ಕಾರ್ಕಳದ ಕಾಂಗ್ರೆಸ್‌ ನಾಯಕ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಗುರುವಾರ ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ ೧೯ರಿಂದ ೨೧ ತನಕ ನಡೆಯುವ ಏಕಪವಿತ್ರ ಶ್ರೀಮನ್ನಾಗಮಂಡಲದ ಸಿದ್ಧತೆಯನ್ನು ವೀಕ್ಷಿಸಿ ಮಾತನಾಡಿದರು.

13 Feb 2026
ಕರಾವಳಿ

ಗೋಧಾಮದಿಂದ ಮುನಿಯಾಲಿಗೆ ಜಾಗತಿಕ ಮಟ್ಟದಲ್ಲಿ ಹೆಸರು : ಉದಯ ಕುಮಾರ್‌ ಶೆಟ್ಟಿ.

" ಸರ್ವರೂ ಕೈಜೋಡಿಸಿ ಶ್ರೀಮನ್ನಾಗಮಂಡಲ ಯಶಸ್ವಿಗೊಳಿಸಿ"



ಮುನಿಯಾಲು : ಯುವಸಮುದಾಯವನ್ನು ಕೃಷಿಯತ್ತ ಆಕರ್ಷಿಸಲು ವಿಶೇಷ ಯೋಚನೆ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶ ಮುನಿಯಾಲಿನಲ್ಲಿ ಸಂಜೀವಿನಿ ಗೋಧಾಮವನ್ನು ಕೃಷಿ ಸಂಶೋಧನಾ ಕೇಂದ್ರದಂತೆ ನಿರ್ಮಿಸಿದ್ದಾರೆ. ಆ ಮೂಲಕ ಕೈಗಾರಿಕೋಧ್ಯಮಿಯೊಬ್ಬರು ಕೃಷಿಗೆ ಆದ್ಯತೆ ನೀಡುತ್ತಿರುವುದು ಮಹಾನ್‌ ಕಾರ್ಯ. ಗೋಧಾಮದ ಮೂಲಕ ಮುನಿಯಾಲಿನ ಹೆಸರು ಜಾಗತಿಕಮಟ್ಟದಲ್ಲಿ ರಾರಾಜಿಸುವಂತೆ ಆಗಿದೆ ಎಂದು ಕಾರ್ಕಳದ ಕಾಂಗ್ರೆಸ್‌ ನಾಯಕ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಹೇಳಿದರು.

ಅವರು ಗುರುವಾರ ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ ೧೯ರಿಂದ ೨೧ ತನಕ ನಡೆಯುವ ಏಕಪವಿತ್ರ ಶ್ರೀಮನ್ನಾಗಮಂಡಲದ ಸಿದ್ಧತೆಯನ್ನು ವೀಕ್ಷಿಸಿ ಮಾತನಾಡಿದರು.

ರೈತರು, ಕೃಷಿ ಮತ್ತು ಯುವಸಮುದಾಯವನ್ನು ಕೃಷಿಯತ್ತ ಮರಳಿ ತಂದು ಬದುಕು ಕಟ್ಟಲು ಪ್ರೇರಣೆ ನೀಡುವ ಮಹಾಸಂಕಲ್ಪದಿಂದ ನಡೆಯುವ ಪಾರಂಪರಿಕ ಶ್ರೀಮನ್ನಾಗಮಂಡಲವನ್ನು ನಾವೆಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ಎಂದು ಉದಯ ಕುಮಾರ್‌ ಶೆಟ್ಟಿ ಹೇಳಿದರು.

ಮುನಿಯಾಲು ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್‌, ಸವಿತಾ ರಾಮಕೃಷ್ಣ ಆಚಾರ್‌, ನಮಿತಾ ಉದಯ ಕುಮಾರ್‌ ಶೆಟ್ಟಿ, ಶ್ರೀಕಾಂತ್‌ ಶೆಟ್ಟಿ ಕಾರ್ಕಳ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುನಿಯಾಲು ಗೋಪಿನಾಥ ಭಟ್‌, ಪಡುಕುಡೂರು ಪ್ರಸನ್ನ ಶೆಟ್ಟಿ, ಭಾರವಿ ಶೆಟ್ಟಿ, ಕಡ್ತಲ ಸುನೀಲ್‌ ಹೆಗ್ಡೆ, ಕುಕ್ಕುಜೆ ಸಂಪತ್‌ ಪೂಜಾರಿ, ಎಳ್ಳಾರೆ ನಾರಾಯಣ ಆಚಾರ್‌ ಸಹಿತ ವಿವಿಧ ಪ್ರಮುಖರು ಉಪಸ್ಥಿತರಿದ್ದರು.

Recently Updated:

ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಗಳ ಸಮಗ್ರ ಪ್ರಗತಿಗೆ ವೇಗ : ಯಶ್ ಪಾಲ್ ಸುವರ್ಣ.ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಗಳ ಸಮಗ್ರ ಪ್ರಗತಿಗೆ ವೇಗ : ಯಶ್ ಪಾಲ್ ಸುವರ್ಣ.
ಅಂತರ್ ಜಿಲ್ಲಾ ಭಜನಾ ಸ್ಪರ್ಧೆಯ ಅಂಗವಾಗಿ  ಶ್ರೀ ವಡಭಾಂಡೇಶ್ವರ ಬಲರಾಮ ದೇವತಾನದಿಂದ ಆನಂದ ಶರಧಿಗೆ ಭವ್ಯ ದೀಪದ ಶೋಭಾಯಾತ್ರೆ. ಅಂತರ್ ಜಿಲ್ಲಾ ಭಜನಾ ಸ್ಪರ್ಧೆಯ ಅಂಗವಾಗಿ ಶ್ರೀ ವಡಭಾಂಡೇಶ್ವರ ಬಲರಾಮ ದೇವತಾನದಿಂದ ಆನಂದ ಶರಧಿಗೆ ಭವ್ಯ ದೀಪದ ಶೋಭಾಯಾತ್ರೆ.
ಕತ್ತಲಲ್ಲಿ ಕಲ್ಮಶ: ಕರಾವಳಿಯ ಕಣ್ಣೀರ ಕಥೆ"* ಕಪ್ಪು, ಕೆಂಪು, ರಾಸಾಯನಿಕ ವಾಸನೆಯ ನೀರನ್ನು ನೇರವಾಗಿ ಅರಬ್ಬಿ ಸಮುದ್ರಕ್ಕೆ ಸುರಿಯುತ್ತಿವೆ.!!ಕತ್ತಲಲ್ಲಿ ಕಲ್ಮಶ: ಕರಾವಳಿಯ ಕಣ್ಣೀರ ಕಥೆ"* ಕಪ್ಪು, ಕೆಂಪು, ರಾಸಾಯನಿಕ ವಾಸನೆಯ ನೀರನ್ನು ನೇರವಾಗಿ ಅರಬ್ಬಿ ಸಮುದ್ರಕ್ಕೆ ಸುರಿಯುತ್ತಿವೆ.!!
ಕಾರ್ಕಳ: ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿದ ಐವರು ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳ ಬಂಧನಕಾರ್ಕಳ: ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿದ ಐವರು ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳ ಬಂಧನ
ಕೋಟ ಆನಂದ್ ಕುಂದರ್ ಮಾಲೀಕತ್ವದ ಜನತಾ ಫಿಶ್ ಮೀಲ್ ಕಾರ್ಮಿಕರಿಂದ  ತನ್ನ ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ, 'ಸ್ವಚ್ಛ ಭಾರತ' ಅಭಿಯಾನಕ್ಕೆ ಭಾರಿ ಬೆಂಬಲ ನೀಡುತ್ತಿದೆ...ಕೋಟ ಆನಂದ್ ಕುಂದರ್ ಮಾಲೀಕತ್ವದ ಜನತಾ ಫಿಶ್ ಮೀಲ್ ಕಾರ್ಮಿಕರಿಂದ ತನ್ನ ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ, 'ಸ್ವಚ್ಛ ಭಾರತ' ಅಭಿಯಾನಕ್ಕೆ ಭಾರಿ ಬೆಂಬಲ ನೀಡುತ್ತಿದೆ...
ನಿರ್ದಿಷ್ಟ ಸಮಯದಲ್ಲಿ, ಸಾಂದರ್ಭಿಕವಾಗಿ ಆರೋಗ್ಯ ತಪಾಸಣೆ ಅವಶ್ಯ - ಸುನಿಲ್‌ ಕುಮಾರ್‌.ನಿರ್ದಿಷ್ಟ ಸಮಯದಲ್ಲಿ, ಸಾಂದರ್ಭಿಕವಾಗಿ ಆರೋಗ್ಯ ತಪಾಸಣೆ ಅವಶ್ಯ - ಸುನಿಲ್‌ ಕುಮಾರ್‌.
ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳು ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಪುರಾವೆ ದೊರೆತಿಲ್ಲ.ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳು ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಪುರಾವೆ ದೊರೆತಿಲ್ಲ.
ಮಂಗಳೂರು: ಗೃಹಮಿಂಗ್ ವಿಧಾನ ಬಳಸಿ ಆರೋಪಿ 9 ವರ್ಷದ  ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ  ವಿಕೃತಕಾಮಿಯ ಬಂಧನ.ಮಂಗಳೂರು: ಗೃಹಮಿಂಗ್ ವಿಧಾನ ಬಳಸಿ ಆರೋಪಿ 9 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಕೃತಕಾಮಿಯ ಬಂಧನ.
ಮೂಡುಬಿದ್ರೆ ಮಹಿಳೆಯರ ಜೊತೆಗೆ ದುರ್ನಡತೆ ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಅಮಾನತು. ಇನ್ಸ್‌ಪೆಕ್ಟರ್ ವಿರುದ್ಧ ಧ್ವನಿ ಎತ್ತಿದ ಮತ್ತೊಬ್ಬ ಮಹಿಳೆ ಅವಿತಾ ಮಿನೆಜಸ್.ಮೂಡುಬಿದ್ರೆ ಮಹಿಳೆಯರ ಜೊತೆಗೆ ದುರ್ನಡತೆ ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಅಮಾನತು. ಇನ್ಸ್‌ಪೆಕ್ಟರ್ ವಿರುದ್ಧ ಧ್ವನಿ ಎತ್ತಿದ ಮತ್ತೊಬ್ಬ ಮಹಿಳೆ ಅವಿತಾ ಮಿನೆಜಸ್.