ಕಬ್ಬಿಗೆ 3,500 ಬೆಂಬಲ ಬೆಲೆ ನೀಡದಿದ್ದರೆ ಹೋರಾಟ ಉಗ್ರಗೊಳಿಸುವ ಎಚ್ಚರಿಕೆ ರೈತರ ಧರಣಿ ಏಳನೇ ದಿನಕ್ಕೆ..!

06 Nov 2025
ರಾಜ್ಯ

ಅಥಣಿ: ಕಬ್ಬಿಗೆ ಪ್ರತಿ ಟನ್‌ಗೆ 3,500 ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಅಥಣಿ ತಾಲ್ಲೂಕಿನ ಸತ್ತಿ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿಟ್ಟಿದೆ. ರೈತ ಮುಖಂಡರಾದ ಬಸವರಾಜ್, ಮಲ್ಲಪ್ಪ ಹಂಚನಾಳ, ಬುಡ್ಡಾಸಾಬ ಅತ್ತಾರ, ಕಾಕಾಸಾಬ್ ರುದ್ರಗೌಡ

ಗಿರಮಲ್ಲ ತೇಲಿ

ಬಾದಷ ಅತ್ತಾರ

ಹಾಗೂ ಮಲ್ಲು ಕೋರೆ ಅವರ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.


ಪ್ರತಿಭಟನಾ ಸ್ಥಳದಲ್ಲಿ ರೈತರು “ಜೈ ಜವಾನ್, ಜೈ ಕಿಸಾನ್” ಹಾಗೂ “ರೈತ ಸಂಘದ ಹೋರಾಟಕ್ಕೆ ಜಯವಾಗಲಿ” ಎಂಬ ಘೋಷಣೆಗಳನ್ನು ಕೂಗುತ್ತಾ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಮುಖಂಡ ಬಸವರಾಜ್ ಹೇಳಿದರು, “ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರಾಜಕಾರಣಿಗಳು ಒಂದಾಗಿ ರೈತರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ. ಕಳೆದ ನಾಲ್ಕು ಐದು ವರ್ಷಗಳಿಂದ ಕಬ್ಬು ಬೆಳೆಯಲು ಸೂಕ್ತ ಬೆಲೆ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಿ ನಮ್ಮ ರಾಜ್ಯಕ್ಕಿಂತ ಹೆಚ್ಚು ಬೆಲೆ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಪ್ರತಿ ಟನ್‌ಗೆ 3,500 ನಿಗದಿ ಮಾಡಬೇಕು,” ಎಂದು ಆಗ್ರಹಿಸಿದರು.


ಅವರು ಮುಂದುವರೆದು, “ಮುಖ್ಯಮಂತ್ರಿ ಹಾಗೂ ಜಿಲ್ಲಾ ಸಚಿವರು ತಕ್ಷಣ ಗಮನಹರಿಸಿ ಸಂಜೆಯೊಳಗೆ ನಿರ್ಧಾರ ಕೈಗೊಂಡಿಲ್ಲದಿದ್ದರೆ ಹೋರಾಟವನ್ನು ಉಗ್ರಗೊಳಿಸುವಂತಾಗುತ್ತದೆ. ನಾವು ಬೇಡುತ್ತಿರುವುದು ದಯೆಯಲ್ಲ - ಹಕ್ಕಿನ ಪ್ರತಿಫಲ,” ಎಂದು ಎಚ್ಚರಿಕೆ ನೀಡಿದರು.


ಇನ್ನೊಬ್ಬ ರೈತ ಮುಖಂಡ ಎಲ್ಲಪ್ಪ ಹಂಚನಾಳ ಹೇಳಿದರು, “ಇದು ನಮ್ಮ ಹಕ್ಕಿನ ಬೇಡಿಕೆ. ನಾವು ಬೆವರು ಸುರಿಸಿ ದುಡಿದ ಹಣವನ್ನು ಕೇಳುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯುತ್ತದೆ. ಜಿಲ್ಲಾಧಿಕಾರಿಗಳು ನಮ್ಮೊಂದಿಗೆ ಮಾತುಕತೆ ನಡೆಸಿದ್ದಾರೆ, ಆದರೆ ಅಂತಿಮ ನಿರ್ಧಾರ ಕೈಗೊಳ್ಳಬೇಕಾದದ್ದು ಸರ್ಕಾರ ಮತ್ತು ಸಕ್ಕರೆ ಸಚಿವರು. ಅವರು ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ಹೇಳಿದರು.


ಎರಡು ವಾರದ ಹತ್ತಿರವಾಗುತ್ತಿದ್ದರೂ ಸರ್ಕಾರದ ಯಾವುದೇ ಪ್ರತಿನಿಧಿ ಅಥವಾ ಸಚಿವರು ಸ್ಥಳಕ್ಕೆ ಭೇಟಿ ನೀಡದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರದಿಂದ ಸ್ಪಂದನೆ ದೊರೆಯುವವರೆಗೂ ಧರಣಿ ಮುಂದುವರೆಯಲಿದೆ ಎಂದು ರೈತರು ಸ್ಪಷ್ಟಪಡಿಸಿದ್ದಾರೆ...



ವರದಿ

ಹಜರತಅಲಿ ಕಮಾಲನವ

Recently Updated:

ಧರ್ಮದ ಹೊಲದಲ್ಲಿ ಭತ್ತದ ಫಸಲು  ಅನ್ನವೂ ಧರ್ಮ ನೆಲವೂ ಧರ್ಮ’  ಗಂಗಾವತಿಗೆ ಶ್ರೀಗಳ ದಿವ್ಯ ಸಂದೇಶ   ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಗಳ ಆಶೀರ್ವಚನ..ಧರ್ಮದ ಹೊಲದಲ್ಲಿ ಭತ್ತದ ಫಸಲು ಅನ್ನವೂ ಧರ್ಮ ನೆಲವೂ ಧರ್ಮ’ ಗಂಗಾವತಿಗೆ ಶ್ರೀಗಳ ದಿವ್ಯ ಸಂದೇಶ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಗಳ ಆಶೀರ್ವಚನ..
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ  ಉಡುಪಿ ಪ್ರಥಮ ಸ್ಥಾನ  ಕರ್ನಾಟಕದಲ್ಲಿ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು (ಏಪ್ರಿಲ್‌ 9) ಗುರುವಾರ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಉಡುಪಿ ಪ್ರಥಮ ಸ್ಥಾನ ಕರ್ನಾಟಕದಲ್ಲಿ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು (ಏಪ್ರಿಲ್‌ 9) ಗುರುವಾರ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ.
ಭಾರತೀಯ ಜನತಾ ಪಕ್ಷ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿರುವ ಶ್ರೀನಿವಾಸ ಟಿ. ದಾಸಕರಿಯಪ್ಪ  ಬಿಜೆಪಿಯ ರಾಜ್ಯ  ಮೋರ್ಚಾ ಉಪಾಧ್ಯಕ್ಷರು.  ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಪೈಕಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯ ಸಂಘರ್ಷ ತಾಭಾರತೀಯ ಜನತಾ ಪಕ್ಷ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿರುವ ಶ್ರೀನಿವಾಸ ಟಿ. ದಾಸಕರಿಯಪ್ಪ ಬಿಜೆಪಿಯ ರಾಜ್ಯ ಮೋರ್ಚಾ ಉಪಾಧ್ಯಕ್ಷರು. ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಪೈಕಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯ ಸಂಘರ್ಷ ತಾ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿಯ  ಪಂಚಾಯತ್‌ನ ಹತ್ತಿರದಲ್ಲಿ ಮೊಬೈಲ್ ಟವರ್ ಇದ್ದರೂ, ಅಲ್ಲಿನ ನಿವಾಸಿಗಳು ಮಾತ್ರ ತೀವ್ರ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.!  ಇಲ್ಲಿಯ ಗ್ರಾಮಸ್ಥರು ಚುನಾಯಿತ ಜನಪ್ರತಿನಿಧಿಗಳಿಗೆ ದೂರು ನೀಡಿದರು ಜನಪ್ರತಿನಿಧಿಗಳು ಮಾತ್ರ ಮೌನಗೀತೆ ಸಂಗೀತದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಪಂಚಾಯತ್‌ನ ಹತ್ತಿರದಲ್ಲಿ ಮೊಬೈಲ್ ಟವರ್ ಇದ್ದರೂ, ಅಲ್ಲಿನ ನಿವಾಸಿಗಳು ಮಾತ್ರ ತೀವ್ರ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.! ಇಲ್ಲಿಯ ಗ್ರಾಮಸ್ಥರು ಚುನಾಯಿತ ಜನಪ್ರತಿನಿಧಿಗಳಿಗೆ ದೂರು ನೀಡಿದರು ಜನಪ್ರತಿನಿಧಿಗಳು ಮಾತ್ರ ಮೌನಗೀತೆ ಸಂಗೀತದ
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ತಕ್ಷಣ ಸಮಸ್ಯೆ ಪರಿಹರಿಸದಿದ್ದಲ್ಲಿ ಹೋಟೆಲ್ ಮಾಲೀಕರ ಸಂಘಟನೆಗೆ ಬೆಂಬಲ ನೀಡಿ ಬೀದಿಗಿಳಿದು ಪ್ರತಿಭಟನೆ ಮಾಡಲು ಕರೆ ನೀಡಲಾಗುವುದು,ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ತಕ್ಷಣ ಸಮಸ್ಯೆ ಪರಿಹರಿಸದಿದ್ದಲ್ಲಿ ಹೋಟೆಲ್ ಮಾಲೀಕರ ಸಂಘಟನೆಗೆ ಬೆಂಬಲ ನೀಡಿ ಬೀದಿಗಿಳಿದು ಪ್ರತಿಭಟನೆ ಮಾಡಲು ಕರೆ ನೀಡಲಾಗುವುದು,
ದಕ್ಷಿಣ ಕನ್ನಡ ಉಡುಪಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸ್ ರೇ ಯಂತ್ರ ಹಸ್ತಾಂತರದಕ್ಷಿಣ ಕನ್ನಡ ಉಡುಪಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸ್ ರೇ ಯಂತ್ರ ಹಸ್ತಾಂತರ
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿ ಭೇಟಿ ಪತ್ರಕರ್ತರ ಸೌಲಭ್ಯ ಕುರಿತಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿಯಿಂದ ಮುಖ್ಯಮಂತ್ರಿ ಭೇಟಿ.ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿ ಭೇಟಿ ಪತ್ರಕರ್ತರ ಸೌಲಭ್ಯ ಕುರಿತಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿಯಿಂದ ಮುಖ್ಯಮಂತ್ರಿ ಭೇಟಿ.
ಪೊಲೀಸಪ್ಪನ ಫೇಸ್ಬುಕ್ ಪಿಕ್ಲಾಟದ ಕಾಟ ತಾಳಲಾರದೆ ವಿಧವೆ ಮಹಿಳೆ ವಾಟ್ಸಾಪ್ನಲ್ಲಿ ಡೆತ್ ನೋಟ್ ಬರೆದಿಷ್ಟು ನೇಣು ಹಾಕಿಕೊಂಡು ಆತ್ಮಹತ್ಯೆ.. ಪೊಲೀಸಪ್ಪನ ಫೇಸ್ಬುಕ್ ಪಿಕ್ಲಾಟದ ಕಾಟ ತಾಳಲಾರದೆ ವಿಧವೆ ಮಹಿಳೆ ವಾಟ್ಸಾಪ್ನಲ್ಲಿ ಡೆತ್ ನೋಟ್ ಬರೆದಿಷ್ಟು ನೇಣು ಹಾಕಿಕೊಂಡು ಆತ್ಮಹತ್ಯೆ..
ಬಾಗಲಕೋಟೆ: ಶಿವಾಜಿ ಮಹಾರಾಜರ ಭಾವ ಚಿತ್ರದ ಮೇಲೆ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ ಮಾಡಿದವರ ಮೇಲೆ ಕೇಸ್:8ಮಂದಿ ಬಂಧನ  ಕಲ್ಲು ತೂರಾಟ ಕೇಸ್; ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ  ಘಟನೆ ಪುಂಡರಿಗೆ ತಕ್ಕ ಶಿಕ್ಷೆ ಇಂದ ಸಿದ್ದರಾಮಯ್ಯ.ಬಾಗಲಕೋಟೆ: ಶಿವಾಜಿ ಮಹಾರಾಜರ ಭಾವ ಚಿತ್ರದ ಮೇಲೆ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ ಮಾಡಿದವರ ಮೇಲೆ ಕೇಸ್:8ಮಂದಿ ಬಂಧನ ಕಲ್ಲು ತೂರಾಟ ಕೇಸ್; ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಘಟನೆ ಪುಂಡರಿಗೆ ತಕ್ಕ ಶಿಕ್ಷೆ ಇಂದ ಸಿದ್ದರಾಮಯ್ಯ.