ಹೆಬ್ರಿ : ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಲವು ಸಮಸ್ಯೆಗಳಿರುವ ಸಾಮಾಜಿಕ ಜಾಲತಾಣದಲ್ಲಿ ವಿಡೀಯೋ ವೈರಲ್ ಆಗಿದ್ದು ಶುಕ್ರವಾರ ಹಲವರು ಆಸ್ಪತ್ರೆಗೆ ತೆರಳಿ ವಿಚಾರ ವಿನಿಮಯ ಮಾಡಿದರು.
ಇಸಿಜಿ ವರದಿಯಲ್ಲಿ ತಪ್ಪು ಹೆಸರು ಮತ್ತು ಪ್ರಾಯ ನಮೂದಾಗಿರುವುದು, ಔಷಧಿಗಳು ಇಲ್ಲ ಎಂದು ಹೇಳುವುದು ಸೇಋಿ ಹಲವು ಸಮಸ್ಯೆಗಳಿವೆ ಎಂದು ವ್ಯಕ್ತಿಯಬ್ಬರು ವಿಡೀಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಬೇಕು ಎಂದು ಸ್ಥಳೀಯ ಮುಖಂಡ ನವೀನ್ ಕೆ ಅಡ್ಯಂತಾಯ ಮತ್ತು ಸಾಮಾಜಿಕ ಹೋರಾಟಗಾರ ಹರೀಶ ಶೆಟ್ಟಿ ನಾಡ್ಪಾಲು ಆಡಳಿತ ವೈಧ್ಯಾಧಿಕಾರಿ ಡಾ. ಸಂತೋಷ ಕುಮಾರ್ ಬೈಲೂರು ಅವರಲ್ಲಿ ಶುಕ್ರವಾರ ಕೇಳಿದರು.
ಸ್ಪಷ್ಟನೆ ನೀಡಿದ ಆಡಳಿತ ವೈಧ್ಯಾಧಿಕಾರಿ ಡಾ. ಸಂತೋಷ ಕುಮಾರ್ ಬೈಲೂರು ಅವರು ಇಸಿಜಿಯಲ್ಲಿ ಹೆಸರು ಎಂಟ್ರಿಯ ವಿಚಾರದಲ್ಲಿ ತಾಂತ್ರಿಕ ಸಮಸ್ಯೆಯಿತ್ತು. ಅದನ್ನು ತಜ್ಞರ ಮೂಲಕ ಸರಿ ಮಾಡಲಾಗಿದೆ. ಬೇರೆ ಯಾವೂದೇ ಸಮಸ್ಯೆಗಳು ಇಲ್ಲ. ಔಷಧಿಗಳು ಸಾಕಾಷ್ಟು ಲಭ್ಯವಿದೆ. ಕೆಲವು ಸಂದರ್ಭದಲ್ಲಿ ಸಮಸ್ಯೆಯಾಗಿರಬಹುದು. ಉಳಿದಂತೆ ಅತ್ಯುತ್ತಮವಾಗಿ ಸೇವೆಯನ್ನು ಒಂದು ತಂಡವಾಗಿ ನೀಡುತ್ತಿದ್ದೇವೆ. ಸಾಕಾಷ್ಟು ವೈದ್ಯರು ಮತ್ತು ಸಿಬ್ಬಂದಿಗಳು ಕೂಡ ಇದ್ದಾರೆ. ಯಾವೂದೇ ಸಮಸ್ಯೆಗಳಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಾಮಾಜಿಕ ಹೋರಾಟಗಾರರಾದ ಕೆರೆಬೆಟ್ಟು ಸಂಜೀವ ಶೆಟ್ಟಿ, ಶ್ರೀಕಾಂತ್ ಪೂಜಾರಿ ಕುಚ್ಚೂರು, ಶಂಕರ ಶೇರಿಗಾರ್ ಹೆಬ್ರಿ ಸೇರಿ ಹಲವರು ಇದ್ದರು.








