ಉಡುಪಿ ಜ್ಯುವೆಲ್ಲರಿ ವರ್ಕ್‌ಶಾಪ್‌ಗೆ ಕಳವು ಮಾಡಿದ ಐವರು ಅಂತರರಾಜ್ಯ ಕಳ್ಳರ ಬಂಧನ.

21 Sep 2025
ಕರಾವಳಿ

ಉಡುಪಿ:ನಗರದ ಜ್ಯುವೆಲ್ಲರಿ ವರ್ಕ್‌ಶಾಪ್‌ನಿಂದ ಲಕ್ಷಾಂತರ ಮೌಲ್ಯದ ಚಿನ್ನ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಐವರು ಅಂತರರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.ಮಹಾರಾಷ್ಟ್ರದ ಸೊಲ್ಲಾಪುರದ ಶುಭಂ ತಾನಾಜಿ ಸಾಥೆ (25), ಪ್ರವೀಣ ಅಪ್ಪ ಸಾಥೆ (23), ನಿಲೇಶ ಬಾಪು ಕಸ್ತೂರಿ (19), ಸಾಗರ ದತ್ತಾತ್ರೇಯ ಕಂಡಗಾಲೆ (32), ಬಾಗವ ರೋಹಿತ್‌ ಶ್ರೀಮಂತ್‌(25) ಬಂಧಿತ ಆರೋಪಿಗಳು.ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ನಿಮ್‌ಗಾಂವ್‌ ಎಂಬಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ₹74 ಲಕ್ಷ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ.


ಉಡುಪಿಯ ವಾದಿರಾಜ ಮಾರ್ಗದ ಜ್ಯುವೆಲ್ಲರಿ ವರ್ಕ್‌ಶಾಪ್‌ನ ಶಟರ್‌ ಅನ್ನು ನಕಲಿ ಕೀ ಬಳಸಿ ತೆರೆದಿದ್ದ ಕಳ್ಳರು, ರಿಫೈನರಿ ಮೆಷಿನ್‌ನಲ್ಲಿ ಇಟ್ಟಿದ್ದ ಸುಮಾರು ₹95 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಈ ಕುರಿತು ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಡುಪಿ ನಗರ ಪೊಲೀಸ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌ ವಿ.ಬಡಿಗೇರ ನೇತೃತ್ವದಲ್ಲಿ ಪಿಎಸ್‌ಐ ಭರತೇಶ ಕಂಕಣವಾಡಿ, ಕಾಪು ಠಾಣಾ ಪಿಎಸ್‌ಐ ತೇಜಸ್ವಿ ಟಿ.ಐ., ಕೊಲ್ಲೂರು ಠಾಣಾ ಪಿಎಸ್‌ಐ ವಿನಯಕುಮಾರ್‌ ಕೆ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

Recently Updated:

ಪೆರಡೂರಿನಲ್ಲಿ 94-ಸಿ ಉಲ್ಲಂಘನೆ ಆರೋಪ: ವಾಸದ ಮನೆಗೆ ಮೀಸಲಾದ ಜಮೀನಿನಲ್ಲಿ ವಾಣಿಜ್ಯ ಕಟ್ಟಡ.? ತನಿಖೆಗೆ ಆಗ್ರಹ ಸರ್ಕಾರಿ ಜಮೀನು ಲೂಟಿ ಆರೋಪ ಬಯಲು – ಸಾಕ್ಷ್ಯ ಸಮೇತ ‘ಪಬ್ಲಿಕ್ ಫೈಲ್’ ವಿಶೇಷ ವರದಿ ಶೀಘ್ರದಲ್ಲಿ..ಪೆರಡೂರಿನಲ್ಲಿ 94-ಸಿ ಉಲ್ಲಂಘನೆ ಆರೋಪ: ವಾಸದ ಮನೆಗೆ ಮೀಸಲಾದ ಜಮೀನಿನಲ್ಲಿ ವಾಣಿಜ್ಯ ಕಟ್ಟಡ.? ತನಿಖೆಗೆ ಆಗ್ರಹ ಸರ್ಕಾರಿ ಜಮೀನು ಲೂಟಿ ಆರೋಪ ಬಯಲು – ಸಾಕ್ಷ್ಯ ಸಮೇತ ‘ಪಬ್ಲಿಕ್ ಫೈಲ್’ ವಿಶೇಷ ವರದಿ ಶೀಘ್ರದಲ್ಲಿ..
ಸರ್ಕಾರಿ ಆಸ್ಪತ್ರೆಯಲ್ಲಿ ಗೂಂಡಾಗಿರಿ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ.!ಸರ್ಕಾರಿ ಆಸ್ಪತ್ರೆಯಲ್ಲಿ ಗೂಂಡಾಗಿರಿ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ.!
ಕೋಡಿಬೆಂಗ್ರೆ ಸುವರ್ಣ-ಸಮುದ್ರದ ಸಂಗಮದಲ್ಲಿ ಮೀನುಗಾರರ ಹೊಸ ಆಶಾಕಿರಣ..ಕೋಡಿಬೆಂಗ್ರೆ ಸುವರ್ಣ-ಸಮುದ್ರದ ಸಂಗಮದಲ್ಲಿ ಮೀನುಗಾರರ ಹೊಸ ಆಶಾಕಿರಣ..
ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..
ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..ಹೆಬ್ರಿ: ಮರ ಬಿದ್ದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ, ಅಪಾಯಕಾರಿ ಮರ ತೆರವಿಗೆ ಆಗ್ರಹಿಸಿ ಪ್ರತಿಭಟನೆ..
ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ವಾರ್ಷಿಕೋತ್ಸವ ಸಂಭ್ರಮ.*  ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ ಪ್ರತಿಷ್ಠಿತ ಸ್ವಾತಂತ್ರ್ಯ ಸೇನಾನಿ ಪ್ರಶಸ್ತಿ    *ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿ ಪ್ರಧಾನ.* ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್‌ ಕ್ಲಬ್‌ ವಾರ್ಷಿಕೋತ್ಸವ ಸಂಭ್ರಮ.* ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ ಪ್ರತಿಷ್ಠಿತ ಸ್ವಾತಂತ್ರ್ಯ ಸೇನಾನಿ ಪ್ರಶಸ್ತಿ *ಪಡುಕುಡೂರು ಕಂಬಳ ಮನೆ ಸುಧಾಕರ ಶೆಟ್ಟಿ ಅವರಿಗೆ "ಸ್ವಾತಂತ್ರ್ಯ ಸೇನಾನಿ ಶ್ರೀ ಎಂ.ಡಿ.ಅಧಿಕಾರಿ ಪ್ರಶಸ್ತಿ ಪ್ರಧಾನ.*
ಹೆಬ್ರಿ ಶಿವಪುರದಲ್ಲಿ ತೆರಿಗೆ ಹಣ ನುಂಗಿದ ಗ್ರಾ.ಪಂ ಸಿಬ್ಬಂದಿ.! 7.50 ಲಕ್ಷ ರೂ. ಗೋಲ್‌ಮಾಲ್. ಪಂಚಾಯಿತಿ ಸೇವೆಯಿಂದ ವಜಾ ಮಾಡಿ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲು.ಹೆಬ್ರಿ ಶಿವಪುರದಲ್ಲಿ ತೆರಿಗೆ ಹಣ ನುಂಗಿದ ಗ್ರಾ.ಪಂ ಸಿಬ್ಬಂದಿ.! 7.50 ಲಕ್ಷ ರೂ. ಗೋಲ್‌ಮಾಲ್. ಪಂಚಾಯಿತಿ ಸೇವೆಯಿಂದ ವಜಾ ಮಾಡಿ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲು.
ಮನ್ವಿತ್ ಧೈರ್ಯಕ್ಕೆ ಡಿಕೆ ಶಿವಕುಮಾರ್ ಮೆಚ್ಚುಗೆ ಸಮಯಪ್ರಜ್ಞೆಯಿಂದ ದಾಸೋಹ ಸಿಬ್ಬಂದಿ ಜೀವ ರಕ್ಷಿಸಿದ ಬಂಟ್ವಾಳ ಬಾಲಕ..ಮನ್ವಿತ್ ಧೈರ್ಯಕ್ಕೆ ಡಿಕೆ ಶಿವಕುಮಾರ್ ಮೆಚ್ಚುಗೆ ಸಮಯಪ್ರಜ್ಞೆಯಿಂದ ದಾಸೋಹ ಸಿಬ್ಬಂದಿ ಜೀವ ರಕ್ಷಿಸಿದ ಬಂಟ್ವಾಳ ಬಾಲಕ..
ಹೆಬ್ರಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಯಲು: ವಿಡಿಯೋ ವೈರಲ್, ಸ್ಥಳಕ್ಕೆ ಧಾವಿಸಿದ ಹೋರಾಟಗಾರರು. ಯಾವೂದೇ ಸಮಸ್ಯೆಗಳಿಲ್ಲ ಎಂದ ಡಾ. ಸಂತೋಷ್ ಕುಮಾರ್. ಹೆಬ್ರಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಯಲು: ವಿಡಿಯೋ ವೈರಲ್, ಸ್ಥಳಕ್ಕೆ ಧಾವಿಸಿದ ಹೋರಾಟಗಾರರು. ಯಾವೂದೇ ಸಮಸ್ಯೆಗಳಿಲ್ಲ ಎಂದ ಡಾ. ಸಂತೋಷ್ ಕುಮಾರ್.