ವಾಟ್ಸಪ್ ಎಂಬ ಹೈಟೆಕ್ ಲೋಕದಲ್ಲಿ ಮಟ್ಕಾ ದಂದೆ..!?

01 Feb 2025
ರಾಜ್ಯ

ಹಾವೇರಿಯಲ್ಲಿ ಕೆಟ್ಟ ದಂದೆಯ ಆಟ ಮತ್ತು ಚಟಗಳು ಅತಿಯಾಗಿ ಅದು ಮಾನವ ಜನಾಂಗವನ್ನು ಹಾಳು ಮಾಡುತ್ತಿದೆ, ಇದು ಸಮಾಜಕ್ಕೆ ಮಾರಕ..ಇಂತಹ ವಿಷಯಗಳಿಗೆ ಕಡಿವಾಣ ಹಾಕಬೇಕಾಗಿದೆ ಈ ಪೀಠಿಕೆ ಏಕೆಂದರೆ ನಗರದಲ್ಲಿ ನಡೆಯುವ ಕೆಲವೊಂದು ಅಕ್ರಮ ಕೆಟ್ಟ ಚಟಗಳ ಬಗ್ಗೆ ಗಮನಹರಿಸಿ ನಿಯಂತ್ರಿಸಲು ನಗರ ಗ್ರಾಮೀಣ ಪ್ರದೇಶಗಳಲ್ಲಿ ಬಡ ಕೂಲಿ ಕಾರ್ಮಿಕರ ಚಟುವಟಿಕೆಗಳು ದಿನ ಬೆಳಗಾದರೆ ದಿನನಿತ್ಯ ಕೂಲಿ ಕೆಲಸ ಮಾಡುತ್ತಾ ಬಂದ ಮೂರು ಕಾಸಿನಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ, ಆದರೆ ಇಂದು ಜಿಲ್ಲೆಯಲ್ಲಿ ವ್ಯಾಪಕವಾಗಿ ಬೇರು ಬಿಟ್ಟಿರುವ ಹೈಟೆಕ್ ವಾಟ್ಸಪ್ ಮಟ್ಕಾ ದಂದೆ ದಿನ ಬೆಳಗೆದ್ದು ಮೂರು ಗೇಣಿನ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುವ ಬಡ ಕೂಲಿ ಕಾರ್ಮಿಕರೇ ಈ ದಂದೆಯಲ್ಲಿ ಪ್ರಮುಖ ಟಾರ್ಗೆಟ್ ಆಗಿಬಿಟ್ಟಿದ್ದಾರೆ..! ಕಷ್ಟಪಟ್ಟು ದುಡಿಯುವ ಈ ಬಡ ಜನರು ಮಟ್ಕಾ ದಂದೆ ಚಟಕ್ಕೆ ಬಲಿಯಾಗಿ ತಮ್ಮ ಕುಟುಂಬವನ್ನು ಬೀದಿಗೆ ತಂದು ಹಾಳು ಮಾಡಿ ತಮ್ಮ ಕುಟುಂಬವನ್ನು ತಾವೇ ಸರ್ವನಾಶ ಮಾಡುತ್ತಿದ್ದಾರೆ.. ನೆಮ್ಮದಿಯಿಂದ ಇದ್ದ ಬಡ ಕುಟುಂಬಗಳು ಈ ಮಟ್ಕಾ ದಂದೆಗೆ ಬಲಿಯಾಗಿ ತಮ್ಮ ಕುಟುಂಬದ ನೆಮ್ಮದಿ ಶಾಂತಿ, ಸುಖವನ್ನು ನಾಶ ಮಾಡಿಕೊಂಡಿರುವುದು ತಮ್ಮ ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿರುವುದು ಒಂದು ಹೊತ್ತಿನ ಅನ್ನಕ್ಕಾಗಿ ಪರದಾಡುತ್ತಿರುವುದು ಇಡೀ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಒದ್ದಾಡುತ್ತಿರುವುದು ಅಯ್ಯೋ ಹೇಳತೀರದಾಗಿದೆ ಈ ದಂದೆ ವ್ಯಾಪಕವಾಗಿ ಬೆಳೆದಿದ್ದು.. ಹೇಳೋರು ಕೇಳೋರು ಇಲ್ಲ..! ಅಂದಮೇಲೆ ಇದರ ಹಿಂದೆ ಎಷ್ಟು ದೊಡ್ಡ ಮಟ್ಟದ ಬಲಿಷ್ಠ ಶಕ್ತಿ ಅಡಗಿದೆ ಎಂದು ತಮಗೆ ಈಗಾಗಲೇ ತಿಳಿದಿರಬೇಕು ಅದನ್ನು ನಾವು ಮತ್ತೆ ಬಾಯಿ ಬಿಟ್ಟು ಹೇಳುವ ಅವಶ್ಯಕತೆ ಇಲ್ಲ ಅಂದುಕೊಳ್ಳುತ್ತೇನೆ, ಮಟ್ಕಾ ದಂದೆ ಕೋರರು ಈ ಆಟಕ್ಕೆ ಹೈಟೆಕ್ ಸ್ಪರ್ಶ ನೀಡಿದ್ದು ಆನ್ಲೈನ್ ಮತ್ತು ವಾಟ್ಸಪ್ ಗಳ ಮೂಲಕ ಬರೆದು ಕೊಳ್ಳುವಂತಹ ಜಾಣತನದ ಶೈಲಿಯನ್ನು ಕಲಿತಿದ್ದಾರೆ ಮತ್ತು ಉಪಯೋಗಿಸುತ್ತಿದ್ದಾರೆ. ಇದರಿಂದಾಗಿ ಕೆಲವು ಕೂಲಿ ಕಾರ್ಮಿಕರು ಯುವಕರು ಮತ್ತು ವಿದ್ಯಾರ್ಥಿಗಳು ಅಷ್ಟೇ ಅಲ್ಲದೆ ಕೆಲವು ಸರಕಾರಿ ನೌಕರರು ಕೂಡ ಯಾರದೇ ಭಯವಿಲ್ಲದೆ ಅತ್ಯಂತ ಸರಳವಾಗಿ ಮಟ್ಕಾ ದಂದೆಯಲ್ಲಿ ಭಾಗವಹಿಸಿ ಹಣ ಕಳೆದು ಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ಮಟ್ಟ ಹಾಕಬೇಕಾದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿರುವುದು ತಿಳಿಯದಾಗಿದೆ..!? ಇತ್ತೀಚಿಗೆ ಗ್ರಾಮೀಣ ಭಾಗದಲ್ಲಿ ದಿನದಿಂದ ದಿನಕ್ಕೆ ಇದೊಂದೇ ಹೆಚ್ಚು ನಡೆಯುತ್ತಿದೆ, ಸ್ಥಳೀಯರೇ ಮಟ್ಕಾ ಆಡಿಸಲು ಶುರು ಮಾಡಿಕೊಂಡಿರುವುದರಿಂದ ಬಡ ಜನರು, ಕೂಲಿಕಾರರು, ಅಮಾಯಕ ಜನರು, ವಿದ್ಯಾರ್ಥಿಗಳು ತಮ್ಮ ಉಜ್ವಲವಾದ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು ಇದರಿಂದಾಗಿ ಇವರ ಕುಟುಂಬಗಳು ಬೀದಿಗೆ ಬಂದಿರುವುದಲ್ಲದೆ ಆರ್ಥಿಕವಾಗಿ ಹಿಂದುಳಿದಿದ್ದು ಬಳಲಿ ಬಳಲಿ ಬದುಕು ಸಾಗಿಸುವುದೇ ಕಷ್ಟವಾಗುತ್ತಿದೆ.. ಕಷ್ಟ ನಷ್ಟಗಳನ್ನು ತಾವಾಗಿಯೇ ತಮ್ಮ ಮೈ ಮೇಲೆ ಸುರಿದುಕೊಂಡು ಮನೆ ಮಠ ಮಾರಿಕೊಳ್ಳುವ ಹಂತಕ್ಕೆ ಬಂದಿದ್ದಾರೆ ಹಾಗಾದರೆ ಇವರ ಕುಟುಂಬಗಳಿಗೆ ಹೊಣೆಗಾರರು ಯಾರು....?

ಈ ಪ್ರಶ್ನೆಗೆ ಉತ್ತರ ನೀಡುವವರು ಯಾರು? ಎಂಬ ಸಂಶಯಾಸ್ಪದಕ್ಕೆ ಉತ್ತರವೇ ಇಲ್ಲ ಅದು ನಿಗೂಢವಾಗಿ ಉಳಿಯಬಾರದೆಂಬುದು ನಮ್ಮ ಕಾಳಜಿ ಮತ್ತು ಸುಧಾರಣೆಯ ಅಂಶವಾಗಿದೆ, ಗ್ರಾಮೀಣ ಪ್ರದೇಶಗಳ ಮಹಿಳೆಯರು ಈ ಮಟ್ಕಾ ಹಾವಳಿಯಿಂದಾಗಿ ಬೇಸತ್ತು ಹೋಗಿದ್ದಾರೆ, ಪ್ರತಿ ದಿನ ಕೆಲಸಕ್ಕೆ ಹೋಗುತ್ತಾ ಈ ಚಟಕ್ಕೆ ದಾಸನಾಗಿ ಸಹವಾಸ ದೋಷದಿಂದ ಸಂಗಡಿಗರ ಜೊತೆ ಕಾಲಹರಣ ಮಾಡುತ್ತಾ ಅಲೆದಾಡುತ್ತಿರುವುದನ್ನು ನೋಡಿ ಮಹಿಳೆಯರು ಹೊಟ್ಟೆಗೆ ಹಿಟ್ಟಿಲ್ಲದೆ ಅನಿವಾರ್ಯವಾಗಿ ತಾವೇ ಕೂಲಿ ನಾಲಿ ಮಾಡಲು ಹೋಗಬೇಕಾದ ಸಂಕಷ್ಟದ ಪರಿಸ್ಥಿತಿಗೆ ಕಣ್ಣೀರು ಸುರಿಸುತ್ತಿದ್ದಾರೆ.. ನಾವೇ ಕೂಲಿ ಮಾಡಿ ತಂದು ಹಾಕಿದ ಹಣವನ್ನು ತಮ್ಮ ಗಂಡಂದಿರು ಕದ್ದು ಕೊಂಡು ಹೋಗಿ ಮಟ್ಕಾ ತಂದೆಗೆ ಸುರಿಯುತ್ತಿದ್ದಾರೆ ಮನೆಯಲ್ಲಿದ್ದ ಪಾತ್ರೆ ಪಂಗಡಗಳನ್ನು ಕೂಡ ಕದ್ದು ಮಾರಾಟ ಮಾಡಿ ಮನೆಯನ್ನು ನರಕ ಸದೃಶ ವಾತಾವರಣವನ್ನಾಗಿ ಸೃಷ್ಟಿಸಿರುವುದು ಕುಟುಂಬದವರಿಗೆ ದಿಕ್ಕು ತೋಚದಂತಾಗಿದೆ, ಇದೆಲ್ಲವನ್ನು ನೋಡಿದರೆ ಕಣ್ಣಂಚಿನಲ್ಲಿ ನೀರು ಜಾರುತ್ತದೆ. ಆದರೆ ಒಂದು ಮಾತು ಸತ್ಯ ಇಂಥಹ ನೊಂದ ಮಹಿಳೆಯರ ಶಾಪ ಅವರಿಗೆ ತಟ್ಟದೇ ಇರದು.. ಗ್ರಾಮೀಣ ಪ್ರದೇಶಗಳಲ್ಲಿ ಈ ದಂದೆ ಹವ್ಯಾಸವಾಗಿ ನಿತ್ಯ ನಿರಂತರವಾಗಿ ಯಾರದೇ ಭಯವಿಲ್ಲದೆ ಆರಾಮವಾಗಿ ಮೊಬೈಲ್ ಮುಖಾಂತರವಾಗಿ ರಾಜಾರೋಷವಾಗಿ ನಡೆಯುತ್ತಿದೆ. ಅಂದರೆ ಇದರ ಹಿಂದೆ ಅಧಿಕಾರಿಗಳಷ್ಟೇ ಅಲ್ಲ ಕೆಲವು ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಕೈವಾಡವು ಕೂಡ ಇದೆ..! ಎಂಬುದು ನಾಗರಿಕರ ಅಭಿಪ್ರಾಯವಾಗಿದೆ. ಜಿಲ್ಲಾದಾದ್ಯಂತ ಅದರಲ್ಲಿ ರಾಣೆ ಬೆನ್ನೂರು ಶಹರದ ಮೆಡ್ಲೇರಿ ರೋಡ್, ಕುಮಾರ ಪಟ್ಟಣ, ಹಲಗೇರಿ ಭಾಗಗಳಲ್ಲಿ ಹಾಗೂ ಹಾನಗಲ್ ತಾಲೂಕಿನಲ್ಲಿರುವ ಕೆಲವೊಂದಷ್ಟು ಭಾಗಗಳಲ್ಲಿ ಯಥೇಚ್ಛವಾಗಿ ಎಗ್ಗಿಲ್ಲದೆ ಈ ದಂದೆ ನಡೆಯುತ್ತಿದೆ, ಸ್ಥಳೀಯರೇ ಮಟಕಾ ದಂದೆಯ ವ್ಯಾಪಾರಿಗಳಾಗಿದ್ದಾರೆ..! ಅವರೇ ಏಜೆಂಟರ ಮುಖಾಂತರ ಹಣ ಪಡೆದುಕೊಂಡು ಮಟ್ಕಾ ದಂದೇ ನಡೆಸುತ್ತಿದ್ದಾರೆ ಎಂಬ ಆರೋಪವಿದೆ.. ಇನ್ನು ಮುಂದೆಯಾದರೂ ನಮ್ಮ ಪತ್ರಿಕೆಯ ಈ ವರದಿಯಿಂದಾಗಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುತ್ತಾರೆಯೇ? ಅಥವಾ ಈ ದಂದೆಗೆ ಕಡಿವಾಣ ಹಾಕುತ್ತಾರೆಯೇ..? ಕೂಲಿ ಕಾರ್ಮಿಕರ, ಬಡಜನರ ಬದುಕು ಬಲಿಷ್ಠವಾಗಲು ಅನುಕೂಲ ಮಾಡಿಕೊಡುತ್ತಾರೆಯೇ.!? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ, ಇಲ್ಲದಿದ್ದರೆ ಇದೇ ರೀತಿಯ ವಿಸ್ಕೃತ ವರದಿಯು ಮುಂದುವರೆಯುತ್ತದೆ.. ಮುಂದಿನ ಹಂತಕ್ಕೆ ತಲುಪುತ್ತದೆ ಇದಕ್ಕೆ ಸಂಬಂಧಪಟ್ಟವರು ಶೀಘ್ರ ಕಡಿವಾಣ ಹಾಕಿ ಸಮಾಜದ ಏಳಿಗೆಗಾಗಿ, ಸಮಾಜದ ಉಳಿವಿಗಾಗಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ, ಜಿಲ್ಲೆಯಿಂದ ಪೆಡಲರ್ಗಳ ಮುಖಾಂತರವಾಗಿ ಗೋವಾದಂತಹ ಹೊರ ರಾಜ್ಯಕ್ಕೆ ಹೋಗುತ್ತಿರುವ ಮಟಕಾ ದಂದೆ ಎಂಬ ಹೆಸರಿನ ರಾಜ್ಯದಿಂದ ಅಂತರ್ ರಾಜ್ಯಕ್ಕೆ ಹಣ ಹರಿದು ಹೋಗುವುದನ್ನು ತಡೆಯಬೇಕಾದ ಪರಿಸ್ಥಿತಿ ಈಗ ಅನಿವಾರ್ಯವಾಗಿದೆ

Recently Updated:

ಧರ್ಮದ ಹೊಲದಲ್ಲಿ ಭತ್ತದ ಫಸಲು  ಅನ್ನವೂ ಧರ್ಮ ನೆಲವೂ ಧರ್ಮ’  ಗಂಗಾವತಿಗೆ ಶ್ರೀಗಳ ದಿವ್ಯ ಸಂದೇಶ   ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಗಳ ಆಶೀರ್ವಚನ..ಧರ್ಮದ ಹೊಲದಲ್ಲಿ ಭತ್ತದ ಫಸಲು ಅನ್ನವೂ ಧರ್ಮ ನೆಲವೂ ಧರ್ಮ’ ಗಂಗಾವತಿಗೆ ಶ್ರೀಗಳ ದಿವ್ಯ ಸಂದೇಶ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಗಳ ಆಶೀರ್ವಚನ..
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ  ಉಡುಪಿ ಪ್ರಥಮ ಸ್ಥಾನ  ಕರ್ನಾಟಕದಲ್ಲಿ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು (ಏಪ್ರಿಲ್‌ 9) ಗುರುವಾರ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಉಡುಪಿ ಪ್ರಥಮ ಸ್ಥಾನ ಕರ್ನಾಟಕದಲ್ಲಿ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು (ಏಪ್ರಿಲ್‌ 9) ಗುರುವಾರ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ.
ಭಾರತೀಯ ಜನತಾ ಪಕ್ಷ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿರುವ ಶ್ರೀನಿವಾಸ ಟಿ. ದಾಸಕರಿಯಪ್ಪ  ಬಿಜೆಪಿಯ ರಾಜ್ಯ  ಮೋರ್ಚಾ ಉಪಾಧ್ಯಕ್ಷರು.  ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಪೈಕಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯ ಸಂಘರ್ಷ ತಾಭಾರತೀಯ ಜನತಾ ಪಕ್ಷ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿರುವ ಶ್ರೀನಿವಾಸ ಟಿ. ದಾಸಕರಿಯಪ್ಪ ಬಿಜೆಪಿಯ ರಾಜ್ಯ ಮೋರ್ಚಾ ಉಪಾಧ್ಯಕ್ಷರು. ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಪೈಕಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯ ಸಂಘರ್ಷ ತಾ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿಯ  ಪಂಚಾಯತ್‌ನ ಹತ್ತಿರದಲ್ಲಿ ಮೊಬೈಲ್ ಟವರ್ ಇದ್ದರೂ, ಅಲ್ಲಿನ ನಿವಾಸಿಗಳು ಮಾತ್ರ ತೀವ್ರ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.!  ಇಲ್ಲಿಯ ಗ್ರಾಮಸ್ಥರು ಚುನಾಯಿತ ಜನಪ್ರತಿನಿಧಿಗಳಿಗೆ ದೂರು ನೀಡಿದರು ಜನಪ್ರತಿನಿಧಿಗಳು ಮಾತ್ರ ಮೌನಗೀತೆ ಸಂಗೀತದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಪಂಚಾಯತ್‌ನ ಹತ್ತಿರದಲ್ಲಿ ಮೊಬೈಲ್ ಟವರ್ ಇದ್ದರೂ, ಅಲ್ಲಿನ ನಿವಾಸಿಗಳು ಮಾತ್ರ ತೀವ್ರ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.! ಇಲ್ಲಿಯ ಗ್ರಾಮಸ್ಥರು ಚುನಾಯಿತ ಜನಪ್ರತಿನಿಧಿಗಳಿಗೆ ದೂರು ನೀಡಿದರು ಜನಪ್ರತಿನಿಧಿಗಳು ಮಾತ್ರ ಮೌನಗೀತೆ ಸಂಗೀತದ
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ತಕ್ಷಣ ಸಮಸ್ಯೆ ಪರಿಹರಿಸದಿದ್ದಲ್ಲಿ ಹೋಟೆಲ್ ಮಾಲೀಕರ ಸಂಘಟನೆಗೆ ಬೆಂಬಲ ನೀಡಿ ಬೀದಿಗಿಳಿದು ಪ್ರತಿಭಟನೆ ಮಾಡಲು ಕರೆ ನೀಡಲಾಗುವುದು,ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ತಕ್ಷಣ ಸಮಸ್ಯೆ ಪರಿಹರಿಸದಿದ್ದಲ್ಲಿ ಹೋಟೆಲ್ ಮಾಲೀಕರ ಸಂಘಟನೆಗೆ ಬೆಂಬಲ ನೀಡಿ ಬೀದಿಗಿಳಿದು ಪ್ರತಿಭಟನೆ ಮಾಡಲು ಕರೆ ನೀಡಲಾಗುವುದು,
ದಕ್ಷಿಣ ಕನ್ನಡ ಉಡುಪಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸ್ ರೇ ಯಂತ್ರ ಹಸ್ತಾಂತರದಕ್ಷಿಣ ಕನ್ನಡ ಉಡುಪಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸ್ ರೇ ಯಂತ್ರ ಹಸ್ತಾಂತರ
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿ ಭೇಟಿ ಪತ್ರಕರ್ತರ ಸೌಲಭ್ಯ ಕುರಿತಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿಯಿಂದ ಮುಖ್ಯಮಂತ್ರಿ ಭೇಟಿ.ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿ ಭೇಟಿ ಪತ್ರಕರ್ತರ ಸೌಲಭ್ಯ ಕುರಿತಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಸಮಿತಿಯಿಂದ ಮುಖ್ಯಮಂತ್ರಿ ಭೇಟಿ.
ಪೊಲೀಸಪ್ಪನ ಫೇಸ್ಬುಕ್ ಪಿಕ್ಲಾಟದ ಕಾಟ ತಾಳಲಾರದೆ ವಿಧವೆ ಮಹಿಳೆ ವಾಟ್ಸಾಪ್ನಲ್ಲಿ ಡೆತ್ ನೋಟ್ ಬರೆದಿಷ್ಟು ನೇಣು ಹಾಕಿಕೊಂಡು ಆತ್ಮಹತ್ಯೆ.. ಪೊಲೀಸಪ್ಪನ ಫೇಸ್ಬುಕ್ ಪಿಕ್ಲಾಟದ ಕಾಟ ತಾಳಲಾರದೆ ವಿಧವೆ ಮಹಿಳೆ ವಾಟ್ಸಾಪ್ನಲ್ಲಿ ಡೆತ್ ನೋಟ್ ಬರೆದಿಷ್ಟು ನೇಣು ಹಾಕಿಕೊಂಡು ಆತ್ಮಹತ್ಯೆ..
ಬಾಗಲಕೋಟೆ: ಶಿವಾಜಿ ಮಹಾರಾಜರ ಭಾವ ಚಿತ್ರದ ಮೇಲೆ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ ಮಾಡಿದವರ ಮೇಲೆ ಕೇಸ್:8ಮಂದಿ ಬಂಧನ  ಕಲ್ಲು ತೂರಾಟ ಕೇಸ್; ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ  ಘಟನೆ ಪುಂಡರಿಗೆ ತಕ್ಕ ಶಿಕ್ಷೆ ಇಂದ ಸಿದ್ದರಾಮಯ್ಯ.ಬಾಗಲಕೋಟೆ: ಶಿವಾಜಿ ಮಹಾರಾಜರ ಭಾವ ಚಿತ್ರದ ಮೇಲೆ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ ಮಾಡಿದವರ ಮೇಲೆ ಕೇಸ್:8ಮಂದಿ ಬಂಧನ ಕಲ್ಲು ತೂರಾಟ ಕೇಸ್; ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಘಟನೆ ಪುಂಡರಿಗೆ ತಕ್ಕ ಶಿಕ್ಷೆ ಇಂದ ಸಿದ್ದರಾಮಯ್ಯ.