ಹೆಬ್ರಿ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ಸರಿಯಾದ ಸಮಯಕ್ಕೆ ತೆರವುಗೊಳಿಸದ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಮರ ಬಿದ್ದು ಆಕಸ್ಮಿಕವಾಗಿ ನಿಧನರಾದ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪ್ರಗತಿಪರ ನಾಗರಿಕ ಸೇವಾ ಸಮಿತಿ ಕಾರ್ಕಳ, ಮತ್ತು ಹೆಬ್ರಿ ತಾಲೂಕು ವಿವಿಧ ಸಂಘಟನೆಗಳಿಂದ ಹೆಬ್ರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಾದ್ಯಂತ ರಸ್ತೆ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ನಿಂತಿರುವ ಮರಗಳು ಮಳೆಗಾಲದಲ್ಲಿ ಬಿದ್ದು ಹಲವು ಅನಾಹುತಗಳಿಗೆ ಕಾರಣವಾಗಿವೆ. ಇದರಿಂದ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಹಲವು ಬಾರಿ ಲಿಖಿತ ಮನವಿ ನೀಡಿದರೂ ಅರಣ್ಯ ಇಲಾಖೆ ಗಮನ ಹರಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು
ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು
ಹೆಬ್ರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು 15 ದಿನಗಳ ಒಳಗೆ ತೆರವುಗೊಳಿಸಬೇಕು.
ಜಿಲ್ಲೆಯಾದ್ಯಂತ ಅಪಾಯಕಾರಿ ಮರಗಳ ಸಮೀಕ್ಷೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಗತಿಪರ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷರು
ಶ್ರೀ ಸಂಜೀವ ಶೆಟ್ಟಿ ಕೆರೆಬೆಟ್ಟು,
ಪದಾಧಿಕಾರಿಗಳು, ಪದಾಧಿಕಾರಿಗಳಾದ
ಶ್ರೀ ಸತೀಶ್ ಶೆಟ್ಟಿ ಮುಟ್ಲುಪಾಡಿ,
ಕನ್ನಡಪರ ಸಂಘಟನೆಗಳ ಮುಖಂಡರು
ಶ್ರೀ ಅಣ್ಣಪ್ಪ ಕುಲಾಲ್ ,ಸಾಮಾಜಿಕ ಹೋರಾಟಗಾರರು ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡರು , ಹೆಬ್ರಿ
ಶ್ರೀ ಕೃಷ್ಣ ಶೆಟ್ಟಿ ವಕೀಲರು ಹೆಬ್ರಿ "ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಅರಣ್ಯ ಇಲಾಖೆಯ ವಿರುದ್ಧ ಈ ಹೋರಾಟ ಅನಿವಾರ್ಯವಾಗಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಇನ್ನಷ್ಟು ಉಗ್ರ ಹೋರಾಟ ನಡೆಸಲಾಗುವುದು" ಎಂದು ಎಚ್ಚರಿಕೆ ನೀಡಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. 20 ದಿನಗಳ ಒಳಗೆ ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಮರ ಬಿದ್ದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲಾಗುವುದೆಂದು ಭರವಸೆ ನೀಡಿದರು.
ನಂತರ ಪ್ರತಿಭಟನಾಕಾರರು ಹೆಬ್ರಿ ತಹಶೀಲ್ದಾರರಿಗೂ ಮನವಿ ಪತ್ರ ಸಲ್ಲಿಸಿದರು ಮನವಿಯಲ್ಲಿ 20 ದಿನಗಳ ಒಳಗೆ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರಸ್ತೆ ಬದಿಯ ಅಪಾಯಕಾರಿ ಮರಗಳನ್ನು 20 ದಿನಗಳ ಒಳಗೆ ತೆರವುಗೊಳಿಸದಿದ್ದರೆ ಮತ್ತು ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡದಿದ್ದರೆ ಹೆಬ್ರಿ ಪಟ್ಟಣವನ್ನು ಬಂದ್ ಮಾಡಲಾಗುವುದು ಎಂದು ಪ್ರಗತಿಪರ ನಾಗರಿಕ ಸೇವಾ ಸಮಿತಿ ಎಚ್ಚರಿಕೆ ನೀಡಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಿದವರು
ಶ್ರೀ ಸಂಜೀವ ಶೆಟ್ಟಿ ಕೆರೆಬೆಟ್ಟು
ಅಧ್ಯಕ್ಷರು, ನಾಗರಿಕ ಹೋರಾಟ ಸಮಿತಿ ಹೆಬ್ರಿ
ಶ್ರೀ ಸತೀಶ್ ಶೆಟ್ಟಿ ಮುಟ್ಲುಪಾಡಿ,
ಕನ್ನಡಪರ ಸಂಘಟನೆಗಳ ಮುಖಂಡರು
ಶ್ರೀ ಅಣ್ಣಪ್ಪ ಕುಲಾಲ್ ,ಸಾಮಾಜಿಕ ಹೋರಾಟಗಾರರು ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡರು , ಹೆಬ್ರಿ
ಶ್ರೀ ಕೃಷ್ಣ ಶೆಟ್ಟಿ ವಕೀಲರು ಹೆಬ್ರಿ
ಹುಣಸೆ ಆಡಿ ಸುರೇಶ್ ಶೆಟ್ಟಿ
ಗುಳ್ಕಾಡು ಭಾಸ್ಕರ್ ಶೆಟ್ಟಿ
ಉದಯ ನಾಯಕ್, ಸಂತೆಕಟ್ಟೆ
ರಘುರಾಮ ಶೆಟ್ಟಿ, ಸಂತೆಕಟ್ಟೆ
ನರಸಿಂಹ ನಾಯಕ್, ಸಂತೆಕಟ್ಟೆ
ರಂಗನಾಥ ಪೂಜಾರಿ ,ಸೀತಾ ನದಿ
ನಿತೀಶ್ ಎಸ್ .ಪಿ ಹೆಬ್ರಿ
ಪ್ರವೀಣ್ ಸೂಡ, ಕೆರೆ ಬೆಟ್ಟು
ಆಟೋ ಮಾಲಕ ಚಾಲಕರು ಹೆಬ್ರಿ
ಟ್ಯಾಕ್ಸಿಮನ್ ಮ್ಯಾಕ್ಸ್ ಕ್ಯಾಬ್ ಚಾಲಕ ಮಾಲಕರು, ಹೆಬ್ರಿ
ಹರೀಶ್ ಪೂಜಾರಿ ತುಳಸಿ ಆರ್ಟ್ಸ್ ,ಹೆಬ್ರಿ ಹಾಗೂ
ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸ್ಥಳೀಯರು ಮತ್ತು ಯುವಕರು ಭಾಗವಹಿಸಿದ್ದರು.








