿಶೇಷ ವರದಿ ಶೀಘ್ರದಲ್ಲಿ..ಪೆರಡೂರಿನಲ್ಲಿ 94-ಸಿ ಉಲ್ಲಂಘನೆ ಆರೋಪ: ವಾಸದ ಮನೆಗೆ ಮೀಸಲಾದ ಜಮೀನಿನಲ್ಲಿ ವಾಣಿಜ್ಯ ಕಟ್ಟಡ.? ತನಿಖೆಗೆ ಆಗ್ರಹ ಸರ್ಕಾರಿ ಜಮೀನು ಲೂಟಿ ಆರೋಪ ಬಯಲು – ಸಾಕ್ಷ್ಯ ಸಮೇತ ‘ಪಬ್ಲಿಕ್ ಫೈಲ್’ ವಿಶೇಷ ವರದಿ ಶೀಘ್ರದಲ್ಲಿ..
ಸರ್ಕಾರಿ ಆಸ್ಪತ್ರೆಯಲ್ಲಿ ಗೂಂಡಾಗಿರಿ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ.!ಸರ್ಕಾರಿ ಆಸ್ಪತ್ರೆಯಲ್ಲಿ ಗೂಂಡಾಗಿರಿ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ.!
ಕೋಡಿಬೆಂಗ್ರೆ ಸುವರ್ಣ-ಸಮುದ್ರದ ಸಂಗಮದಲ್ಲಿ ಮೀನುಗಾರರ ಹೊಸ ಆಶಾಕಿರಣ..ಕೋಡಿಬೆಂಗ್ರೆ ಸುವರ್ಣ-ಸಮುದ್ರದ ಸಂಗಮದಲ್ಲಿ ಮೀನುಗಾರರ ಹೊಸ ಆಶಾಕಿರಣ..
ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..
ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..
ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ವಾರ್ಷಿಕೋತ್ಸವ ಸಂಭ್ರಮ.*  ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ ಪ್ರತಿಷ್ಠಿತ ಸ್ವಾತಂತ್ರ್ಯ ಸೇನಾನಿ ಪ್ರಶಸ್ತಿ    *ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿ ಪ್ರಧಾನ.* ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ವಾರ್ಷಿಕೋತ್ಸವ ಸಂಭ್ರಮ.* ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ ಪ್ರತಿಷ್ಠಿತ ಸ್ವಾತಂತ್ರ್ಯ ಸೇನಾನಿ ಪ್ರಶಸ್ತಿ *ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿ ಪ್ರಧಾನ.*
ಹೆಬ್ರಿ ಶಿವಪುರದಲ್ಲಿ ತೆರಿಗೆ ಹಣ ನುಂಗಿದ ಗ್ರಾ.ಪಂ ಸಿಬ್ಬಂದಿ.! 7.50 ಲಕ್ಷ ರೂ. ಗೋಲ್‌ಮಾಲ್. ಪಂಚಾಯಿತಿ ಸೇವೆಯಿಂದ ವಜಾ ಮಾಡಿ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲು.ಹೆಬ್ರಿ ಶಿವಪುರದಲ್ಲಿ ತೆರಿಗೆ ಹಣ ನುಂಗಿದ ಗ್ರಾ.ಪಂ ಸಿಬ್ಬಂದಿ.! 7.50 ಲಕ್ಷ ರೂ. ಗೋಲ್‌ಮಾಲ್. ಪಂಚಾಯಿತಿ ಸೇವೆಯಿಂದ ವಜಾ ಮಾಡಿ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲು.
ಮನ್ವಿತ್ ಧೈರ್ಯಕ್ಕೆ ಡಿಕೆ ಶಿವಕುಮಾರ್ ಮೆಚ್ಚುಗೆ ಸಮಯಪ್ರಜ್ಞೆಯಿಂದ ದಾಸೋಹ ಸಿಬ್ಬಂದಿ ಜೀವ ರಕ್ಷಿಸಿದ ಬಂಟ್ವಾಳ ಬಾಲಕ..ಮನ್ವಿತ್ ಧೈರ್ಯಕ್ಕೆ ಡಿಕೆ ಶಿವಕುಮಾರ್ ಮೆಚ್ಚುಗೆ ಸಮಯಪ್ರಜ್ಞೆಯಿಂದ ದಾಸೋಹ ಸಿಬ್ಬಂದಿ ಜೀವ ರಕ್ಷಿಸಿದ ಬಂಟ್ವಾಳ ಬಾಲಕ..
ಹೆಬ್ರಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಯಲು: ವಿಡಿಯೋ ವೈರಲ್, ಸ್ಥಳಕ್ಕೆ ಧಾವಿಸಿದ ಹೋರಾಟಗಾರರು. ಯಾವೂದೇ ಸಮಸ್ಯೆಗಳಿಲ್ಲ ಎಂದ ಡಾ. ಸಂತೋಷ್ ಕುಮಾರ್. ಹೆಬ್ರಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಯಲು: ವಿಡಿಯೋ ವೈರಲ್, ಸ್ಥಳಕ್ಕೆ ಧಾವಿಸಿದ ಹೋರಾಟಗಾರರು. ಯಾವೂದೇ ಸಮಸ್ಯೆಗಳಿಲ್ಲ ಎಂದ ಡಾ. ಸಂತೋಷ್ ಕುಮಾರ್.