ಹೆಬ್ರಿ ಶಿವಪುರದಲ್ಲಿ ತೆರಿಗೆ ಹಣ ನುಂಗಿದ ಗ್ರಾ.ಪಂ ಸಿಬ್ಬಂದಿ.! 7.50 ಲಕ್ಷ ರೂ. ಗೋಲ್‌ಮಾಲ್. ಪಂಚಾಯಿತಿ ಸೇವೆಯಿಂದ ವಜಾ ಮಾಡಿ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲು.

14 Aug 2026
ಕರಾವಳಿ

ಉಡುಪಿ : ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯಿತಿಯ ಬಿಲ್ಲು ವಸೂಲಿಗನಾದ ಗ್ರಾಮ ಪಂಚಾಯತಿ ಸಿಬ್ಬಂದಿ ಮಂಜುನಾಥ್‌ ಎಂಬವರು ಮನೆ ತೆರಿಗೆಯಲ್ಲಿ ವಸೂಲಾದ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಹಣದ ದುರ್ಬಳಕೆ ಮಾಡಿಕೊಂಡು ನಂಬಿಕೆ ದ್ರೋಹ ಎಸಗಿರುವುದು ಕಂಡು ಬಂದಿದ್ದು ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್‌ ಬಾಯಲ್‌ ಮಂಜುನಾಥ ಅವರನ್ನು ಬುಧವಾರ ಸೇವೆಯಿಂದ ವಜಾ ಗೊಳಿಸಿ ಆದೇಶ ನೀಡಿದ್ದಾರೆ.


ಹಣದ ದುರ್ಬಳಕೆ ಮಾಡಿದ ಬಗ್ಗೆ ಶಿವಪುರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅಶೋಕ್‌ ಅವರು ಗುರುವಾರ ಹೆಬ್ರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ವಂಚನೆ ಪ್ರಕರಣ ದಾಖಲಾಗಿದೆ. 40 ವರ್ಷ ಪ್ರಾಯದ ಮಂಜುನಾಥ್‌ ಶಿವಪುರ ಸುಮಾರು 7.50 ಲಕ್ಷ ರೂಪಾಯಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ದುರ್ಬಳಕೆ ಮಾಡಿದ್ದರು. ಪ್ರಕರಣ ಗಮನಕ್ಕೆ ಬಂದ ಬಳಿಕ ವಿಚಾರಣೆ ನಡೆಸಿದ ಶಿವಪುರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅಶೋಕ್‌ ಮಂಜುನಾಥ್‌ ಗೆ ನೋಟೀಸ್‌ ನೀಡಿದ್ದು ಸುಮಾರು 3 ಲಕ್ಷ ರೂಪಾಯಿಯನ್ನು ಪಂಚಾಯಿತಿಗೆ ಮರು ಪಾವತಿ ಮಾಡಿದ್ದರು. ಉಳಿದ ಹಣವನ್ನು ಪಾವತಿ ಮಾಡದೆ ವಂಚಿಸಿದ್ದಾರೆ ಎಂದು ಪಿಡಿಒ ಮಾಹಿತಿ ನೀಡಿದ್ದಾರೆ.


ಇದೀಗ ಶಿವಪುರ ಗ್ರಾಮ ಪಂಚಾಯತಿಯಲ್ಲಿ ಬಿಲ್ಲು ವಸೂಲಿಗನಾದ ಪಂಚಾಯತ್‌ ಸಿಬ್ಬಂದಿ ಮಂಜುನಾಥ 2023-24 ನೇ ಸಾಲಿನಲ್ಲಿ 1,18,367 ರೂ ಹಣ ಹಾಗೂ 2024-25 ರಲ್ಲಿ 3,36,021 ರೂ ಮನೆ ತೆರಿಗೆಯಲ್ಲಿ ವಸೂಲಾದ ಒಟ್ಟು 4,54,388 ರೂ ಹಣವನ್ನು ಪಂಚಾಯತಿ ಬ್ಯಾಂಕ್‌ ಖಾತೆಗೆ ಜಮಾ ಮಾಡದೆ ತನ್ನ ಸ್ವಂತಕ್ಕೆ ಬಳಸಿಕೊಂಡು ಹಣದ ದುರ್ಬಳಕೆ ಮಾಡಿಕೊಂಡು ನಂಬಿಕೆ ದ್ರೋಹ ಎಸಗಿ ಮೋಸ ಮಾಡಿದ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recently Updated:

ಪೆರಡೂರಿನಲ್ಲಿ 94-ಸಿ ಉಲ್ಲಂಘನೆ ಆರೋಪ: ವಾಸದ ಮನೆಗೆ ಮೀಸಲಾದ ಜಮೀನಿನಲ್ಲಿ ವಾಣಿಜ್ಯ ಕಟ್ಟಡ.? ತನಿಖೆಗೆ ಆಗ್ರಹ ಸರ್ಕಾರಿ ಜಮೀನು ಲೂಟಿ ಆರೋಪ ಬಯಲು – ಸಾಕ್ಷ್ಯ ಸಮೇತ ‘ಪಬ್ಲಿಕ್ ಫೈಲ್’ ವಿಶೇಷ ವರದಿ ಶೀಘ್ರದಲ್ಲಿ..ಪೆರಡೂರಿನಲ್ಲಿ 94-ಸಿ ಉಲ್ಲಂಘನೆ ಆರೋಪ: ವಾಸದ ಮನೆಗೆ ಮೀಸಲಾದ ಜಮೀನಿನಲ್ಲಿ ವಾಣಿಜ್ಯ ಕಟ್ಟಡ.? ತನಿಖೆಗೆ ಆಗ್ರಹ ಸರ್ಕಾರಿ ಜಮೀನು ಲೂಟಿ ಆರೋಪ ಬಯಲು – ಸಾಕ್ಷ್ಯ ಸಮೇತ ‘ಪಬ್ಲಿಕ್ ಫೈಲ್’ ವಿಶೇಷ ವರದಿ ಶೀಘ್ರದಲ್ಲಿ..
ಸರ್ಕಾರಿ ಆಸ್ಪತ್ರೆಯಲ್ಲಿ ಗೂಂಡಾಗಿರಿ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ.!ಸರ್ಕಾರಿ ಆಸ್ಪತ್ರೆಯಲ್ಲಿ ಗೂಂಡಾಗಿರಿ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ.!
ಕೋಡಿಬೆಂಗ್ರೆ ಸುವರ್ಣ-ಸಮುದ್ರದ ಸಂಗಮದಲ್ಲಿ ಮೀನುಗಾರರ ಹೊಸ ಆಶಾಕಿರಣ..ಕೋಡಿಬೆಂಗ್ರೆ ಸುವರ್ಣ-ಸಮುದ್ರದ ಸಂಗಮದಲ್ಲಿ ಮೀನುಗಾರರ ಹೊಸ ಆಶಾಕಿರಣ..
ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..
ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..
ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ವಾರ್ಷಿಕೋತ್ಸವ ಸಂಭ್ರಮ.*  ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ ಪ್ರತಿಷ್ಠಿತ ಸ್ವಾತಂತ್ರ್ಯ ಸೇನಾನಿ ಪ್ರಶಸ್ತಿ    *ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿ ಪ್ರಧಾನ.* ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ವಾರ್ಷಿಕೋತ್ಸವ ಸಂಭ್ರಮ.* ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ ಪ್ರತಿಷ್ಠಿತ ಸ್ವಾತಂತ್ರ್ಯ ಸೇನಾನಿ ಪ್ರಶಸ್ತಿ *ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿ ಪ್ರಧಾನ.*
ಮನ್ವಿತ್ ಧೈರ್ಯಕ್ಕೆ ಡಿಕೆ ಶಿವಕುಮಾರ್ ಮೆಚ್ಚುಗೆ ಸಮಯಪ್ರಜ್ಞೆಯಿಂದ ದಾಸೋಹ ಸಿಬ್ಬಂದಿ ಜೀವ ರಕ್ಷಿಸಿದ ಬಂಟ್ವಾಳ ಬಾಲಕ..ಮನ್ವಿತ್ ಧೈರ್ಯಕ್ಕೆ ಡಿಕೆ ಶಿವಕುಮಾರ್ ಮೆಚ್ಚುಗೆ ಸಮಯಪ್ರಜ್ಞೆಯಿಂದ ದಾಸೋಹ ಸಿಬ್ಬಂದಿ ಜೀವ ರಕ್ಷಿಸಿದ ಬಂಟ್ವಾಳ ಬಾಲಕ..
ಹೆಬ್ರಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಯಲು: ವಿಡಿಯೋ ವೈರಲ್, ಸ್ಥಳಕ್ಕೆ ಧಾವಿಸಿದ ಹೋರಾಟಗಾರರು. ಯಾವೂದೇ ಸಮಸ್ಯೆಗಳಿಲ್ಲ ಎಂದ ಡಾ. ಸಂತೋಷ್ ಕುಮಾರ್. ಹೆಬ್ರಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಯಲು: ವಿಡಿಯೋ ವೈರಲ್, ಸ್ಥಳಕ್ಕೆ ಧಾವಿಸಿದ ಹೋರಾಟಗಾರರು. ಯಾವೂದೇ ಸಮಸ್ಯೆಗಳಿಲ್ಲ ಎಂದ ಡಾ. ಸಂತೋಷ್ ಕುಮಾರ್.
ಕಠಿಣ ಪರಿಶ್ರಮಕ್ಕೆ ಫಲ ಕಂದಾಯ  ರಾಜ್ಯಪ್ಪ ನಿರೀಕ್ಷಕರಾಗಿ ಪದೋನ್ನತಿ ಹೊಂದಿದ ರಾಚಪ್ಪಜಿ ಅವರಿಗೆ ಅಭಿನಂದನೆ.ಕಠಿಣ ಪರಿಶ್ರಮಕ್ಕೆ ಫಲ ಕಂದಾಯ ರಾಜ್ಯಪ್ಪ ನಿರೀಕ್ಷಕರಾಗಿ ಪದೋನ್ನತಿ ಹೊಂದಿದ ರಾಚಪ್ಪಜಿ ಅವರಿಗೆ ಅಭಿನಂದನೆ.