ಪಬ್ಲಿಕ್ ಫೈಲ್ ನ್ಯೂಸ್ ನೆಟ್‌ವರ್ಕ್ ಇದು ನಿಮ್ಮದೇ ಧ್ವನಿ 🔥 ಬ್ರೇಕಿಂಗ್ ಸ್ಟೋರಿ - ಅತಿ ಶೀಘ್ರದಲ್ಲಿ 🔥 ದೈವ ದರ್ಶನದ ಪಾತ್ರೆಯ ಮುಖವಾಡದ ಕರಾಳ ಚರಿತ್ರೆ..! ದೈವದ ಹೆಸರಿನಲ್ಲಿ ದ್ರೋಹವೇ? 15 ದಿನದಲ್ಲಿ ಬದಲಾದ ದೈವದ ನುಡಿ! 80 ವರ್ಷದ ವೃದ್ಧರ ಕಣ್ಣೀರಿನ ಕಥೆ. ದೈವ ಒಂದಾಗು ಎಂದಿತು.. ಪಾತ್ರೆ ದೂರವಿರು

16 Sep 2026
ಕರಾವಳಿ

ದೈವಾರಾಧನೆ - ಕರಾವಳಿಯ ಆತ್ಮ 🙏


ತುಳುನಾಡಿನ ಮಣ್ಣಿನಲ್ಲಿ ದೈವಾರಾಧನೆ ಎಂದರೆ ಕೇವಲ ಒಂದು ಆಚರಣೆಯಲ್ಲ, ಅದು ನಮ್ಮ ಬದುಕು, ನಮ್ಮ ಸಂಸ್ಕಾರ, ನಮ್ಮ ತಲೆಮಾರುಗಳಿಂದ ಬಂದ ಪವಿತ್ರ ನಂಬಿಕೆ.


ದೈವದ ಸನ್ನಿಧಿಯಲ್ಲಿ ಕಣ್ಣೀರು ಒರೆಸಿಕೊಂಡವರು ಎಷ್ಟೋ ಮಂದಿ, ನ್ಯಾಯ ಪಡೆದವರು ಎಷ್ಟೋ ಮಂದಿ. ದೈವದ ನುಡಿ ಎಂದರೆ ನಮಗೆ ವೇದವಾಕ್ಯ. ಅಲ್ಲಿ ಸುಳ್ಳಿಗೆ ಜಾಗವಿಲ್ಲ, ಸ್ವಾರ್ಥಕ್ಕೆ ಅವಕಾಶವಿಲ್ಲ.


ಆದರೆ ಇತ್ತೀಚೆಗೆ ನಡೆದ ಒಂದು ಘಟನೆ ಭಕ್ತರ ಮನಸ್ಸಿನಲ್ಲಿ ನೋವಿನ ಪ್ರಶ್ನೆಯನ್ನು ಹುಟ್ಟುಹಾಕಿದೆ...


80 ವರ್ಷದ ಒಬ್ಬ ವೃದ್ಧ ಭಕ್ತ, ಜೀವನಪೂರ್ತಿ ದೈವವನ್ನು ನಂಬಿ ಬದುಕಿದವರು. 15 ದಿನಗಳ ಹಿಂದೆ ಒಂದು ದೈವ ದರ್ಶನದಲ್ಲಿ ಅವರಿಗೆ ಹೇಳಲಾಯಿತು —

"ನೀವೆಲ್ಲ ಒಂದಾಗಿ, ಆಸ್ತಿ ವ್ಯಾಜ್ಯವನ್ನು ನ್ಯಾಯಾಲಯದಲ್ಲಿ ತೀರ್ಮಾನ ಮಾಡಿಕೊಳ್ಳಿ, ನನಗೆ ನಿಮ್ಮ ಕುಟುಂಬದ ಒಗ್ಗಟ್ಟು ಮಾತ್ರ ಬೇಕು."


ಆ ಮಾತನ್ನು ದೈವದ ಆಶೀರ್ವಾದವೆಂದು ಸ್ವೀಕರಿಸಿ, ಕಣ್ಣಲ್ಲಿ ನೀರು ತುಂಬಿಕೊಂಡು ಮನೆಗೆ ಹೋದ ಆ ಕುಟುಂಬಕ್ಕೆ 15 ದಿನಗಳ ನಂತರ ಮತ್ತೊಂದು ದರ್ಶನದಲ್ಲಿ ದೈವ ಅದೇ ಪಾತ್ರೆ ಮಾತ್ರ ಬೇರೆ ಆಗಿರುತ್ತಾರೆ ಹೇಳಲಾಗುತ್ತದಂತೆ —

"ಕೇಸ್ ಹಿಂಪಡೆದರೆ ಮಾತ್ರ ಇಲ್ಲಿಗೆ ಬನ್ನಿ, ಇಲ್ಲವಾದರೆ ನೀವು ಕಟ್ಟಿದ ಮುಡಿಯನ್ನು ವಾಪಸ್ ತೆಗೆದುಕೊಂಡು ಹೋಗಿ."


ಇಗ ಭಕ್ತರ ಮನದಲ್ಲಿ ಮೂಡಿರುವ ಮುಗ್ಧ ಪ್ರಶ್ನೆಗಳು ಇವು...


ದೈವ 15 ದಿನಗಳಲ್ಲಿ ತನ್ನ ನುಡಿಯನ್ನು ಬದಲಾಯಿಸುತ್ತದೆಯೇ...?

ದೈವ ಒಂದಾಗು ಎಂದು ಹೇಳಿ, ಮತ್ತೆ ದೂರವಿರು ಎಂದು ಹೇಳುತ್ತದೆಯೇ...?

ಮುಡಿ ಕಾಣಿಕೆ ದೈವಕ್ಕೆ ಸಲ್ಲಿಸಿದ ಭಕ್ತಿ, ಅದನ್ನು ಹಿಂಪಡೆಯಿರಿ ಎನ್ನುವುದು ಧರ್ಮವೇ...?

ದೈವ ಹೇಳಿದಂತೆ ಕಟ್ಟಿದ ಕಾಣಿಕೆಯನ್ನು ನಾನು ಏನು

ಮಾಡಬೇಕು.? 80 ವರ್ಷದ ವೃದ್ಧರ ಪ್ರಶ್ನೆ ಇದು.


ನಾವು ದೈವವನ್ನು ಪ್ರಶ್ನಿಸುತ್ತಿಲ್ಲ, ದೈವದ ಪಾವಿತ್ರ್ಯವನ್ನು ಶಂಕಿಸುತ್ತಿಲ್ಲ. ನಮ್ಮ ಪ್ರಶ್ನೆ ಕೇವಲ ಇಷ್ಟೇ — ದೈವದ ಹೆಸರಿನಲ್ಲಿ ಮಾತನಾಡುವಾಗ, ಆ ಮಾತು ನಿಜಕ್ಕೂ ದೈವದ್ದೇ ಆಗಿರಬೇಕಲ್ಲವೇ...? ಮನುಷ್ಯರ ಸ್ವಾರ್ಥ, ಆಸ್ತಿಯ ವ್ಯಾಜ್ಯ, ಕುಟುಂಬದ ಜಗಳಗಳು ದೈವದ ಸನ್ನಿಧಿಯನ್ನು ಬಳಸಿಕೊಳ್ಳಬಾರದಲ್ಲವೇ...?


ದೈವಾರಾಧನೆಯ ಘನತೆಗೆ ಧಕ್ಕೆ ಬರಬಾರದು, ಯಾವ ಭಕ್ತನಿಗೂ ಅನ್ಯಾಯವಾಗಬಾರದು, 80 ವರ್ಷದ ವೃದ್ಧರ ಕಣ್ಣೀರಿಗೆ ಕಾರಣವಾಗಬಾರದು ಎಂಬುದೇ ನಮ್ಮ ಕಳಕಳಿಯ ಮನವಿ.


ಸತ್ಯ ಏನೆಂಬುದು ದೈವಕ್ಕೇ ಗೊತ್ತು. ಆದರೆ ಸತ್ಯ ಬೆಳಕಿಗೆ ಬರಬೇಕು, ಧರ್ಮ ಉಳಿಯಬೇಕು, ಭಕ್ತರ ನಂಬಿಕೆ ಅಲುಗಾಡಬಾರದು.


ಇದು ಆರೋಪವಲ್ಲ, ಇದು ಭಕ್ತಿಯಿಂದ ಹುಟ್ಟಿದ ಪ್ರಶ್ನೆ 🙏

ದೈವ ಸತ್ಯದ ಜೊತೆಗಿದೆ, ಧರ್ಮ ಸತ್ಯದ ಜೊತೆಗಿದೆ.

Recently Updated:

ಪೆರಡೂರಿನಲ್ಲಿ 94-ಸಿ ಉಲ್ಲಂಘನೆ ಆರೋಪ: ವಾಸದ ಮನೆಗೆ ಮೀಸಲಾದ ಜಮೀನಿನಲ್ಲಿ ವಾಣಿಜ್ಯ ಕಟ್ಟಡ.? ತನಿಖೆಗೆ ಆಗ್ರಹ ಸರ್ಕಾರಿ ಜಮೀನು ಲೂಟಿ ಆರೋಪ ಬಯಲು – ಸಾಕ್ಷ್ಯ ಸಮೇತ ‘ಪಬ್ಲಿಕ್ ಫೈಲ್’ ವಿಶೇಷ ವರದಿ ಶೀಘ್ರದಲ್ಲಿ..ಪೆರಡೂರಿನಲ್ಲಿ 94-ಸಿ ಉಲ್ಲಂಘನೆ ಆರೋಪ: ವಾಸದ ಮನೆಗೆ ಮೀಸಲಾದ ಜಮೀನಿನಲ್ಲಿ ವಾಣಿಜ್ಯ ಕಟ್ಟಡ.? ತನಿಖೆಗೆ ಆಗ್ರಹ ಸರ್ಕಾರಿ ಜಮೀನು ಲೂಟಿ ಆರೋಪ ಬಯಲು – ಸಾಕ್ಷ್ಯ ಸಮೇತ ‘ಪಬ್ಲಿಕ್ ಫೈಲ್’ ವಿಶೇಷ ವರದಿ ಶೀಘ್ರದಲ್ಲಿ..
ಸರ್ಕಾರಿ ಆಸ್ಪತ್ರೆಯಲ್ಲಿ ಗೂಂಡಾಗಿರಿ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ.!ಸರ್ಕಾರಿ ಆಸ್ಪತ್ರೆಯಲ್ಲಿ ಗೂಂಡಾಗಿರಿ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ.!
ಕೋಡಿಬೆಂಗ್ರೆ ಸುವರ್ಣ-ಸಮುದ್ರದ ಸಂಗಮದಲ್ಲಿ ಮೀನುಗಾರರ ಹೊಸ ಆಶಾಕಿರಣ..ಕೋಡಿಬೆಂಗ್ರೆ ಸುವರ್ಣ-ಸಮುದ್ರದ ಸಂಗಮದಲ್ಲಿ ಮೀನುಗಾರರ ಹೊಸ ಆಶಾಕಿರಣ..
ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..
ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..
ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ವಾರ್ಷಿಕೋತ್ಸವ ಸಂಭ್ರಮ.*  ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ ಪ್ರತಿಷ್ಠಿತ ಸ್ವಾತಂತ್ರ್ಯ ಸೇನಾನಿ ಪ್ರಶಸ್ತಿ    *ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿ ಪ್ರಧಾನ.* ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ವಾರ್ಷಿಕೋತ್ಸವ ಸಂಭ್ರಮ.* ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ ಪ್ರತಿಷ್ಠಿತ ಸ್ವಾತಂತ್ರ್ಯ ಸೇನಾನಿ ಪ್ರಶಸ್ತಿ *ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿ ಪ್ರಧಾನ.*
ಹೆಬ್ರಿ ಶಿವಪುರದಲ್ಲಿ ತೆರಿಗೆ ಹಣ ನುಂಗಿದ ಗ್ರಾ.ಪಂ ಸಿಬ್ಬಂದಿ.! 7.50 ಲಕ್ಷ ರೂ. ಗೋಲ್‌ಮಾಲ್. ಪಂಚಾಯಿತಿ ಸೇವೆಯಿಂದ ವಜಾ ಮಾಡಿ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲು.ಹೆಬ್ರಿ ಶಿವಪುರದಲ್ಲಿ ತೆರಿಗೆ ಹಣ ನುಂಗಿದ ಗ್ರಾ.ಪಂ ಸಿಬ್ಬಂದಿ.! 7.50 ಲಕ್ಷ ರೂ. ಗೋಲ್‌ಮಾಲ್. ಪಂಚಾಯಿತಿ ಸೇವೆಯಿಂದ ವಜಾ ಮಾಡಿ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲು.
ಮನ್ವಿತ್ ಧೈರ್ಯಕ್ಕೆ ಡಿಕೆ ಶಿವಕುಮಾರ್ ಮೆಚ್ಚುಗೆ ಸಮಯಪ್ರಜ್ಞೆಯಿಂದ ದಾಸೋಹ ಸಿಬ್ಬಂದಿ ಜೀವ ರಕ್ಷಿಸಿದ ಬಂಟ್ವಾಳ ಬಾಲಕ..ಮನ್ವಿತ್ ಧೈರ್ಯಕ್ಕೆ ಡಿಕೆ ಶಿವಕುಮಾರ್ ಮೆಚ್ಚುಗೆ ಸಮಯಪ್ರಜ್ಞೆಯಿಂದ ದಾಸೋಹ ಸಿಬ್ಬಂದಿ ಜೀವ ರಕ್ಷಿಸಿದ ಬಂಟ್ವಾಳ ಬಾಲಕ..
ಹೆಬ್ರಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಯಲು: ವಿಡಿಯೋ ವೈರಲ್, ಸ್ಥಳಕ್ಕೆ ಧಾವಿಸಿದ ಹೋರಾಟಗಾರರು. ಯಾವೂದೇ ಸಮಸ್ಯೆಗಳಿಲ್ಲ ಎಂದ ಡಾ. ಸಂತೋಷ್ ಕುಮಾರ್. ಹೆಬ್ರಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಯಲು: ವಿಡಿಯೋ ವೈರಲ್, ಸ್ಥಳಕ್ಕೆ ಧಾವಿಸಿದ ಹೋರಾಟಗಾರರು. ಯಾವೂದೇ ಸಮಸ್ಯೆಗಳಿಲ್ಲ ಎಂದ ಡಾ. ಸಂತೋಷ್ ಕುಮಾರ್.