ಬೆಂಗಳೂರಿನಲ್ಲಿ ಬೇಕರಿ, ಕಾಂಡಿಮೆಂಟ್ಸ್ ಮತ್ತು ಬೀಡ ಅಂಗಡಿ ಹಾಗೂ ಸಣ್ಣ ಉದ್ಯಮೆದಾರರ ಮೇಲೆ ದೌರ್ಜನ್ಯ ವಿರುದ್ಧ ಸಿಡಿದೆದ್ದ ಶ್ರಮಿಕರು.

18 Jun 2025
ರಾಜ್ಯ

ಶೀಘ್ರದಲ್ಲೇ ಬಿಬಿಎಂಪಿ, ಪೊಲೀಸ್, ಆರೋಗ್ಯ ಇಲಾಖೆ ಸಭೆ ಕರೆದು ಸಮಸ್ಯೆ ಬಗೆಹರಿಸಲು ಕ್ರಮ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು, ಜೂ.17; ದುಡಿದು ತಿನ್ನುವ ಬೇಕರಿ ಕಾಂಡಿಮೆಂಟ್ಸ್ ಮತ್ತು ಬೀಡ ಅಂಗಡಿ ಹಾಗೂ ಸಣ್ಣ ಉದ್ಯಮೆದಾರರ ಮೇಲೆ ದೌರ್ಜನ್ಯ ನಡೆಯುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ರವಿ ಶೆಟ್ಟಿ ಬೈಂದೂರ್ ಸಾರಥ್ಯದಲ್ಲಿ ನಡೆದ “ಶ್ರಮಿಕರ ಸಂವಾದ ಸಭೆ”ಯಲ್ಲಿ ಕಿಕ್ಕಿರಿದು ತುಂಬಿದ್ದ ಸಂತ್ರಸ್ತರ ಜೊತೆ ಸಂವಾದ ನಡೆಸಿ ಮಾತನಾಡಿದ ಅವರು, ಶ್ರಮಿಕರ ಹಿತ ರಕ್ಷಣೆಗೆ ಸರ್ಕಾರ ಸದಾ ಬದ್ಧ. ಬೇಕರಿ ಕಾಂಡಿಮೆಂಟ್ಸ್ ಮತ್ತು ಬೀಡ ಅಂಗಡಿ ಹಾಗೂ ಸಣ್ಣ ಉದ್ಯಮೆದಾರರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಖಂಡನೀಯ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸರ್ಕಾರ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಬಿಬಿಎಂಪಿ, ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳ ಸಭೆ ಕರೆದು ಕಾಂಡಿಮೆಂಟ್ಸ್, ಬೀಡ ಅಂಗಡಿ ಹಾಗೂ ಸಣ್ಣ ಉದ್ಯಮೆದಾರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುತ್ತೇವೆ ಎಂದರು.

ಇದಕ್ಕೂ ಮುನ್ನ ಸಂವಾದದಲ್ಲಿ ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಸಚಿವರ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟರು. ಬಿಬಿಎಂಪಿ ಅಧಿಕಾರಿಗಳು ಬೇಕರಿಗಳ ಮೇಲೆ ದಾಳಿ ಮಾಡಿ ಗರಿಷ್ಠ 25 ಸಾವಿರ ರೂ ವರೆಗೆ ದಂಡ ವಿಧಿಸುತ್ತಿದ್ದಾರೆ. ಮರಿ. ಪುಢಾರಿ ರೌಡಿಗಳ ಉಪಟಳವೂ ಹೆಚ್ಚಾಗಿದೆ. ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನಮ್ಮ ಮೇಲೆ ದರ್ಪ, ದೌರ್ಜನ್ಯ ತೋರುತ್ತಿದ್ದಾರೆ. ಸರ್ಕಾರ ನಮಗೆ ರಕ್ಷಣೆ ನೀಡದಿದ್ದರೆ ನಾವು ದಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರುಮೆ ಮಾತನಾಡಿ, ನಾನೂ ಕೂಡ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡು ಬೆಳೆದು ಬಂದವನು. ನನಗೆ ಈ ಉದ್ಯಮದಲ್ಲಿ 30 ವರ್ಷಗಳ ಕಹಿ ಅನುಭವವಿದೆ. ಬೇಕರಿ, ಹೋಟೆಲ್ ಗಳು, ಬೀಡಾ ಅಂಗಡಿಗಳನ್ನು ಹೆಚ್ಚಾಗಿ ಕರಾವಳಿ ಭಾಗದವರು ನಡೆಸುತ್ತಿದ್ದಾರೆ. ಈ ಸಮಸ್ಯೆ ಬಗ್ಗೆ ಮುಂದಿನ ವಿಧಾನಮಂಡಲ ಅಧಿವೇಶದನಲ್ಲಿ ಪ್ರಸ್ತಾಪಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುತ್ತೇನೆ ಎಂದು ಹೇಳಿದರು.

ಶ್ರಮಿಕರ ನೇರ ಸಂವಾದ” ಕಾರ್ಯಕ್ರಮದಲ್ಲಿ ಸಂತೋಷ ಗುರೂಜಿ, ಹಿರಿಯ ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ, ಸಮತಾ ಸೈನಿಕದಳ ವೆಂಕಟಸ್ವಾಮಿ ಏನ್, ಆರ್ ರಮೇಶ್, ಚಾಲಕರ ಸಂಘಟನೆಯಿಂದ ಗಂಡಸಿ ಸದಾನಂದ ಸ್ವಾಮಿ, ಬೆಂಗಳೂರು ಹೋಟೆಲ್ ಸಂಘದ ಗೌ, ಅಧ್ಯಕ್ಷರು ಪಿ ಸಿ ರಾವ್, ಮಧುಕರ್ ಶೆಟ್ಟಿ, ಕನ್ನಡ ಪರ ಹೋರಾಟಗಾರಾದ, ನಟರಾಜ್ ಬೊಮ್ಮಸಂದ್ರ ಮಂಚೇಗೌಡ, ಪೂಜಾಶೆಟ್ಟಿ, ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Recently Updated:

ನಕಲಿ ಪತ್ರಿಕೋದ್ಯಮಕ್ಕೆ ಕಾನೂನಿನ ಬಿಸಿ   ಕೊರಟಗೆರೆ ಪ್ರಕರಣ ಒಂದು ಎಚ್ಚರಿಕೆ..ನಕಲಿ ಪತ್ರಿಕೋದ್ಯಮಕ್ಕೆ ಕಾನೂನಿನ ಬಿಸಿ ಕೊರಟಗೆರೆ ಪ್ರಕರಣ ಒಂದು ಎಚ್ಚರಿಕೆ..
ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್: ನವೆಂಬರ್ 1 ರಿಂದ ಬಿಲ್ ನಲ್ಲೇ ಔಷಧದ ಖರೀದಿ ಬೆಲೆ ಕಡ್ಡಾಯ ರೋಗಿಗಳಿಗೆ ಗುಡ್ ನ್ಯೂಸ್...ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್: ನವೆಂಬರ್ 1 ರಿಂದ ಬಿಲ್ ನಲ್ಲೇ ಔಷಧದ ಖರೀದಿ ಬೆಲೆ ಕಡ್ಡಾಯ ರೋಗಿಗಳಿಗೆ ಗುಡ್ ನ್ಯೂಸ್...
ಕುಂದಾಪುರದಲ್ಲಿ  ಸತ್ಯ ಬರೆದಿದ್ದಕ್ಕೆ ಹಲ್ಲೆ ಕನ್ನಡಪ್ರಭ ವರದಿಗಾರನ ಮೇಲೆ ಸರ್ಕಾರಿ  ವೈದ್ಯನ ಅಟ್ಟಹಾಸ.!   ಹಲ್ಲೆ ಮಾಡಿದ್ದ ಸರ್ಕಾರಿ ವೈದ್ಯ ಡಾ. ಮಹೇಂದ್ರ ಶೆಟ್ಟಿ ಸಸ್ಪೆಂಡ್..ಕುಂದಾಪುರದಲ್ಲಿ ಸತ್ಯ ಬರೆದಿದ್ದಕ್ಕೆ ಹಲ್ಲೆ ಕನ್ನಡಪ್ರಭ ವರದಿಗಾರನ ಮೇಲೆ ಸರ್ಕಾರಿ ವೈದ್ಯನ ಅಟ್ಟಹಾಸ.! ಹಲ್ಲೆ ಮಾಡಿದ್ದ ಸರ್ಕಾರಿ ವೈದ್ಯ ಡಾ. ಮಹೇಂದ್ರ ಶೆಟ್ಟಿ ಸಸ್ಪೆಂಡ್..
ಗುಟ್ಕಾ-ಪಾನ್ ಮಸಾಲಾ ನಿಷೇಧವನ್ನು ಎರಡೇ ದಿನಕ್ಕೆ ಹಿಂಪಡೆದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್..ಗುಟ್ಕಾ-ಪಾನ್ ಮಸಾಲಾ ನಿಷೇಧವನ್ನು ಎರಡೇ ದಿನಕ್ಕೆ ಹಿಂಪಡೆದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್..
ಕೊನೆ ಕ್ಷಣದಲ್ಲಿ ಕೈ ಕೊಟ್ಟ ಹೈಕಮಾಂಡ್  ಮಂಕಾಳ್ ಔಟ್, ಎಸ್ ಎಸ್ ಮಲ್ಲಿಕಾರ್ಜುನ ಇನ್.!!  ಹೈಕಮಾಂಡ್ ರಿಂದ ಬಂದಿದ್ದ ಪಟ್ಟಿಯಲ್ಲಿ ಒಂದು ಹೆಸರು ಬದಲಾವಣೆಯಾಗಿದ್ದು, ಮಂಕಾಳ್ ವೈದ್ಯ ಅವರ ಹೆಸರಿನ ಬದಲಾಗಿ ದಾವಣಗೆರೆಯ ಎಸ್ ಎಸ್ ಮಲ್ಲಿಕಾರ್ಜುನ ಅವರ ಹೆಸರನ್ನು ಸೇರಿಸಲಾಗಿದೆ. ಇದೀಗ ಸಚಿವಸ್ಥಾನ ದೊರೆತ ಖುಷಿಯಕೊನೆ ಕ್ಷಣದಲ್ಲಿ ಕೈ ಕೊಟ್ಟ ಹೈಕಮಾಂಡ್ ಮಂಕಾಳ್ ಔಟ್, ಎಸ್ ಎಸ್ ಮಲ್ಲಿಕಾರ್ಜುನ ಇನ್.!! ಹೈಕಮಾಂಡ್ ರಿಂದ ಬಂದಿದ್ದ ಪಟ್ಟಿಯಲ್ಲಿ ಒಂದು ಹೆಸರು ಬದಲಾವಣೆಯಾಗಿದ್ದು, ಮಂಕಾಳ್ ವೈದ್ಯ ಅವರ ಹೆಸರಿನ ಬದಲಾಗಿ ದಾವಣಗೆರೆಯ ಎಸ್ ಎಸ್ ಮಲ್ಲಿಕಾರ್ಜುನ ಅವರ ಹೆಸರನ್ನು ಸೇರಿಸಲಾಗಿದೆ. ಇದೀಗ ಸಚಿವಸ್ಥಾನ ದೊರೆತ ಖುಷಿಯ
ಬೆಂಗಳೂರು:ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಬೇಳೂರು ಗೋಪಾಲಕೃಷ್ಣ.! ರಾಜ್ಯದಲ್ಲಿ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಅಂತಿಮಗೊಂಡಿದ್ದು, ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ರಾಜಭವನದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಂಗಳೂರು:ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಬೇಳೂರು ಗೋಪಾಲಕೃಷ್ಣ.! ರಾಜ್ಯದಲ್ಲಿ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಅಂತಿಮಗೊಂಡಿದ್ದು, ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ರಾಜಭವನದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬೆಂಗಳೂರು, ಆ.3- ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಹೈಕಮಾಂಡ್‌ ಸಮತಿಸಿದ್ದು, ಇಂದು ಸಂಜೆ 4.05 ನಿಮಿಷಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್‌‍ ಹೈಕಮಾಂಡ್‌ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆಗಳ ಸೃಷ್ಟಿಗೆ ನಿರಾಕರಿಸಿದೆ. ಸಂಪುಟದಲ್ಲಿ ಖಾಲಿಯಿರುವ 20 ಸ್ಥಾನಗಳಿಗಬೆಂಗಳೂರು, ಆ.3- ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಹೈಕಮಾಂಡ್‌ ಸಮತಿಸಿದ್ದು, ಇಂದು ಸಂಜೆ 4.05 ನಿಮಿಷಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್‌‍ ಹೈಕಮಾಂಡ್‌ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆಗಳ ಸೃಷ್ಟಿಗೆ ನಿರಾಕರಿಸಿದೆ. ಸಂಪುಟದಲ್ಲಿ ಖಾಲಿಯಿರುವ 20 ಸ್ಥಾನಗಳಿಗ
ಧರ್ಮದ ಹೊಲದಲ್ಲಿ ಭತ್ತದ ಫಸಲು  ಅನ್ನವೂ ಧರ್ಮ ನೆಲವೂ ಧರ್ಮ’  ಗಂಗಾವತಿಗೆ ಶ್ರೀಗಳ ದಿವ್ಯ ಸಂದೇಶ   ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಗಳ ಆಶೀರ್ವಚನ..ಧರ್ಮದ ಹೊಲದಲ್ಲಿ ಭತ್ತದ ಫಸಲು ಅನ್ನವೂ ಧರ್ಮ ನೆಲವೂ ಧರ್ಮ’ ಗಂಗಾವತಿಗೆ ಶ್ರೀಗಳ ದಿವ್ಯ ಸಂದೇಶ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಗಳ ಆಶೀರ್ವಚನ..
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ  ಉಡುಪಿ ಪ್ರಥಮ ಸ್ಥಾನ  ಕರ್ನಾಟಕದಲ್ಲಿ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು (ಏಪ್ರಿಲ್‌ 9) ಗುರುವಾರ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಉಡುಪಿ ಪ್ರಥಮ ಸ್ಥಾನ ಕರ್ನಾಟಕದಲ್ಲಿ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು (ಏಪ್ರಿಲ್‌ 9) ಗುರುವಾರ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ.