ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್ಕೇಪ್..!?

03 Apr 2025
ರಾಜ್ಯ

ಸುಮಾರು 4 ಕೋಟಿ ಬೆಲೆ ಬಾಳುವ ವಿವಾದಿತ ಮನೆಯೊಂದನ್ನು ತನ್ನ ಸಂಬಂಧಿಕರ ಹೆಸರಿಗೆ ಬರೆದುಕೊಡುವಂತೆ ನಾಗರಭಾವಿ ನಿವಾಸಿಯೊಬ್ಬರಿಗೆ ನಿರಂತರವಾಗಿ ಕಿರುಕುಳ ನೀಡಿ, ಅವರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ, ಹೆದರಿಸಿ, ಬಲವಂತವಾಗಿ ಅವರ ಆಸ್ತಿ ಲಪಟಾಯಿಸುವ ಡೀಲ್ ನಡೆಸುವ ವೇಳೆ ಲೋಕಾಯುಕ್ತ ರೇಡ್ ಆಗಿ ಆಪಾದಿತ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕುಮಾರ್ A.V.ಎಸ್ಕೇಪ್..!




ಎಂದಿನಂತೆ ಪೊಲೀಸ್ ಮೇಲಾಧಿಕಾರಿಗಳ ಅಜ್ಞಾಪಾಲಕರಾಗಿ ಮೇಲಧಿಕಾರಿಗಳು ಹೇಳುವ ಕಾನೂನು/ಕಾನೂನುಬಾಹಿರ ಕೆಲಸಗಳನ್ನು ಹಿಂದೆಮುಂದೆ ನೋಡದೆ ಮಾಡುವ ಕಾನ್ಸ್ಟೇಬಲ್’ಗಳು ಲೋಕಾಯುಕ್ತ ಪೊಲೀಸರ ಅತಿಥಿಗಳಾಗಿದ್ದಾರೆ.


ಇಲ್ಲಿ ಶಾಕಿಂಗ್ ವಿಚಾರ ಏನೆಂದರೆ ಪೊಲೀಸರಿಗೆ ತಮ್ಮ ಅಸಾಧಾರಣ ಸೇವೆ ಮತ್ತು ಧೈರ್ಯಕ್ಕೆಂದು ನೀಡಲಾಗುವ ಮುಖ್ಯಮಂತ್ರಿ ಪದಕಕ್ಕೆ ಈ ರೌಡಿ ಪೊಲೀಸ್ ಆಯ್ಕೆಯಾಗಿದ್ದನಂತೆ. ಈ ಘಟನೆ ನಡೆಯದೇ ಹೋಗಿದ್ದರೆ ಸಾಹೇಬರು ಗರಿಗರಿ ಖಾಕಿ ಧರಿಸಿ ಮುಖ್ಯಮಂತ್ರಿಗಳಿಂದ ಇಂದು ಪದಕ ಪಡೆದುಕೊಳ್ಳುತ್ತಿದ್ದರು.


ಅಂದಹಾಗೆ ಸರ್ಕಾರ ಕೊಡುವ ಪದಕಗಳು ಮತ್ತು ಪ್ರಶಸ್ತಿಗಳು ಮಾರಾಟವಾಗುತ್ತಿವೆಯಾ?


ಈ ರೀತಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮಗಳಲ್ಲಿ ತೊಡಗಿ ನೂರಾರು ಕೋಟಿ ಆಸ್ತಿ ಮಾಡಿರುವ ಮತ್ತು ಹಲವು ಸಂದರ್ಭಗಳಲ್ಲಿ ತಮ್ಮ ಕಾನೂನುಬಾಹಿರ ಕೃತ್ಯಗಳ ಕಾರಣಕ್ಕೆ ಲೋಕಾಯುಕ್ತ ರೇಡ್ ಆಗಿ ತನಿಖೆ ಎದುರಿಸುತ್ತಿರುವ ಮತ್ತು ಇಲಾಖೆಯಿಂದ ಶಿಸ್ತುಕ್ರಮಕ್ಕೆ ತುತ್ತಾಗಿರುವ ಇಂತಹ ಹಲವು ಜನರಿಗೆ ಸರ್ಕಾರ ಪದಕ ಮತ್ತು ಪ್ರಶಸ್ತಿಗಳನ್ನು ನೀಡುತ್ತಿರುವುದರಿಂದ ನನಗೆ ಸರ್ಕಾರ ಕೊಡುವ ಪ್ರಶಸ್ತಿ ಮತ್ತು ಪದಕಗಳು ಮಾರಾಟವಾಗುತ್ತಿವೆಯಾ ಎಂಬ ಅನುಮಾನ ಮೂಡುತ್ತಿದೆ.



ಒಟ್ಟಾರೆ ಪೊಲೀಸ್ ಇಲಾಖೆ ಕೆಟ್ಟಿ ಕೆರಹಿಡಿದೆದೆ. ಯುನಿಫಾರ್ಮ್ ಧರಿಸಿರುವ ಬಹುತೇಕ ಪೊಲೀಸರು ಪರವಾನಗಿ ಪಡೆದ ರೌಡಿಗಳಂತೆ ಲೂಟಿ ಮಾಡುತ್ತಿದ್ದಾರೆ.

ಸರಿಪಡಿಸಬೇಕಿದ್ದ ಜನಪ್ರತಿನಿಧಿಗಳು ಇಂತಹ ಕಳ್ಳ ಪೊಲೀಸರನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಲೂಟಿಯಲ್ಲಿ ತೊಡಗಿದ್ದಾರೆ. ಇನ್ನು ಇಷ್ಟೆಲ್ಲಾ ವಿಚಾರಗಳು ಗೊತ್ತಿದ್ದರೂ ನಮ್ಮ ಮಹಾಜನತೆ ಇಂತಹ ಲೂಟಿಕೋರ ವ್ಯವಸ್ಥೆಯನ್ನು ನಿರ್ಮಿಸಿ ಪೋಷಿಸುತ್ತಿರುವ ಕಳ್ಳ-ಖದೀಮ ಜನರನ್ನೆ ತಮ್ಮ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿರುವುದಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ.


Recently Updated:

ಕುಂದಾಪುರದಲ್ಲಿ  ಸತ್ಯ ಬರೆದಿದ್ದಕ್ಕೆ ಹಲ್ಲೆ ಕನ್ನಡಪ್ರಭ ವರದಿಗಾರನ ಮೇಲೆ ಸರ್ಕಾರಿ  ವೈದ್ಯನ ಅಟ್ಟಹಾಸ.!   ಹಲ್ಲೆ ಮಾಡಿದ್ದ ಸರ್ಕಾರಿ ವೈದ್ಯ ಡಾ. ಮಹೇಂದ್ರ ಶೆಟ್ಟಿ ಸಸ್ಪೆಂಡ್..ಕುಂದಾಪುರದಲ್ಲಿ ಸತ್ಯ ಬರೆದಿದ್ದಕ್ಕೆ ಹಲ್ಲೆ ಕನ್ನಡಪ್ರಭ ವರದಿಗಾರನ ಮೇಲೆ ಸರ್ಕಾರಿ ವೈದ್ಯನ ಅಟ್ಟಹಾಸ.! ಹಲ್ಲೆ ಮಾಡಿದ್ದ ಸರ್ಕಾರಿ ವೈದ್ಯ ಡಾ. ಮಹೇಂದ್ರ ಶೆಟ್ಟಿ ಸಸ್ಪೆಂಡ್..
ಗುಟ್ಕಾ-ಪಾನ್ ಮಸಾಲಾ ನಿಷೇಧವನ್ನು ಎರಡೇ ದಿನಕ್ಕೆ ಹಿಂಪಡೆದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್..ಗುಟ್ಕಾ-ಪಾನ್ ಮಸಾಲಾ ನಿಷೇಧವನ್ನು ಎರಡೇ ದಿನಕ್ಕೆ ಹಿಂಪಡೆದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್..
ಕೊನೆ ಕ್ಷಣದಲ್ಲಿ ಕೈ ಕೊಟ್ಟ ಹೈಕಮಾಂಡ್  ಮಂಕಾಳ್ ಔಟ್, ಎಸ್ ಎಸ್ ಮಲ್ಲಿಕಾರ್ಜುನ ಇನ್.!!  ಹೈಕಮಾಂಡ್ ರಿಂದ ಬಂದಿದ್ದ ಪಟ್ಟಿಯಲ್ಲಿ ಒಂದು ಹೆಸರು ಬದಲಾವಣೆಯಾಗಿದ್ದು, ಮಂಕಾಳ್ ವೈದ್ಯ ಅವರ ಹೆಸರಿನ ಬದಲಾಗಿ ದಾವಣಗೆರೆಯ ಎಸ್ ಎಸ್ ಮಲ್ಲಿಕಾರ್ಜುನ ಅವರ ಹೆಸರನ್ನು ಸೇರಿಸಲಾಗಿದೆ. ಇದೀಗ ಸಚಿವಸ್ಥಾನ ದೊರೆತ ಖುಷಿಯಕೊನೆ ಕ್ಷಣದಲ್ಲಿ ಕೈ ಕೊಟ್ಟ ಹೈಕಮಾಂಡ್ ಮಂಕಾಳ್ ಔಟ್, ಎಸ್ ಎಸ್ ಮಲ್ಲಿಕಾರ್ಜುನ ಇನ್.!! ಹೈಕಮಾಂಡ್ ರಿಂದ ಬಂದಿದ್ದ ಪಟ್ಟಿಯಲ್ಲಿ ಒಂದು ಹೆಸರು ಬದಲಾವಣೆಯಾಗಿದ್ದು, ಮಂಕಾಳ್ ವೈದ್ಯ ಅವರ ಹೆಸರಿನ ಬದಲಾಗಿ ದಾವಣಗೆರೆಯ ಎಸ್ ಎಸ್ ಮಲ್ಲಿಕಾರ್ಜುನ ಅವರ ಹೆಸರನ್ನು ಸೇರಿಸಲಾಗಿದೆ. ಇದೀಗ ಸಚಿವಸ್ಥಾನ ದೊರೆತ ಖುಷಿಯ
ಬೆಂಗಳೂರು:ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಬೇಳೂರು ಗೋಪಾಲಕೃಷ್ಣ.! ರಾಜ್ಯದಲ್ಲಿ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಅಂತಿಮಗೊಂಡಿದ್ದು, ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ರಾಜಭವನದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಂಗಳೂರು:ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಬೇಳೂರು ಗೋಪಾಲಕೃಷ್ಣ.! ರಾಜ್ಯದಲ್ಲಿ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಅಂತಿಮಗೊಂಡಿದ್ದು, ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ರಾಜಭವನದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬೆಂಗಳೂರು, ಆ.3- ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಹೈಕಮಾಂಡ್‌ ಸಮತಿಸಿದ್ದು, ಇಂದು ಸಂಜೆ 4.05 ನಿಮಿಷಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್‌‍ ಹೈಕಮಾಂಡ್‌ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆಗಳ ಸೃಷ್ಟಿಗೆ ನಿರಾಕರಿಸಿದೆ. ಸಂಪುಟದಲ್ಲಿ ಖಾಲಿಯಿರುವ 20 ಸ್ಥಾನಗಳಿಗಬೆಂಗಳೂರು, ಆ.3- ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಹೈಕಮಾಂಡ್‌ ಸಮತಿಸಿದ್ದು, ಇಂದು ಸಂಜೆ 4.05 ನಿಮಿಷಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್‌‍ ಹೈಕಮಾಂಡ್‌ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆಗಳ ಸೃಷ್ಟಿಗೆ ನಿರಾಕರಿಸಿದೆ. ಸಂಪುಟದಲ್ಲಿ ಖಾಲಿಯಿರುವ 20 ಸ್ಥಾನಗಳಿಗ
ಧರ್ಮದ ಹೊಲದಲ್ಲಿ ಭತ್ತದ ಫಸಲು  ಅನ್ನವೂ ಧರ್ಮ ನೆಲವೂ ಧರ್ಮ’  ಗಂಗಾವತಿಗೆ ಶ್ರೀಗಳ ದಿವ್ಯ ಸಂದೇಶ   ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಗಳ ಆಶೀರ್ವಚನ..ಧರ್ಮದ ಹೊಲದಲ್ಲಿ ಭತ್ತದ ಫಸಲು ಅನ್ನವೂ ಧರ್ಮ ನೆಲವೂ ಧರ್ಮ’ ಗಂಗಾವತಿಗೆ ಶ್ರೀಗಳ ದಿವ್ಯ ಸಂದೇಶ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಗಳ ಆಶೀರ್ವಚನ..
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ  ಉಡುಪಿ ಪ್ರಥಮ ಸ್ಥಾನ  ಕರ್ನಾಟಕದಲ್ಲಿ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು (ಏಪ್ರಿಲ್‌ 9) ಗುರುವಾರ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಉಡುಪಿ ಪ್ರಥಮ ಸ್ಥಾನ ಕರ್ನಾಟಕದಲ್ಲಿ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು (ಏಪ್ರಿಲ್‌ 9) ಗುರುವಾರ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ.
ಭಾರತೀಯ ಜನತಾ ಪಕ್ಷ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿರುವ ಶ್ರೀನಿವಾಸ ಟಿ. ದಾಸಕರಿಯಪ್ಪ  ಬಿಜೆಪಿಯ ರಾಜ್ಯ  ಮೋರ್ಚಾ ಉಪಾಧ್ಯಕ್ಷರು.  ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಪೈಕಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯ ಸಂಘರ್ಷ ತಾಭಾರತೀಯ ಜನತಾ ಪಕ್ಷ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿರುವ ಶ್ರೀನಿವಾಸ ಟಿ. ದಾಸಕರಿಯಪ್ಪ ಬಿಜೆಪಿಯ ರಾಜ್ಯ ಮೋರ್ಚಾ ಉಪಾಧ್ಯಕ್ಷರು. ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಪೈಕಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯ ಸಂಘರ್ಷ ತಾ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿಯ  ಪಂಚಾಯತ್‌ನ ಹತ್ತಿರದಲ್ಲಿ ಮೊಬೈಲ್ ಟವರ್ ಇದ್ದರೂ, ಅಲ್ಲಿನ ನಿವಾಸಿಗಳು ಮಾತ್ರ ತೀವ್ರ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.!  ಇಲ್ಲಿಯ ಗ್ರಾಮಸ್ಥರು ಚುನಾಯಿತ ಜನಪ್ರತಿನಿಧಿಗಳಿಗೆ ದೂರು ನೀಡಿದರು ಜನಪ್ರತಿನಿಧಿಗಳು ಮಾತ್ರ ಮೌನಗೀತೆ ಸಂಗೀತದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಪಂಚಾಯತ್‌ನ ಹತ್ತಿರದಲ್ಲಿ ಮೊಬೈಲ್ ಟವರ್ ಇದ್ದರೂ, ಅಲ್ಲಿನ ನಿವಾಸಿಗಳು ಮಾತ್ರ ತೀವ್ರ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.! ಇಲ್ಲಿಯ ಗ್ರಾಮಸ್ಥರು ಚುನಾಯಿತ ಜನಪ್ರತಿನಿಧಿಗಳಿಗೆ ದೂರು ನೀಡಿದರು ಜನಪ್ರತಿನಿಧಿಗಳು ಮಾತ್ರ ಮೌನಗೀತೆ ಸಂಗೀತದ